More

    ಸಂಪರ್ಕ ಸೇತುವೆ ಕುಸಿತ ಭೀತಿ

    | ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಕಾಳಾವರ ಗ್ರಾಮದ ವಕ್ವಾಡಿ ಬಚ್ಚಲ್ ತೋಡು ರಿವಿಟ್ಮೆಂಟ್( ತೋಡಿಗೆ ಕಟ್ಟಿರುವ ತಡೆಗೋಡೆ) ಜಾರುತ್ತಿದ್ದು, ಸಂಪರ್ಕ ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಸೇತುವೆ ಕುಸಿದರೆ ಊರು ಸಂಪರ್ಕ ಕಡಿತಗೊಳ್ಳಲಿದ್ದು, ಕೃಷಿಯನ್ನೇ ನಂಬಿದ ರೈತರಿಗೆ ತೊಂದರೆಯಾಗಲಿದೆ.
    ವಕ್ವಾಡಿ ಗುಡ್ಡದಿಂದ ಮಳೆ ನೀರು ಹರಿಯುವುದು ಇದೇ ಬಚ್ಚಲ್ ತೋಡಲ್ಲಿ. ಕೃಷಿ ಮುಖ್ಯ ಉದ್ಯೋಗವಾಗಿರುವ ಇಲ್ಲಿನ ಜನರಿಗೆ ಈ ಸೇತುವೆ ಬದುಕಿಗೂ ಸಂಪರ್ಕ ಕಲ್ಪಿಸಿದೆ. 150 ಮನೆಯ ಜನರು ಈ ಸೇತುವೆ ಮೂಲಕ ಸಂಚರಿಸುತ್ತಾರೆ. ನಾಲ್ಕು ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆ ಮೂಲಕ 10 ಲಕ್ಷ ರೂ. ವೆಚ್ಚದಲ್ಲಿ ರಿವಿಟ್ಮೆಂಟ್ ಕಿರು ಸೇತುವೆ ನಿರ್ಮಿಸಲಾಗಿದೆ. ಇದನ್ನು ನಿರ್ಮಿಸಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಎನ್ನುವುದು ವಿಶೇಷ. ಆದರೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ.
    ಸಣ್ಣ ನೀರಾವರಿ ಇಲಾಖೆ ಮೂಲಕ ಆದ ಹೆಚ್ಚಿನ ಕಾಮಗಾರಿಗಳ ಅವಸ್ಥೆ ಹೀಗೆ. ಹೆಚ್ಚಿನ ಕಡೆ ಅನುದಾನ ಪೋಲು. ಹಕ್ಲಾಡಿ ಗ್ರಾಮ ತೊಪ್ಲಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಬಗೆಹರಿಯದ ಸಮಸ್ಯೆಯಾಗಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ. ತಲ್ಲೂರು ರಾಜಾಡಿ ಬಳಿ ಕೋಟಿ ರೂಪಾಯಿ ಸುರಿದ ಕಿಂಡಿ ಅಣೆಕಟ್ಟು ಕಾಂಡ್ಲಾ ವನ ಕರಟುವಂತೆ ಮಾಡಿದೆ. ಉಪ್ಪಿನಕುದ್ರು, ವಂಡ್ಸೆ, ಬಂಟ್ವಾಡಿ, ಹಳ್ಳಿಹೊಳೆ ಅಲ್ಲೆಲ್ಲ ರೈತರಿಗೂ ಪ್ರಯೋಜನವಾಗದೆ ಅಂತರ್ಜಲ ಮಟ್ಟ ಏರದೆ ಹತ್ತರಲ್ಲಿ ಕೇವಲ ಅನುದಾನ ಪೋಲಾಗಿ ಇಲಾಖೆಯ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ.

    ನಮ್ಮ ಮನೆ ತೋಡು ಪಕ್ಕದಲ್ಲಿದ್ದು, ರಿವಿಟ್ಮೆಂಟ್ ಕಲ್ಲು ಜಾರುತ್ತಿರುವುದರಿಂದ ಮನೆ, ಬಾವಿಗೆ ಅಪಾಯವಿದೆ. ಈ ಬಾರಿ ಮಳೆಗಾಲದಲ್ಲಿ ತೋಡು ಸರಿ ಮಾಡದಿದ್ದರೆ ಬಾವಿ, ಮನೆ ಕುಸಿದು ರಸ್ತೆಗೆ ಬರಬೇಕಾಗುತ್ತದೆ. ಗ್ರಾಪಂಗೆ ವಿಷಯ ತಿಳಿಸಿದ್ದರೂ ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ.
    | ಶೃಂಗಾರಿ, ಕೃಷಿ ಕಾರ್ಮಿಕೆ ವಕ್ವಾಡಿ

    ಸಣ್ಣ ನಿರಾವರಿ ಇಲಾಖೆ ಮೂಲಕ ಬಚ್ಚಲ್ ತೋಡು ರಿವಿಟ್ಮೆಂಟ್ ಹಾಗೂ ಸಂಪರ್ಕ ಸೇತುವೆ ನಿರ್ಮಿಸಲಾಗಿದ್ದು, ತೋಡು ಕುಸಿದ ಮಾಹಿತಿ ಇಲ್ಲ. ತಕ್ಷಣ ಬಚ್ಚಲ್ ತೋಡು ಸಮಸ್ಯೆ ಗಮನಿಸಿ ಪರಿಹಾರ ಮಾಡುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ.
    ಪಾಂಡುರಂಗ ಶೇಟ್
    | ಪಿಡಿಒ, ಗ್ರಾಮ ಪಂಚಾಯಿತಿ ಕಾಳಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts