More

    ಮಹಿಳೆಯ ದೂರನ್ನು ಹೊಗಳಿಕೆಯೆಂದು ಹೇಳಿ ರಾಹುಲ್​ ಗಾಂಧಿಗೆ ಮಂಕುಬೂದಿ ಎರಚಿದ ಪುದುಚೇರಿ ಸಿಎಂ

    ಪುದುಚೇರಿ: ರಾಷ್ಟ್ರೀಯ ನಾಯಕರು ರಾಜ್ಯಗಳಿಗೆ ತೆರಳಿದಾಗ ಅಲ್ಲಿ ಅವರು ಮಾಡುವ ಭಾಷಣವನ್ನು ಅನುವಾದಕರು ತಪ್ಪಾಗಿ ಹೇಳುವುದನ್ನು ನೋಡಿರುತ್ತೀರಿ. ಆದರೆ ಪುದುಚೇರಿಯಲ್ಲಿ ಬೇರೆಯದ್ದೇ ರೀತಿಯಲ್ಲಿ ಇಂತಹ ತಪ್ಪು ನಡೆದಿದೆ. ಮೀನುಗಾರ ಮಹಿಳೆಯೊಬ್ಬಳು ಮುಖ್ಯಮಂತ್ರಿಯ ಬಗ್ಗೆ ರಾಹುಲ್​ ಗಾಂಧಿ ಅವರ ಮುಂದೆ ದೂರನ್ನಿತ್ತರೆ, ಅನುವಾದಕರಾಗಿದ್ದ ಮುಖ್ಯಮಂತ್ರಿ ಅದನ್ನು ಹೊಗಳಿಕೆ ಎಂದು ಹೇಳಿ ರಾಹುಲ್​ ಗಾಂಧಿಗೆ ಮಂಕುಬೂದಿ ಎರಚಿದ್ದಾರೆ.

    ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಎರಡು ದಿನಗಳ ಪುದುಚೇರಿ ಪ್ರವಾಸದಲ್ಲಿದ್ದಾರೆ. ಬುಧವಾರದಂದು ಅವರು ಸೊಲಾಯ್ ನಗರದಲ್ಲಿ ಮೀನುಗಾರರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಸಮಯದಲ್ಲಿ ಮೀನುಗಾರ ಮಹಿಳೆಯೊಬ್ಬಳು ಎದ್ದು ನಿಂತು ನಾಯಕನ ಎದುರು ದೂರನ್ನು ಹೇಳಿದ್ದಾರೆ. “ಸೈಕ್ಲೋನ್ ಸಮಯದಲ್ಲಿ ಯಾರೊಬ್ಬರೂ ನಮಗೆ ಸಹಾಯ ಮಾಡಲಿಲ್ಲ. ಸರ್ಕಾರವಾಗಲೀ ಅಥವಾ ಮುಖ್ಯಮಂತ್ರಿಗಳಾಗಲೀ ಒಬ್ಬರೂ ಸಹಾಯಕ್ಕೆ ಬರಲೇ ಇಲ್ಲ” ಎಂದು ಆಕೆ ಹೇಳಿದ್ದಾರೆ. ಆಕೆ ತಮಿಳಿನಲ್ಲಿ ಹೇಳಿದ ಮಾತನ್ನು ಸ್ವತಃ ಮುಖ್ಯಮಂತ್ರಿ ನಾರಾಯಣಸಾಮಿಯೇ ಇಂಗ್ಲಿಷ್​ಗೆ ಅನುವಾದ ಮಾಡಿ ರಾಹುಲ್​ ಗಾಂಧಿಗೆ ಒಪ್ಪಿಸಿದ್ದಾರೆ. “ಸೈಕ್ಲೋನ್​ ಸಮಯದಲ್ಲಿ ನಾನು ಅವರ ಬಳಿ ಹೋಗಿದ್ದೆ. ಅವರಿಗೆಲ್ಲ ಸಹಾಯ ಮಾಡಿದ್ದೆ. ಅದನ್ನೇ ಅವರು ಹೇಳುತ್ತಿದ್ದಾರೆ” ಎಂದು ಹೇಳಿ ಆರೋಪವನ್ನು ಹೊಗಳಿಕೆಯಾಗಿ ಬದಲಾಯಿಸಿಕೊಂಡಿದ್ದಾರೆ.

    ನಾರಾಯಣಸಾಮಿಯ ಈ ನಡೆಯ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಈ ವಿಚಾರವಾಗಿ ಟ್ವೀಟ್​ ಮಾಡಿದ್ದು, “ಕಾಂಗ್ರೆಸ್​ ನಾಯಕರು ಸುಳ್ಳು ಹೇಳುವುದರಲ್ಲಿ ರಾಹುಲ್​ ಗಾಂಧಿಯೊಂದಿಗೆ ಸ್ಪರ್ಧೆಗೆ ನಿಂತಿದ್ದಾರೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಪ್ರೇಯಸಿಯನ್ನು ಇಂಪ್ರೆಸ್​ ಮಾಡಲು ಗುಪ್ತಾಂಗಕ್ಕೆ ಸ್ಟೀಲ್​ ರಿಂಗ್ ಹಾಕಿಕೊಂಡ ಯುವಕ! ಮುಂದೇನಾಯ್ತು ಗೊತ್ತಾ?

    ಪೆಟ್ರೋಲ್ ದರ 100 ರತ್ತ: ಪ್ರಧಾನಿ ಮೋದಿ ಏನಂದ್ರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts