More

    ಮೇಳಗಳಿಂದ ಕೃಷಿಗೆ ಉತ್ತೇಜನ : ಪೇಜಾವರ ಶ್ರೀ ಆಶಯ

    ವಿಜಯವಾಣಿ ಸುದ್ದಿಜಾಲ ಗುರುಪುರ

    ಯಕ್ಷಗಾನ ಹಲವು ಕಲಾ ಪ್ರಕಾರ ಬಿಂಬಿಸುವ ಕಲೆ. ಇದರಲ್ಲಿ ನಮ್ಮ ಆಚಾರ, ಸಂಸ್ಕೃತಿ ವಿಚಾರ ಅಡಗಿದೆ. ಕೃಷಿ ಮತ್ತು ಯಕ್ಷಗಾನಕ್ಕೆ ಅವಿನಾಭಾವ ಸಂಬಂಧವಿದ್ದಂತಹ ಕಾಲವೊಂದಿತ್ತು. 30-40 ವರ್ಷಗಳ ಹಿಂದೆ ಕೃಷಿಯಿಂದ ಆವರಿಸಿದ್ದ ಜಿಲ್ಲೆಯಲ್ಲಿ ಈಗ ಕೃಷಿ ಕ್ಷೀಣಿಸಿದೆ. ಇಂತಹ ಸಂದರ್ಭದಲ್ಲಿ ಬೃಹತ್ ಕೃಷಿ ಮೇಳದಿಂದ ಕೃಷಿ ಆಸಕ್ತರಿಗೆ ಉತ್ತೇಜನ ಸಿಗಬಹುದು ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

    ವಾಮಂಜೂರಿನ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮಾನೋತ್ಸವ ‘ದಶಮ ಸಂಭ್ರಮ’ದ ಜತೆಯಲ್ಲಿ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ಮೇ 11ರಿಂದ 13ರ ವರೆಗೆ ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ ಬೃಹತ್ ಕೃಷಿ ಮೇಳ ಉದ್ಘಾಟಿಸಿ ಆಶೀರ್ವಚನ ನೀಡಿದರು.

    ಪ್ರಸಕ್ತ ಕೃಷಿ ಕಷ್ಟವಲ್ಲ. ಆಧುನಿಕ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಂದಿದ್ದರೂ, ಜಿಲ್ಲೆಯಲ್ಲಿ ಅದೆಷ್ಟೋ ಕೃಷಿ ಭೂಮಿ ಹಡೀಲು ಬಿದ್ದಿದೆ. ಈ ಭೂಮಿ ಮತ್ತೆ ಹಸಿರು ಕಾಣಬೇಕಿದ್ದರೆ, ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

    ಕಟೀಲು ದೇವಳದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕೃಷಿಗೆ ಪೂರಕವಲ್ಲದ ವ್ಯವಸ್ಥೆ ನಮ್ಮ ಕಣ್ಣೆದುರಿಗಿದೆ. ಕೃಷಿ ಮೇಳಗಳ ಆಯೋಜನೆ ಮುಖಾಂತರ ಕೃಷಿಗೆ ಪೂರಕ ವಾತಾವರಣ ಸೃಷ್ಟಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ.ಭೂಮಿಯು ರಾಸಾಯನಿಕ ಪದಾರ್ಥ ಮತ್ತು ಪ್ಲಾಸ್ಟಿಕ್ ಮುಕ್ತವಾಗಬೇಕು. ಆಗ ಮಾತ್ರ ಹಸಿರು ನಳನಳಿಸಬಹುದು ಎಂದರು.

    ಅಧ್ಯಕ್ಷತೆ ವಹಿಸಿದ್ದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮ ವಿಶಿಷ್ಟ ರೀತಿಯಿಂದ ನಡೆಸುವ ನಿಟ್ಟಿನಲ್ಲಿ ಬೃಹತ್ ಕೃಷಿ ಮೇಳ ಆಯೋಜಿಸಿದ್ದೇವೆ ಎಂದರು.

    ಈ ವೇಳೆ ಹಿರಿಯ ನಾಗರಿಕ ಸಂಜೀವ ಮೊಲಿ, ಹವ್ಯಾಸಿ ಯಕ್ಷಗಾನ ಕಲಾವಿದರಾದ ವಿಂದ್ಯಾ ಆಚಾರ್ಯ ಉಡುಪಿ, ಗೋಕುಲದಾಸ್ ಶೆಟ್ಟಿ ಪಡುಪಳ್ಳಿ, ವಿಶ್ವನಾಥ ಶೆಟ್ಟಿ ತಿರುವೈಲು ಮತ್ತು ಚಂದ್ರಶೇಖರ ರೈ ಮಾಯಿಪ್ಪಾಡಿ ಅವರನ್ನು ಸನ್ಮಾನಿಸಲಾಯಿತು.

    ಶರತ್ ಶೆಟ್ಟಿ ಪಡುಪಳ್ಳಿ ಸ್ವಾಗತಿಸಿ ಪ್ರಸ್ತಾವಿಸಿದರು. ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್, ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ಜಗದೀಶ ಶೇಣವ, ಸದಾಶಿವ ಭಟ್, ರಾಜೇಶ್ ಭಟ್, ಚಂದ್ರಹಾಸ ರೈ, ದಿನೇಶ್ ಜೆ. ಕರ್ಕೇರ ಸಾನದಮನೆ, ಚಿತ್ತರಂಜನ್‌ದಾಸ್ ಶೆಟ್ಟಿ, ಟಿ. ಪ್ರಭಾಕರ ಶೆಟ್ಟಿ, ಪ್ರವೀಣ್, ಪುಷ್ಪಾವತಿ, ಸುಪ್ರಿತಾ, ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಸುರೇಶ್ ಶೆಟ್ಟಿ ಕಾಪೆಟ್ಟುಗುತ್ತು, ಸಂದೀಪ್ ಶೆಟ್ಟಿ ಬೊಂಡಂತಿಲಗುತ್ತು, ಮೋಹನ್ ಪಕ್ಕಳ, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ನಾಗರಾಜ ರೈ ತಿಮಿರಿಗುತ್ತು, ಬಾಲಕೃಷ್ಣ ಭಂಡಾರಿ, ಶ್ರೀನಿವಾಸ ಮಾಣೈ, ಪದ್ಮನಾಭ ಶೆಟ್ಟಿ, ಜಿ. ಪಾಂಡುರಂಗ ಕಾಮತ್, ಪ್ರಶಾಂತ್ ಐತಾಳ, ಪ್ರಸನ್ನ ಭಟ್, ಗೋಪಾಲಕೃಷ್ಣ ಭಂಡಾರಿ, ಪ್ರಮೋದ್ ಕುಮಾರ್ ರೈ, ಪ್ರತಾಪಚಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ತನಿಯಪ್ಪ ಪೂಜಾರಿ, ಶಿವಪ್ರಸಾದ್(ಡಿಟಿ) ಮತ್ತಿತರರು ಉಪಸ್ಥಿತರಿದ್ದರು. ಅಶ್ವಿನ್ ಶೆಟ್ಟಿ ಬೊಂಡಂತಿಲ ನಿರೂಪಿಸಿದರೆ, ಕಿರಣ್ ಪಕ್ಕಳ ಪೆರ್ಮಂಕಿಗುತ್ತು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts