More

    ನಾಳೆ ಆರಂಭವಾಗಬೇಕಿದ್ದ ಏಕೀಕೃತ ಪದವಿ ಪ್ರವೇಶ ಪ್ರಕ್ರಿಯೆಗೆ ತಡೆ; ಸರ್ಕಾರಿ, ಅನುದಾನಿತ, ಖಾಸಗಿ ಪದವಿ ಕಾಲೇಜುಗಳಿಗೆ ಅನ್ವಯ

    ಬೆಂಗಳೂರು: ನಾಳೆ ಬುಧವಾರ (ಆ. 4) ಆರಂಭವಾಗಬೇಕಾಗಿದ್ದ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಏಕೆಂದರೆ, ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಪದವಿ ಕಾಲೇಜುಗಳ ಪ್ರವೇಶಕ್ಕೆ (ಯುನಿಫೈಡ್​ ಯುನಿವರ್ಸಿಟಿ ಆ್ಯಂಡ್ ಕಾಲೇಜ್ ಮ್ಯಾನೇಜ್ ಸಿಸ್ಟಂ- ಯುಯುಸಿಎಂಎಸ್) ಜಾರಿಗೊಳಿಸುತ್ತಿದ್ದು, ತಾಂತ್ರಿಕ ಕಾರಣದಿಂದಾಗಿ ಬುಧವಾರದಿಂದ ಆರಂಭ ಆಗುವುದಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

    ಈಗಾಗಲೇ ಬಹುತೇಕ ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳಿಸಿವೆ. ಸೀಟು ಪಡೆದುಕೊಳ್ಳುವ ಆಸೆಯಿಂದ ವಿದ್ಯಾರ್ಥಿಗಳು ಬಹುತೇಕ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ 430 ಸರ್ಕಾರಿ ಕಾಲೇಜುಗಳು ಇನ್ನೂ ಪ್ರವೇಶ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದೀಗ ತಾಂತ್ರಿಕ ದೋಷ ಉದ್ಭವಿಸಿದೆ. ಇದು ಸರಿಪಡಿಸಲು ಕನಿಷ್ಠ ಮೂರು-ನಾಲ್ಕು ದಿನಗಳ ಅವಶ್ಯಕತೆ ಇದೆ. ಇಲಾಖೆ ಮೂಲಗಳ ಪ್ರಕಾರ ಪ್ರವೇಶ ಪ್ರಕ್ರಿಯೆ ಕನಿಷ್ಠ ಒಂದು ತಡವಾಗಲಿದೆ. ಕಾಲೇಜು ಶಿಕ್ಷಣ ಇಲಾಖೆಯು ಮುಂದಿನ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಿದ್ದು, ಇಲ್ಲಿಯವರೆಗೆ ರಾಜ್ಯದ ಎಲ್ಲ ಪದವಿ ಕಾಲೇಜುಗಳ ಪ್ರಾಂಶುಪಾಲರು ಪ್ರವೇಶ ಕಲ್ಪಿಸಬಾರದು ಎಂದು ಎಚ್ಚರಿಕೆ ನೀಡಿದೆ.

    ಈ ಮೂಲಕ ಬಹುನಿರೀಕ್ಷಿತ ಯೋಜನೆಯೊಂದಕ್ಕೆ ಹಿನ್ನಡೆ ಉಂಟಾದಂತಾಗಿದೆ. ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷೆ, ಮಾನವ ಸಂಪನ್ಮೂಲ ನಿರ್ವಹಣೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸೇರಿ ಎಲ್ಲ ಪ್ರಕ್ರಿಯೆಗಳಲ್ಲಿ ಏಕರೂಪದ ಕಾರ್ಯ ಸ್ವರೂಪವನ್ನು ನೆಲೆಗೊಳಿಸುವುದು ಇದರ ಉದ್ದೇಶವಾಗಿತ್ತು.

    ಲವ್​ ಮಾಡಲ್ಲ ಅಂದಿದ್ದಕ್ಕೆ ಕಪಾಳಕ್ಕೆ ಬಾರಿಸಿದ ಮ್ಯಾನೇಜರ್​; ಹೊಡೆದ ರಭಸಕ್ಕೆ ದಿಢೀರ್ ಬಿದ್ದ ಯುವತಿ..

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ನೇಣು ಹಾಕಿದ ಸ್ಥಿತಿಯಲ್ಲಿ 10ನೇ ತರಗತಿ ಹುಡುಗಿ; ಜೊತೆಗಿದ್ದ ಯುವಕನೇ ಕೊಂದನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts