More

    ದೇಶದ ಪ್ರಥಮ ಕಲ್ಲುಹೂವು ಉದ್ಯಾನ ಅಭಿವೃದ್ಧಿಪಡಿಸಿದೆ ಉತ್ತರಾಖಂಡ…!

    ಡೆಹ್ರಾಡೂನ್: ಜಗತ್ತು 20,000 ಕ್ಕೂ ಹೆಚ್ಚು ಜಾತಿಯ ಕಲ್ಲುಹೂವುಗಳಿಗೆ ನೆಲೆಯಾಗಿದೆ. ಅದರಲ್ಲಿ ಸುಮಾರು 2,714 ಭಾರತದಲ್ಲಿ ಕಂಡುಬರುತ್ತವೆ, ಗುಡ್ಡಗಾಡು ರಾಜ್ಯವಾದ ಉತ್ತರಾಖಂಡವೊಂದೇ ತನ್ನ ಭೂಪ್ರದೇಶದಲ್ಲಿ 600 ಕ್ಕೂ ಹೆಚ್ಚು ಕಲ್ಲುಹೂವು ಪ್ರಭೇದಗಳ ಉಪಸ್ಥಿತಿಯನ್ನು ದಾಖಲಿಸಿದೆ. ಕಲ್ಲುಹೂವುಗಳನ್ನು ಸಂರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ಉತ್ತರಾಖಂಡ ಅರಣ್ಯ ಇಲಾಖೆ ಪಿಥೋರಗಢ ಜಿಲ್ಲೆಯ ಮುನ್ಸಿಯಾರಿಯಲ್ಲಿ ದೇಶದ ಮೊದಲ ಕಲ್ಲುಹೂವು ಉದ್ಯಾನವನವನ್ನು ಅಭಿವೃದ್ಧಿಪಡಿಸಿದೆ.

    ಇದನ್ನೂ ಓದಿ: ಪತ್ನಿ ದೂರವಾದ ಮೇಲೆ ಮೂರು ಮಕ್ಕಳನ್ನು ಕೊಂದವ ಆತ್ಮಹತ್ಯೆ ಶರಣಾದ


    1.5 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನದ ಅಭಿವೃದ್ಧಿ 2019 ರಲ್ಲಿ ಪ್ರಾರಂಭವಾಯಿತು. ಸಂರಕ್ಷಣಾ ಪ್ರಯತ್ನವನ್ನು ಬಲಪಡಿಸುವ ಸಲುವಾಗಿ, ಅರಣ್ಯ ಇಲಾಖೆಯು ಸ್ಥಳೀಯರಿಗೆ ಜುರಾಸಿಕ್ ಯುಗದ ಸಸ್ಯವಾದ ಕಲ್ಲುಹೂವುಗಳ ಮಹತ್ವದ ಅರಿವು ಮೂಡಿಸುವ ಗುರಿ ಹೊಂದಿದೆ.
    ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್ ಚತುರ್ವೇದಿ, ರಾಜ್ಯ ಅರಣ್ಯ ಇಲಾಖೆಯು ಉದ್ಯಾನವನ್ನು ಸಂಶೋಧನಾ ಕೇಂದ್ರವಾಗಿ ಅಭಿವೃದ್ಧಿಪಡಿಸಿದೆ ಮತ್ತು ಇದು ಸ್ಥಳೀಯರಿಗೆ ಜೀವನೋಪಾಯಕ್ಕಾಗಿ ಸಹಕಾರ ನೀಡುತ್ತದೆ. ಅಂದಾಜು 150 ಜಾತಿಯ ಕಲ್ಲುಹೂವುಗಳಿಗೆ ಮುನ್ಸ್ಯಾರಿಯ ನೆಲೆಯಾಗಿದೆ ಎಂದು ಅವರು ಹೇಳಿದರು.

    ಇದನ್ನೂ ಓದಿ:  ಅತ್ಯಾಚಾರ ಆರೋಪ, ಪೇದೆ ಬಂಧನ


    ಸಾರ್ವಜನಿಕರಿಗೆ ಮತ್ತು ಸಂಶೋಧಕರಿಗೆ ಉದ್ಯಾನವನವನ್ನು ತೆರೆಯಲು ಅನುಮತಿ ಪಡೆಯಲು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
    ಕಲ್ಲುಹೂವಿನ ವಿಶೇಷತೆ ಏನು? : ಕಲ್ಲುಹೂವು ಒಂದು ‘ಸಂಯೋಜಿತ’ ಜುರಾಸಿಕ್ ಯುಗದ ಜೀವಿಯಾಗಿದೆ. ಇದು ಪಾಚಿಗಳು ಅಥವಾ ಸೈನೋಬ್ಯಾಕ್ಟೀರಿಯಾ ಮತ್ತು ಕೆಲವು ಶಿಲೀಂಧ್ರ ಜಾತಿಗಳ ನಡುವಿನ ಸಹಜೀವನದ ಸಂಬಂಧದಿಂದ ರೂಪುಗೊಳ್ಳುತ್ತದೆ. ಕಲ್ಲುಹೂವುಗಳು ಯಾವುದೇ ಮೇಲ್ಮೈಯಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ.


    ಕಲ್ಲು ಹೂವುಗಳ ಉಪಯೋಗಗಳನ್ನು ಎತ್ತಿ ತೋರಿಸಿದ ಚತುರ್ವೇದಿ, “ ಇದು ಪ್ರಸಿದ್ಧ ಹೈದರಾಬಾದಿ ಬಿರಿಯಾನಿ ತಯಾರಿಕೆಯಲ್ಲಿ ಬಳಸುವ ಪ್ರಮುಖ ಅಂಶವಾಗಿದೆ. ಇದಲ್ಲದೆ, ಕನ್ನೌಜ್​​ನಲ್ಲಿ ಸ್ಥಳೀಯ ಸುಗಂಧ ದ್ರವ್ಯಗಳನ್ನು ತಯಾರಿಸಲು ಕಲ್ಲುಹೂವುಗಳನ್ನು ಬಳಸಲಾಗುತ್ತದೆ. ಅವುಗಳನ್ನು ಸನ್‌ಸ್ಕ್ರೀನ್ ಕ್ರೀಮ್‌ಗಳು, ವರ್ಣಗಳು ಮತ್ತು ಕೆಲವು ಔಷಧಿಗಳಲ್ಲಿಯೂ ಬಳಸಲಾಗುತ್ತದೆ.

    ಇದನ್ನೂ ಓದಿ:  ಲಡಾಖ್ ಗಡಿಗೆ ವಾಯುರಕ್ಷಣಾ ವ್ಯವಸ್ಥೆ ರವಾನೆ; ಚೀನಾ ಸೇನಾ ಜಮಾವಣೆಗೆ ಭಾರತ ಪ್ರತ್ಯುತ್ತರ


    ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಉತ್ತರಾಖಂಡ ಅರಣ್ಯ ಇಲಾಖೆ ಹಲ್ದ್ವಾನಿ ಯಲ್ಲಿ ರಾಜ್ಯದ ಅತಿದೊಡ್ಡ ಜೀವವೈವಿಧ್ಯ ಉದ್ಯಾನವನವನ್ನು ತೆರೆದಿದೆ. ಈ ಉದ್ಯಾನವನವು ಅಂದಾಜು 500 ಹೂವಿನ ಪ್ರಭೇದಗಳಿಗೆ ನೆಲೆಯಾಗಿದೆ ಮತ್ತು ಇದು 18 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. 

    ಶೋಹೇಬ್ ಗೆ ಮನದ ಮೂಲೆಯಲ್ಲೇನೋ ಒಂದು ಕೊರಗು ಇದೆಯಂತೆ, ಏನದು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts