More

    ಸಮುದಾಯದ ಪ್ರಗತಿಗೆ ಶಿಕ್ಷಣವೇ ಪ್ರಮುಖ ಅಸ್ತ್ರ

    ಹನುಮಸಾಗರ: ಒಂದು ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಹೊಂದಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೋಡಿಸಬೇಕು ಎಂದು ಗೋಪ್ಪಲಪಲ್ಲಿ ವಾಲ್ಮೀಕಿ ಆಶ್ರಯದ ವರದಾನೇಶ್ವರ ಸ್ವಾಮೀಜಿ ಸಲಹೆ ನೀಡಿದರು.

    ಸಮೀಪದ ಬಾದಿಮನಾಳ ಗ್ರಾಮದಲ್ಲಿ ಸೋಮವಾರ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 6 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅನೇಕರು ಸಾಲ ಮಾಡಿ ಮದುವೆ ಮಾಡಿಕೊಂಡು ಜೀವನಪೂರ್ತಿ ಸಂಕಷ್ಟ ಎದುರಿಸುತ್ತಿರುತ್ತಾರೆ. ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಿದ್ದು, ಅನೇಕ ಮಹನೀಯರ ಆಶೀರ್ವಾದ ನಿಮಗೆ ದೊರೆಯುತ್ತದೆ. ಸತಿ-ಪತಿಗಳು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಸಂಸಾರ ಸುಖಕರವಾಗಿ ಸಾಗುತ್ತದೆ ಎಂದರು.

    ನಿವೃತ್ತ ಪಾಚಾರ್ಯ ಕೆ.ಬಿ.ತಳವಾರ ಮಾತನಾಡಿ, ರಾಮಾಯಣ ವಿಶ್ವದಲ್ಲಿಯೇ ಒಂದು ಶ್ರೇಷ್ಠ ಗ್ರಂಥ. ನಿಮ್ಮ ಮಕ್ಕಳಿಗೆ ರಾಮಾಯಣ ಓದಲು ಹೇಳಿ. ರಾಮಾಯಣ ಓದುವುದರಿಂದ ಮಕ್ಕಳಲ್ಲಿ ಸಂಸ್ಕಾರ ಬರುತ್ತದೆ. ಪಾಲಕರು ಮಕ್ಕಳ ಮೇಲೆ ಸದಾ ಗಮನ ಹರಿಸಬೇಕು. ಅವರು ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರೆಯೇ ಇಲ್ಲವೆ ಎಂದು ತಿಳಿಯಬೇಕೆಂದರು.

    ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಮುದಿಸಂಗಯ್ಯ ಸಾರಾಂಗಮಠ, ಗ್ರಾಪಂ ಅಧ್ಯಕ್ಷ ಹನಮಂತ ಮೂಗನೂರು, ಉಪಾಧ್ಯಕ್ಷ ಮಹಾಂತೇಶ ಮಾದರ, ತಾಪಂ ಮಾಜಿ ಸದಸ್ಯೆ ಮಂಜುಳಾ ಎಂ.ಗ್ವಾತಗಿ, ಗ್ರಾಪಂ ಸದಸ್ಯರಾದ ಅಶೋಕ ವಾಲಿಕಾರ, ಮಹಾಂತೇಶ ಪೂಜಾರ, ಹನಮಮ್ಮ ಗೌಡರ, ನಿವೃತ್ತ ಪ್ರಾಚಾರ್ಯ ಕಳಕಪ್ಪ ತಳವಾರ, ಮುಖಂಡರಾದ ಮಹಾಂತೇಶ ಗಣವರಿ, ಹನಮಗೌಡ ಗೌಡ್ರ, ಗರೀಮ್‌ಸಾಬ್ ವಾಲಿಕಾರ, ನಿಂಗಪ್ಪ ತುಮರಿಕೊಪ್ಪ, ಬಸಪ್ಪ ನಸಗುನ್ನಿ, ಯಲ್ಲಪ್ಪ ಮಾದರ, ಮಾಬುಸಾಬ್, ವೆಂಕಟೇಶ ವಾಲಿಕಾರ, ಭೀಮಣ್ಣ ತಳವಾರ, ರವಿ ಪರಸಾಪೂರ, ಹುಲ್ಲಪ್ಪ ಶಿಳ್ಳಿ ಇತರರಿದ್ದರು.

    ಅಂಗನವಾಡಿ ಮೆಲ್ವೀಚಾರಕಿ ಶಕುಂತಲಾ ಪೂಜಾರ ಸ್ಥಳಕ್ಕೆ ಆಗಮಿಸಿ, ವಧುವರರ ದಾಖಲೆಗಳನ್ನು ಪರಿಶೀಲಿಸಿದರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಪರಸಾಪೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts