More

    ವಚನ ಸಾಹಿತ್ಯ ಮಕ್ಕಳಲ್ಲಿ ಚಿಗುರಬೇಕು: ಶ್ರೀನಿವಾಸ ಹುಬ್ಬಳ್ಳಿ

    ಗದಗ:
    ಬೆಟಗೇರಿಯ ಹಳೆ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸ್ಪರ್ಧೆ ಹಾಗೂ ಭಾಷಣ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀನಿವಾಸ ಹುಬ್ಬಳ್ಳಿ, ಇಂದು ಸಾಹಿತ್ಯ, ಸಂಸತಿ ಉಳಿಯಬೇಕಾದರೇ ಮಕ್ಕಳನ್ನು ಮೊಬೈಲ್​ಲ್​, ಟಿ.ವಿ.ಗಳಿಂದ ದೂರವಾಗಿಸಿ ಸಾಹಿತ್ಯದ ಪುಸ್ತಕಗಳನ್ನು ನೀಡಬೇಕು. ಸಾಹಿತ್ಯ ಸಂಸತಿ, ಸಂಸ್ಕಾರ ಉಳಿಯಬೇಕಾದರೆ ಮಕ್ಕಳಿಂದ ಮಾತ್ರ ಸಾಧ್ಯ. ಈ ದಿಶೆಯಲ್ಲಿ ಪಾಲಕರು ಮತ್ತು ಪೋಷಕರು ನಿತ್ಯ ಜೀವನದಲ್ಲಿ ಸಂಸ್ಕಾರ ಸಂಸತಿ, ಸಾಹಿತ್ಯದ ಬಗ್ಗೆ ಮಕ್ಕಳಿಗೆ ಪೂರಕವಾಗಿ ಮಾಹಿತಿ ನೀಡಬೇಕು. ವಚನಕಾರ ವಚನ ಸಾಹಿತ್ಯದ ರಾಯಭಾರಿ ದೇವರ ದಾಸಿಮಯ್ಯನವರು ನಿತ್ಯ ಸಂಸಾರದ ಜಂಜಾಟದೊಂದಿಗೆ ಬದುಕಿ ನೇಕಾರಿಕೆಯನ್ನು ಉದ್ಯೋಗವಾಗಿ ಪರಿಗಣಿಸಿ ಯಾವುದೇ ರಾಜಶ್ರಯವಿಲ್ಲದೆ 11ನೇ ಶತಮಾನದಲ್ಲಿ ವಚನ ಸಾಹಿತ್ಯ ಹುಟ್ಟಿಗೆ ಕಾರಣರಾದರು. ತದನಂತರದ ಹಲವಾರು ಯುಗ ಪುರುಷರು ವಚನ ಸಾಹಿತ್ಯಕ್ಕೆ ನೀರೆರೆದು ಬೆಳೆಸಿದರು ಎಂದರು.
    ಸಭೆ ಉದ್ಘಾಟಿಸಿ ಮಾತನಾಡಿ ನಿಂಗಪ್ಪ ಚೇಗೂರ, ನೇಕಾರ ಒಕ್ಕೂಟ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ನೇಕಾರರಲ್ಲಿ ಒಕ್ಕೂಟವು ಜಾಗೃತಿ ಮತ್ತು ನೆಮ್ಮದಿ ತಂದಿದೆ. ನೇಕಾರ ಸಮುದಾಯಗಳು ಇತ್ತೀಚಿಗೆ ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಜೊತೆಗೆ ನೇಕಾರರ ಸಂಟನಾತ್ಮಕ ಕಾರ್ಯಗಳನ್ನು ಹಾಗೂ ಮಕ್ಕಳಲ್ಲಿ ಹೊಸ ಚೇತರಿಕೆಯನ್ನು ನೀಡುತ್ತಿರುವುದು ಸಂತೋಷದ ವಿಷಯ ಎಂದರು.
    ನೇಕಾರರ ಒಕ್ಕೂಟದ ಮಹಿಳಾ ಅಧ್ಯೆ ಭಾರತಿ ಗಡ್ಡಿ, ರೋಹಿಣಿ ಪಾಂಡ್ರೆ, ಯಶೋದಾ ಗಿಡ್ನಂದಿ, ನಾರಾಯಣ ಕಂಗೂರಿ ಚೈತ್ರಾ ನಂದರಗಿ, ರತ್ನಾ ಘಾಗಿರ್, ಗೀತಾ ದೇವಾಂಗಮಠ, ವೀಣಾ ನೀಲಗುಂದ ಹಲವರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts