More

    ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್​ ಒಂಭತ್ತು ಪ್ರಶ್ನೆ; ಮುಸ್ಲಿಮರ ಮೀಸಲಾತಿ ವಿಚಾರವನ್ನು ಕೆದಕಿದ ಸುರ್ಜೇವಾಲ, ಡಿಕೆಶಿ…

    ಮೈಸೂರು: ಚುನಾವಣೆ ಪ್ರಾರಂಭವಾಗುವುದಕ್ಕೂ ಮುನ್ನ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಹೋರಾಟ ಶುರುವಾಗಿತ್ತು. ಒಕ್ಕಲಿಗರೂ ಮೀಸಲಾತಿ ನೀಡದೇ ಹೋಗಿದ್ದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದರು.

    ಈ ಸಂದರ್ಭ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನೀಡಿದ್ದರು. ಅದೇ ಮುಸ್ಲಿಮರಿಗೆ EWS ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿ ನೀಡಿದ್ದರು.

    ಈ ವಿಚಾರವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಡಿ ಕೆ ಶಿವಕುಮಾರ್ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ಸುರ್ಜೇವಾಲ “ಮೀಸಲಾತಿ ವಿಚಾರವಾಗಿ ಬಿಜೆಪಿ ಮೋಸದಾಟ ಬಯಲಾಗಿದೆ. ಇದು ಡಬಲ್‌ ಇಂಜಿನ್ ಸರ್ಕಾರದ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಸದಾ ಹೇಳುತಿತ್ತು ಒಕ್ಕಲಿಗ ಲಿಂಗಾಯತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು. ಇದು ಈಗ ಸುಪ್ರೀಂಕೋರ್ಟ್‌ನಲ್ಲಿ ಬಯಲಾಗಿದೆ” ಎಂದು ಹೇಳುತ್ಆ 07 ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ

    ಈ ಸಂದರ್ಭ ಸುರ್ಜೇವಾಲ “2% ಲಿಂಗಾಯತ ಮೀಸಲಾತಿ ರದ್ದಾಗಲಿದೆ. ಒಕ್ಕಲಿಗರ 2 C ಮತ್ತೆ 3Aಗೆ ಹೋಗಲಿದೆ. ಒಕ್ಕಲಿಗರ 2% ಹೆಚ್ಚುವರಿ ರದ್ದಾಗಲಿದೆ. ಅಂತಿಮವಾಗಿ ಯಾರಿಗೂ ಮೀಸಲಾತಿ ಸಿಗುವುದಿಲ್ಲ” ಎಂದಿದ್ದಾರೆ.

    ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿಗೆ ಕೇಳಲಾದ ಆ 9 ಪ್ರಶ್ನೆಗಳು ಯಾವುದು?

    1. ನೀವು ಲಿಂಗಾಯತರು, ಒಕ್ಕಲಿಗರು, ಎಸ್‌ಸಿ ಮತ್ತು ಎಸ್‌ಟಿಗಳ ಮೇಲೆ “ಮೀಸಲಾತಿಯ ವಂಚನೆ ಆಟ ಏಕೆ ಆಡಿದ್ದೀರಿ?
    2. ನೀವು ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿಯನ್ನು ಏಕೆ ಸಮರ್ಥಿಸಲಿಲ್ಲ ?
    3. ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಬೊಮ್ಮಾಯಿ-ಮೋದಿ ಸರ್ಕಾರ ಏಕೆ ವಿಫಲವಾಯಿತು ?
    4. ಮಾರ್ಚ್ 14, 2023 ರಂದು ಸಂಸತ್ತಿನ ನೆಲದ ಮೇಲೆ SC-ST ಗಳಿಗೆ ಹೆಚ್ಚಿದ ಮೀಸಲಾತಿಯನ್ನು ಮೋದಿ ಸರ್ಕಾರ ಏಕೆ ತಿರಸ್ಕರಿಸಿತು ?
    5. SC-STಗಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರ ಸರ್ಕಾರವು ಸಂವಿಧಾನದ IX ನೇ ಶೆಡ್ಯೂಲ್‌ನಲ್ಲಿ ಏಕೆ ಹಾಕಲಿಲ್ಲ?
    6. SC, ST ಗಳ ಆಕಾಂಕ್ಷೆಗಳನ್ನು ಪೂರೈಸಲು ನೀವು ಮೀಸಲಾತಿಯ 50% ಸೀಲಿಂಗ್ ಅನ್ನು ಹೆಚ್ಚಿಸಲು ಏಕೆ ನಿರಾಕರಿಸುತ್ತಿದ್ದೀರಿ ?
    7. ಧ್ರುವೀಕರಣಕ್ಕಾಗಿ ನೀವು ಏಕೆ ಅನ್ಯಾಯವಾಗಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಗುರಿಯಾಗಿಸಿಕೊಂಡಿದ್ದೀರಿ?
    8. ಬೊಮ್ಮಾಯಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ಮೀಸಲಾತಿ ಕುರಿತಾದ ತನ್ನದೇ ಆದ ಸರ್ಕಾರಿ ಆದೇಶವನ್ನು ಏಕೆ ತಡೆಹಿಡಿದಿದೆ ?
    9. ಲಿಂಗಾಯತರು, ಒಕ್ಕಲಿಗರು ಮತ್ತು ಇತರರು ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಮಾಡಿದ ದ್ರೋಹಕ್ಕಾಗಿ ಪ್ರಧಾನಮಂತ್ರಿಯವರು SC, ST ಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರಾ?
    https://www.vijayavani.net/2-days-of-national-mourning-for-the-demise-of-prakash-badal-singh/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts