More

    ವಾಲ್ಮೀಕಿ ಗುರುಪೀಠದ 3ನೇ ಜಾತ್ರಾ ಮಹೋತ್ಸವದಲ್ಲಿ ಶೇ.7.5ಕ್ಕೆ ಮೀಸಲು ಹೆಚ್ಚಳಕ್ಕೆ ಒತ್ತಾಯಿಸಲಾಗುವುದು; ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

    ದೇವದುರ್ಗ: 2021ರ ಫೆ.8, 9ರಂದು ನಡೆಯುವ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ 3ನೇ ಜಾತ್ರಾ ಮಹೋತ್ಸವದಲ್ಲಿ ವಾಲ್ಮೀಕಿ ಸಮುದಾಯದ ಜಾಗೃತಿ ಹಾಗೂ ಶೇ.7.5ಕ್ಕೆ ಮೀಸಲು ಹೆಚ್ಚಳಕ್ಕೆ ಒತ್ತಾಯಿಸಲಾಗುವುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ರಾಜನಹಳ್ಳಿ ವಾಲ್ಮೀಕಿ ಜಾತ್ರೆ ನಿಮಿತ್ತ ಪಟ್ಟಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಶೇ.3 ಜನಸಂಖ್ಯೆಯಿರುವ ಜನರಿಗೆ ಯಾವ ಬೇಡಿಕೆಯಿಲ್ಲದೆ ಕೇಂದ್ರ ಸರ್ಕಾರ ಶೇ.10 ಮೀಸಲು ನೀಡಿದೆ. ಆಡಳಿತ ನಡೆಸುವ ಎಲ್ಲ ಸರ್ಕಾರಗಳು ಮೀಸಲು ಹೆಚ್ಚಳ ಬಗ್ಗೆ ಮಾತನಾಡದೆ, ಯಾಮಾರಿಸುತ್ತಿವೆ ಎಂದು ದೂರಿದರು.

    ಅಕ್ಟೋಬರ್‌ನಲ್ಲಿ ನಡೆದ ಹೋರಾಟದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ, ಡಿಸೆಂಬರ್ ಒಳಗೆ ಮೀಸಲು ಹೆಚ್ಚಿಸುವ ಭರವಸೆ ನೀಡಿದೆ. ಈಗಾಗಲೇ ನಾಗಮೋಹನದಾಸ ವರದಿ ಜಾರಿಗೆ ಉಪಸಮಿತಿ ರಚಿಸಿದೆ. ತಕ್ಷಣ ವರದಿ ಜಾರಿಮಾಡಬೇಕು. ನಿರ್ಲಕ್ಷ್ಯ ಮಾಡಿದರೆ, ರಾಜನಹಳ್ಳಿ ಜಾತ್ರೆಯಲ್ಲಿ ಹೋರಾಟದ ರಣಕಹಣೆ ಊದಲಾಗುವುದು ಎಂದು ಎಚ್ಚರಿಸಿದರು.

    ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿದರು. ಸಮುದಾಯದ ರಾಜ್ಯ ಉಪಾಧ್ಯಕ್ಷ ವೆಂಕನಗೌಡ ಪಾಟೀಲ್ ನವಿಲುಗುಡ್ಡ, ವಿ.ಎಂ.ಮೇಟಿ ವಕೀಲ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ರಾಮಣ್ಣ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts