More

    ನಾಮಪತ್ರ ಹಿಂಪಡೆಯಲು JDS ಅಭ್ಯರ್ಥಿಗೆ ಆಮಿಷ? ಆಡಿಯೋ ವೈರಲ್​ ಬಗ್ಗೆ ಸೋಮಣ್ಣ ಸ್ಪಷ್ಟನೆ ಹೀಗಿದೆ…​

    ಮೈಸೂರು: ಚಾಮರಾಜನಗರದ ಜೆಡಿಎಸ್​ ಅಭ್ಯರ್ಥಿ ಆಲೂರು ಮಂಜುಗೆ ನಾಮಪತ್ರ ವಾಪಸ್​ ಪಡೆದುಕೊಳ್ಳಲು ಸಚಿವ ವಿ. ಸೋಮಣ್ಣ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದಕ್ಕೆ ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

    ನನಗೂ ಅದಕ್ಕೂ ಸಂಬಂಧ ಇಲ್ಲ

    ವರುಣ ಕ್ಷೇತ್ರದಲ್ಲಿ ಮಾತನಾಡಿದ ವಿ.ಸೋಮಣ್ಣ, ಆಡಿಯೋಗೂ ನನಗೂ ಸಂಬಂಧವಿಲ್ಲ. ನನ್ನದು ಯಾವುದೇ ವಿಚಾರ ಸಿಗುತ್ತಿಲ್ಲ. ನಾನು ಯಾವುದೋ ನಾಯಿ ನರಿಗಳಿಗೆ ಮಾತಿಗೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ನಾನೇನೂ ದಡ್ಡ ಅಲ್ಲ. 45 ವರ್ಷ ರಾಜಕಾರಣ ಮಾಡಿದ್ದೇನೆ. ಚುನಾವಣಾ ಮುಗಿದ ಮೇಲೆ ಆಡಿಯೋ ಬಗ್ಗೆ ಮಾತನಾಡುತ್ತೇನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಯಾರೋ ಹೊಟ್ಟೆ ಪಾಡಿಗಾಗಿ ಮಾಡಿರಬಹುದು ಎಂದು ಗುಡುಗಿದರು.

    ಇದನ್ನೂ ಓದಿ: ಎಲ್ಲದರ ಮೇಲೂ ಜಿಎಸ್​​ಟಿ ಹಾಕಿದ ಮೋದಿ ಗಾಳಿಯೊಂದನ್ನು ಉಚಿತವಾಗಿ ನೀಡಿದ್ದಾರೆ; ಪ್ರಧಾನಿ ವಿರುದ್ಧ ಕಿಡಿಕಾರಿದ ಖರ್ಗೆ

    ಜನರ ಪ್ರೀತಿ ನೋಡಿ ಖುಷಿಯಾಗಿದೆ

    ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ ವಿ. ಸೋಮಣ್ಣ, ನನಗೆ ಈಗ 72 ವರ್ಷ ವಯಸ್ಸು. ನೀನು ಚಾಲೆಂಜ್ ಸ್ವೀಕಾರ ಮಾಡು ಎಂದು ಯಡಿಯೂರಪ್ಪ ಹೇಳಿದರು. ಆಗ ನನಗೆ ಭಯ ಇತ್ತು. ಆದರೆ ಈಗ, ಆ ಪುಣ್ಯಾತ್ಮ ಹೇಳಿದ್ದು ನಿಜ ಅನಿಸುತ್ತಿದೆ. ಇಲ್ಲಿನ ಜನರ ಪ್ರೀತಿ ನೋಡಿ ಖುಷಿಯಾಗಿದೆ ಎಂದು ವಿ. ಸೋಮಣ್ಣ ಹೇಳಿದರು. ಅಭಿವೃದ್ಧಿ ಕೆಲಸ‌ ಮಾಡುವವನಿಗೆ ಯಾವುದೇ ಜಾತಿ, ಗ್ರಾಮ ಇಲ್ಲ. ಬಸವಣ್ಣ ಅವರ ವಿಚಾರಧಾರೆ ಅಳವಡಿಸಿಕೊಂಡವನು ನಾನು ಎಂದರು.

    ಡಬಲ್ ಇಂಜಿನ್ ಸರ್ಕಾರ

    ವರುಣಗೆ ಮೇ. 2ಕ್ಕೆ ಅಮಿತ್ ಷಾ ಮತ್ತು ಮೇ. 4ಕ್ಕೆ ಪ್ರಧಾನಿ ಮೋದಿ ಬರುತ್ತಾರೆ. ಇದು ಡಬಲ್ ಇಂಜಿನ್ ಸರ್ಕಾರ. ಇದನ್ನು ಬೆಂಬಲಿಸಿ ಎಂದು ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಅವರು ಅಬ್ಬರದ ಪ್ರಚಾರ ಮಾಡಿದರು. (ದಿಗ್ವಿಜಯ ನ್ಯೂಸ್​)

    ಕೇಂದ್ರದ ಯೋಜನೆಗಳಲ್ಲಿ ತಾರತಮ್ಯ ತೋರಿಸಿದ್ರೆ ರಾಜಕೀಯದಿಂದ ನಿವೃತ್ತಿ: ರಾಜೀವ್ ಚಂದ್ರಶೇಖರ್ ಹೇಳಿಕೆ

    ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ: ಮಂಡ್ಯದಲ್ಲಿ ಸಿಎಂ ಯೋಗಿ ಅಬ್ಬರದ ಪ್ರಚಾರ

    ಅತಂತ್ರ ಆದರೆ ಸಾಕು… ಸಿಎಂ ಆಗುತ್ತೇನೆಂದು ಒಬ್ಬರು ಕಾದು ಕುಳಿತಿದ್ದಾರೆ! ಸುಮಲತಾ ಅಂಬರೀಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts