More

    ಮೈಸೂರಿನಲ್ಲಿ ‘ವಾಮನ’ ಸಂಚಾರ ; ನಾಳೆ ಚಿತ್ರದ ಆ್ಯಕ್ಷನ್​ ಟೀಸರ್​ ಬಿಡುಗಡೆ

    ವಿಜಯವಾಣಿ ಸುದ್ದಿಜಾಲ

    ‘ಬಜಾರ್​’, ‘ಬೈಟು ಲವ್​’ ಚಿತ್ರಗಳ ಖ್ಯಾತಿಯ ಧನ್ವೀರ್ ನಾಯಕರಾಗಿ ನಟಿಸಿರುವ “ವಾಮನ” ಚಿತ್ರದ ಆಕ್ಷನ್ ಟೀಸರ್ ಆಗಸ್ಟ್ 17ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ರಿಲೀಸ್​ ಆಗಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್​ ಆಗಿವೆ. ಸದ್ಯ ಆಕ್ಷನ್ ಟೀಸರ್ ಬಿಡುಗಡೆಯಾಗಲಿದ್ದು, ಅದೇ ದಿನ ಚಿತ್ರತಂಡದಿಂದ ಬಿಗ್ ಅನೌನ್ಸ್​​ಮೆಂಟ್​ ಸಹ ಇರಲಿದೆಯಂತೆ.

    ಇದನ್ನೂ ಓದಿ : ಸೆಲೆಬ್ರಿಟಿಗಳ ಸ್ಪೆಷಲ್​ ಸ್ವಾತಂತ್ರ್ಯ ದಿನ ; ಸರಳತೆ ಮೆರೆದ ರಚಿತಾ, ಸೈಕಲ್​ನಲ್ಲಿ ದಿಗಂತ್​ ಸವಾರಿ

    ಮೈಸೂರಿನಲ್ಲಿ 'ವಾಮನ' ಸಂಚಾರ ; ನಾಳೆ ಚಿತ್ರದ ಆ್ಯಕ್ಷನ್​ ಟೀಸರ್​ ಬಿಡುಗಡೆ

    ಶಂಕರ್ ರಾಮನ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಮತ್ತು ನವೀನ್ ಹಾಡೋನಳ್ಳಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

    ಇದನ್ನೂ ಓದಿ : ಹುಟ್ಟುಹಬ್ಬದ ಸಂಭ್ರಮದಲ್ಲಿ ಸೈಫ್​ ಆಲಿ ಖಾನ್​: ಮುಂದಿನ ಸಿನಿಮಾದ ಫಸ್ಟ್​​ ಲುಕ್​ ರಿಲೀಸ್​​

    ಮೈಸೂರಿನಲ್ಲಿ 'ವಾಮನ' ಸಂಚಾರ ; ನಾಳೆ ಚಿತ್ರದ ಆ್ಯಕ್ಷನ್​ ಟೀಸರ್​ ಬಿಡುಗಡೆ

    ‘ವಾಮನ’ ಚಿತ್ರದಲ್ಲಿ ಧನ್ವೀರ್​ಗೆ ನಾಯಕಿಯಾಗಿ ‘ಏಕ್​ಲವ್​ಯಾ’ ಖ್ಯಾತಿಯ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಜತೆಗೆ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತಕುಮಾರ್, ಕಾಕ್ರೋಜ್ ಸುಧಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕೆ.ಜಿ.ಸಚ್ಚು, ಅರುಣ್ ಶ್ರೀರಾಮಯ್ಯ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts