More

    ಗಮನ ಸೆಳೆದ ಭಕ್ತಿಗೀತೆ, ವಚನ ಗಾಯನ

    ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಡಾ.ಶಿವಕುಮಾರಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಸಮೀಪದ ಚಿಲಕವಾಡಿ ಬೆಟ್ಟದ ನಿಜಗುಣ ಅನುಭವ ಮಂಟಪದಲ್ಲಿ ನಡೆದ ಭಕ್ತಿಗೀತೆ ಹಾಗೂ ವಚನ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.

    ತಂಡದ ಕಲಾವಿದ ಪರಶಿವಪ್ಪ ನೇತೃತ್ವದಲ್ಲಿ ಇತ್ತೀಚೆಗೆ ವಚನ ಗಾಯನ, ಜಾನಪದ, ಭಕ್ತಿ ಗೀತೆ, ಭಜನೆ ಕಾರ್ಯಕ್ರಮ ನಡೆಯಿತು. ಮಠದ ಶ್ರೀ ಬಾಲ ಷಡಕ್ಷರಿಸ್ವಾಮೀಜಿ ಮಾತನಾಡಿ, ವಚನಗಳು, ಭಕ್ತಿ ಗೀತೆಗಳು, ಜಾನಪದದಲ್ಲಿ ನಿಜವಾದ ಭಕ್ತಿ ಇದೆ. ಜೀವನದ ಎಲ್ಲ ಸಾರವೂ ಇದೆ. ಆದರೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ನಾವು ಆಲಂಗಿಸಿಕೊಂಡಿದ್ದೇವೆ. ಇದು ಸಂಗೀತ ಕ್ಷೇತ್ರವನ್ನೂ ಬಿಟ್ಟಿಲ್ಲ. ನಮ್ಮ ಮೂಲ ಬೇರು ಜಾನಪದವಾಗಿದೆ. ಈ ಸಂಗೀತಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಇದರ ಭಾಗವಾಗಿ ಭಜನೆ, ಭಕ್ತಿ, ಭಾವಗೀತೆಗಳೂ ಇದ್ದು, ಇದನ್ನು ಮುಂದಿನ ಪೀಳಿಗೆಗೆ ಜೋಪಾನ ಮಾಡುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಯುವಜನರು ಇಂತಹ ಸಂಗೀತ ಕೇಳುವ, ಕಲಿಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಸಂಘದ ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಕಾರ್ಯದರ್ಶಿ ಎಂ.ಪರಶಿವಪ್ಪ, ಕಲಾವಿದರಾದ ಕೆ.ಎಸ್.ಪುಟ್ಟಣ್ಣ, ಮಹದೇವಸ್ವಾಮಿ, ರಾಜೇಶ್, ಬಸವಣ್ಣಾಚಾರ್, ಬಸವಣ್ಣ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts