More

    ಕೇಂದ್ರದ ಯೋಜನೆಗಳಲ್ಲಿ ತಾರತಮ್ಯ ತೋರಿಸಿದ್ರೆ ರಾಜಕೀಯದಿಂದ ನಿವೃತ್ತಿ: ರಾಜೀವ್ ಚಂದ್ರಶೇಖರ್ ಹೇಳಿಕೆ

    ಬೆಂಗಳೂರು: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಜಾರಿಗೆ ತಂದ ಯೋಜನೆಗಳಲ್ಲಿ ಎತ್ತಿ ತೋರಿಸಿದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

    ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಮೋದಿಯವರು ಎಲ್ಲರನ್ನು ಒಳಗೊಂಡ ವಿಕಾಸ ಬರೀ ಮಾತಿನಲ್ಲಲ್ಲ, ಕೃತಿಗೂ ಇಳಿಸಿದ್ದಾರೆ. ಎಲ್ಲ ಯೋಜನೆಗಳ ಫಲವನ್ನು ಹಿಂದು ಮುಸ್ಲಿಮ್, ಜಾತಿ ವರ್ಗ ಬೇಧವಿಲ್ಲದೆ ಹಂಚಿದೆ ಎಂದು ಹೇಳಿದರು.

    ಇದನ್ನೂ ಓದಿ: ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ: ಮಂಡ್ಯದಲ್ಲಿ ಸಿಎಂ ಯೋಗಿ ಅಬ್ಬರದ ಪ್ರಚಾರ

    ಸಂವಿಧಾನಕ್ಕೆ ವಿರುದ್ಧವಾದ ಧರ್ಮಾಧಾರಿತ ಮೀಸಲು ಸೌಲಭ್ಯವನ್ನು ಬಿಜೆಪಿ ಸದಾ ವಿರೋಧಿಸುತ್ತದೆ. ರಾಜ್ಯ ಸರ್ಕಾರ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲು ಕೈಬಿಟ್ಟು, ಬೇರೆ ವರ್ಗದಲ್ಲಿ ಸೇರಿಸಲಾಗಿದೆ. ಸರ್ಕಾರದ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಆದರೆ ಮೇ 9ಕ್ಕೆ ವಿಚಾರಣೆ ನಿಗದಿಪಡಿಸಿರುವ ಕಾರಣ ಅಲ್ಲಿಯವರೆಗೆ ಆದೇಶ ಜಾರಿಗೆ ತರುವುದಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದರು.

    ಇದೇ ಸಂದರ್ಭದಲ್ಲಿ ‘ಅಸತೋಮ ಸದ್ಗಮಯ’ ಕಿರು ಹೊತ್ತಗೆ ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್, ಈ ಚುನಾವಣೆ ಕಾಂಗ್ರೆಸ್ ನ ಸುಳ್ಳುಗಳು ವರ್ಸಸ್ ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಎಂದು ವಿಶ್ಲೇಷಿಸಿದರು.

    ಯಡಿಯೂರಪ್ಪ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುತ್ತಿದ್ದಾರೆ: ಜಗದೀಶ​ ಶೆಟ್ಟರ್​

    ಅತಂತ್ರ ಆದರೆ ಸಾಕು… ಸಿಎಂ ಆಗುತ್ತೇನೆಂದು ಒಬ್ಬರು ಕಾದು ಕುಳಿತಿದ್ದಾರೆ! ಸುಮಲತಾ ಅಂಬರೀಶ್

    ಮೋದಿ ಹೆಸರನ್ನು ಕರ್ನಾಟಕದಲ್ಲಿ ಬಿಜೆಪಿ ಬಳಸಿಕೊಳ್ಳುವುದರಲ್ಲಿ ತಪ್ಪೇನು? ನಿರ್ಮಲಾ ಸೀತಾರಾಮನ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts