More

    ಬಸವಗಿರಿ ಪರಿಸರದಲ್ಲಿ ಫೆ.7ರಿಂದ ಮೂರು ದಿನ 17ನೆ ವಚನ ವಿಜಯೋತ್ಸವ ಆಯೋಜನೆ.

    ಬೀದರ್​: ಲಿಂಗಾಯಿತ ಮಹಾಮಠ, ಬಸವ ಸೇವಾ ಪ್ರತಿ ವತಿಯಿಂದ ಬೀದರ್ ನ ಬಸವಗಿರಿ ಪರಿಸರದಲ್ಲಿ ಫೆ.7ರಿಂದ ಮೂರು ದಿನ 17ನೇ ವಚನ ವಿಜಯೋತ್ಸವ ಆಯೋಜಿಸಿರುವುದಾಗಿ ಅಕ್ಕ ಅನ್ನಪೂರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
    ಸಿಎಂ ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮೂರು ದಿನ ವಿವಿಧ ಗೋಷ್ಠಿ ನಡೆಯಲಿದ್ದು, ಯುವ, ಮಹಿಳಾ ಸಮಾವೇಶ, ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜನೆಗೊಂಡಿದೆ.
    ವಚನ ವಿಜಯೋತ್ಸವದ ನಿಮಿತ್ತ ಬಸವ ಸೇವಾ ಪ್ರತಿಷ್ಠಾನದಿಂದ ಕೊಡಮಾಡುವ ಗುರು ಬಸವ ಪುರಸ್ಕಾರಕ್ಕೆ ಪ್ರಸಕ್ತ ಬಾರಿ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಆಯ್ಕೆ. ಫೆ.9ರಂದು ನಡೆಯುವ ಸಮಾರಂಭದಲ್ಲಿ ಪ್ರದಾನ ನಡೆಯಲಿದೆ.
    ಅಲ್ಲದೇ ವೀರಮಾತೆ ಅಕ್ಕನಾಗಲಾಂಬಿಕೆ ಪುರಸ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಚೆನ್ನಮ್ಮ ಹಳ್ಳಿಕೇರಿ, ಕಾಯಕವೀರ ದಾಸೋಹಿ ಶರಣ ಪುರಸ್ಕಾರವನ್ನು ಬೆಂಗಳೂರಿನ ಆಟೋರಾಜ ಹಾಗೂ ಚೆನ್ನಬಸವಣ್ಣ ಪ್ರತಿಭಾ ಪುರಸ್ಕಾರವನ್ನು ಯೋಗಾಸನದಲ್ಲಿ ಗಿನ್ನಿಸ ದಾಖಲೆ ಮಾಡಿದ ಮೈಸೂರಿನ ಖುಷಿ ಹೇಮಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ನಡೆಯಲಿದೆ ಎಂದು ಅಕ್ಕ ಅನ್ನಪೂರ್ಣ ಹೇಳಿದ್ದಾರೆ.
    ಡಾ.ಗಂಗಾಂಬಿಕೆ ಅಕ್ಕಾ, ಗುರುನಾಥ ಕೊಳ್ಳುರ್, ಧನರಾಜ ತಾಳಂಪಳ್ಳಿ, ಜಯರಾಜ ಖಂಡ್ರೆ, ಬಾಬು ವಾಲಿ ಇತರರು ಸುದ್ದಿಯಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts