More

    ಆಗ ಚಾಕೊಲೇಟ್​ ಬಾಯ್​, ಈಗ ಆಂಗ್ರಿ ಯಂಗ್​ ಮ್ಯಾನ್​; ಮತ್ತೆ ಬಂದ ಪ್ರಜ್ವಲ್​ ಸಹೋದರ​ …

    ಬೆಂಗಳೂರು: ಐದು ವರ್ಷಗಳ ಹಿಂದೆ ಬಿಡುಗಡೆಯಾದ ‘ಕುಮಾರಿ 21 ಎಫ್​’ ಎಂಬ ಚಿತ್ರದ ಮೂಲಕವೇ ಹೀರೋ ಆಗಿದ್ದರು ಪ್ರಜ್ವಲ್​ ದೇವರಾಜ್​ ಸಹೋದರ ಪ್ರಣಾಮ್​. ಆ ಚಿತ್ರದ ಅಷ್ಟೇನೂ ಸುದ್ದಿಯಾಗಲಿಲ್ಲ. ಆ ನಂತರ ಅವರು ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತಾದರೂ, ಪ್ರಣಾಮ್​ ಅಭಿನಯದ ಯಾವೊಂದು ಚಿತ್ರವೂ ಬರಲಿಲ್ಲ.

    ಇದನ್ನೂ ಓದಿ: ‘ಪಠಾಣ್​’ ಚಿತ್ರದ ಟ್ರೈಲರ್​ನಲ್ಲಿ ಸಲ್ಮಾನ್​ ಇಲ್ಲ; ಭರ್ಜರಿ ಆಕ್ಷನ್​ ಇದೆ

    ಆಗ ಚಾಕೊಲೇಟ್​ ಬಾಯ್​, ಈಗ ಆಂಗ್ರಿ ಯಂಗ್​ ಮ್ಯಾನ್​; ಮತ್ತೆ ಬಂದ ಪ್ರಜ್ವಲ್​ ಸಹೋದರ​ …ಈ ಪ್ರಣಾಮ್​, ಆಂಗ್ರಿ ಯಂಗ್ ಮ್ಯಾನ್ ಆಗಿ ರೀಎಂಟ್ರಿ ಕೊಡುತ್ತಿದ್ದಾರೆ. ‘ವೈರಂ’ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ದೇವರಾಜ್​ ಮತ್ತು ಅವರ ಕುಟುಂಬದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಈ ಚಿತ್ರದ ಬಗ್ಗೆ ಮಾತನಾಡುವ ಪ್ರಣಾಮ್​, ‘ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಸುಮಾರು ೪ ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡ ರಾಮ್​ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ಕಿದೆ’ ಎಂದು ಖುಷಿಯಾದರು ಪ್ರಣಾಮ್​.

    ಇದನ್ನೂ ಓದಿ: ಚಿರಂಜೀವಿ, ವಿಶಾಖಪಟ್ಟಣಂಗೆ ಶಿಫ್ಟ್​ ಆಗುವುದಕ್ಕೆ ಯೋಚಿಸುತ್ತಿರುವುದು ಅದೇ ಕಾರಣಕ್ಕಾ?

    ಪ್ರಣಾಮ್​ಗೆ ನಾಯಕಿಯಾಗಿ ಮೋನಲ್​ ನಟಿಸಿದ್ದಾರೆ. ಪ್ರಣಾಮ್​ ತಂದೆ-ತಾಯಿ ಪಾತ್ರದಲ್ಲಿ ಶಂಕರ್​ ಅಶ್ವತ್ಥ್​ ಮತ್ತು ವೀಣಾ ಸುಂದರ್​ ಕಾನಣಿಸಿಕೊಂಡಿದ್ದಾರಂತೆ. ಈ ಚಿತ್ರವನ್ನು ಸಾಯಿ ಶಿವನ್ ನಿರ್ದೇಶಿಸಿದರೆ, ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ನಿರ್ಮಾಣ ಮಾಡಿದ್ದಾರೆ. ಗೋಪಿನಾಥ್ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ಈ ಚಿತ್ರಕ್ಕಿದೆ.

    ನಭಾ ನಟೇಶ್​ ಪ್ರತ್ಯಕ್ಷ; ಇಷ್ಟು ದಿನ ಎಲ್ಲಿದ್ದರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts