More

    ಮರಳು ಮಾಫಿಯಾಗೆ ಬಲಿಯಾದ ಗ್ರಾಮ ಆಡಳಿತಾಧಿಕಾರಿ!

    ತಮಿಳುನಾಡು: ಮರಳು ಮಾಫಿಯಾದವರು ಮಂಗಳವಾರ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ತಾಲೂಕಿನ ಮುರಪ್ಪನಾಡುನಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷದ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಅವರನ್ನು ಮಂಗಳವಾರ ಕಡಿದು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಸೆಂಥಿಲ್ ರಾಜ್ ತಿಳಿಸಿದ್ದಾರೆ.

    ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಸೆಂಥಿಲ್ ರಾಜ್, ಮೃತರನ್ನು ವೈ ಲೂರ್ತು ಫ್ರಾನ್ಸಿಸ್ ಎಂದು ಗುರುತಿಸಲಾಗಿದ್ದು, ಸುಮಾರು ಒಂದುವರೆ ವರ್ಷಗಳಿಂದ ಮುರಪ್ಪನಾಡು ಗ್ರಾಮದ ವಿಎಒ ಆಗಿ ಕಾರ್ಯನಿರ್ವಹಿಸುತ್ತಿದ್ದರು.

    ಇದನ್ನೂ ಓದಿ: ಅಕ್ರಮ ಮರಳು ಮಾಫಿಯಾ ಸ್ಥಳಕ್ಕೆ ಎಸಿ ಭೇಟಿ

    ಮರಳು ಮಾಫಿಯಾದವರು ಕುಡುಗೋಲಿನಿಂದ ಕೊಚ್ಚಿ ಕೊಂದರು!

    “ಮಧ್ಯಾಹ್ನ 12:30 ರ ಸುಮಾರಿಗೆ ಇಬ್ಬರು ಕುಡುಗೋಲುಗಳೊಂದಿಗೆ ಕಚೇರಿಗೆ ಆಗಮಿಸಿ ಅವರನ್ನು ಕೊಂದಿದ್ದಾರೆ. ಅವರ ಕೈ ಮತ್ತು ತಲೆಯ ಮೇಲೆ ಹಲವಾರು ಗಾಯಗಳಾಗಿವೆ. ದಾಳಿಕೋರರು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು ತಕ್ಷಣ ಮೇಲೆ VAOರನ್ನು ತಿರುನಲ್ವೇಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರು ಎಲ್ಲ ಪ್ರಯತ್ನ ಮಾಡಿದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರು ಪ್ರಾಮಾಣಿಕ ಮತ್ತು ಧೈರ್ಯಶಾಲಿ ಅಧಿಕಾರಿಯಾಗಿದ್ದರು ಎಂದು ಜಿಲ್ಲಾಧಿಕಾರಿ ಹೇಳಿದರು.

    ಇದನ್ನೂ ಓದಿ: ಮರಳು ತುಂಬಿದ ಟ್ಯಾಕ್ಟರ್ ಪಲ್ಟಿ, ಓರ್ವ ಸ್ಥಳದಲ್ಲಿಯೇ ಸಾವು….ಅಕ್ರಮ ದಂಧೆಗೆ ಅಮಾಯಕ ಬಲಿ?

    ಒಂದು ಕೋಟಿ ರೂ. ಪರಿಹಾರ ನೀಡಿದ ಎಂ.ಕೆ ಸ್ಟಾಲಿನ್!

    ಇಬ್ಬರು ಹಲ್ಲೆಕೋರರ ಪೈಕಿ ರಾಮಸುಬ್ಬು ಎಂಬಾತನನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಂತೆ ವಿಎಒ ಫ್ರಾನ್ಸಿಸ್ ಅವರು ರಾಮಸುಬ್ಬು ವಿರುದ್ಧ ಮರಳು ಅಕ್ರಮ ಸಾಗಣೆ ಆರೋಪದ ಮೇಲೆ ದೂರು ದಾಖಲಿಸಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ. ಸೇಡಿನ ಕ್ರಮದಲ್ಲಿ ರಾಮಸುಬ್ಬು ಮತ್ತೊಬ್ಬ ವ್ಯಕ್ತಿಯೊಂದಿಗೆ ವಿಎಒ ಕಚೇರಿಗೆ ಆಗಮಿಸಿ ಹತ್ಯೆಗೈದಿದ್ದಾರೆ ಎಂದು ಸಿಎಂ ತಿಳಿಸಿದರು.

    ಮೃತರ ಕುಟುಂಬಕ್ಕೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ ಸ್ಟಾಲಿನ್, ರಾಜ್ಯ ಸರ್ಕಾರವು ಫ್ರಾನ್ಸಿಸ್ ಅವರ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ಗೌರವಿಸುತ್ತದೆ ಎಂದು ಹೇಳಿದರು. ಸಂತ್ರಸ್ತ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ ಹೊರಡಿಸಿದ್ದು, ಅವರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts