More

    ವಾಜಪೇಯಿ ಬಡಾವಣೆ ನಿವೇಶನ ಮರು ಹಂಚಿಕೆ ಮಾಡಿ: ಅಶೋಕ್ ಯಾದವ ಒತ್ತಾಯ

    ಶಿವಮೊಗ್ಗ: ನಗರದ ವಾಜಪೇಯಿ ಬಡಾವಣೆಯಲ್ಲಿ ಸೂಡಾದಿಂದ ಹಂಚಿಕೆ ಮಾಡಿರುವ ಅಷ್ಟೂ ನಿವೇಶನವನ್ನು ಹಿಂಪಡೆದು ಮರು ಹಂಚಿಕೆ ಮಾಡಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಯಾದವ ಸರ್ಕಾರವನ್ನು ಒತ್ತಾಯಿಸಿದರು.
    2011ರಲ್ಲಿ 1,801 ನಿವೇಶನ ನಿರ್ಮಿಸಿದ್ದು 256 ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗಿದೆ. ಇನ್ನೂ 9 ನಿವೇಶನಗಳನ್ನು ಮೀಸಲಿಟ್ಟಿದ್ದಾರೆ. 142 ನಿವೇಶನಗಳನ್ನು ವಿವೇಚನಾ ಕೋಟದಡಿ ನೀಡಿದ್ದಾರೆ. 807 ನಿವೇಶನ ಅಕ್ರಮವಾಗಿದ್ದು 498 ನಿವೇಶನಗಳು ಮಾತ್ರ ಸಕ್ರಮವಾಗಿವೆ. ಹಾಗಾಗಿ ತಕ್ಷಣವೇ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿವೇಶನಗಳಿಗೆ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಪರಿಶೀಲನೆ ನಡೆಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ವಾಜಪೇಯಿ ಬಡಾವಣೆಯಲ್ಲಿ ಅಕ್ರಮ ನಿವೇಶನದ ಬಗ್ಗೆ ಸಮಿತಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿ ವರದಿ ಸಲ್ಲಿಸಿ 6 ತಿಂಗಳಾದರೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಲೋಕಾಯುಕ್ತರ ವರದಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತೆ ಮಾಡಿದ್ದಾರೆ ಎಂದು ದೂರಿದರು. ಸಮಿತಿ ಅಧ್ಯಕ್ಷ ಡಾ. ಚಿಕ್ಕಸ್ವಾಮಿ, ಪದಾಧಿಕಾರಿಗಳಾದ ಚನ್ನವೀರಪ್ಪ, ಶಿವಕುಮಾರ್, ಪ್ರೊ. ಕಲ್ಲನ, ದೇವೇಂದ್ರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts