More

    ‘ಅಮಾವಾಸ್ಯೆಯಂದು ಗಂಗಾ ಸ್ನಾನ ಮಾಡಬೇಡಿ…’

    ಡೆಹ್ರಾಡೂನ್​: ಕರೊನಾ ವೈರಸ್​ ಸೊಂಕಿನ ಪ್ರಸರಣ ವಿಪರೀತವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್ ಅವರು ರಾಜ್ಯದ ಜನರಲ್ಲಿ ಒಂದು ಮನವಿ ಮಾಡಿದ್ದಾರೆ.

    ಜುಲೈ 20ರಂದು ಸೋಮವತಿ ಅಮಾವಾಸ್ಯೆಯಿದ್ದು, ಅಂದು ಯಾರೂ ಗಂಗಾ ನದಿಯಲ್ಲಿ ಸ್ನಾನ ಮಾಡಬೇಡಿ ಎಂದು ಹೇಳಿದ್ದಾರೆ.
    ಸೋಮವತಿ ಅಮಾವಾಸ್ಯೆ ದಿನ ಅನೇಕ ಭಕ್ತರು ಹರಿದ್ವಾರಕ್ಕೆ ಹೋಗಿ, ಗುಂಪುಗುಂಪಾಗಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಇದೆ. ಆದರೆ ಆದರೆ ಈಗ ಕರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಈ ಆಚರಣೆಗೆ ಕಡಿವಾಣ ಹಾಕಿ. ಗಂಗಾ ದೇವಿಯನ್ನು ನಿಮ್ಮ ಮನೆಗೇ ತೆಗೆದುಕೊಂಡು ಹೋಗಿ, ಸ್ನಾನ ಮಾಡಿ. ಕರೊನಾ ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಸಹಕರಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಧಿಕೃತ ಸಂಖ್ಯೆಯನ್ನು ಬಹಿರಂಗ ಪಡಿಸಿದ ಐಎಂಎ

    ಕರೊನಾ ಹತ್ತಿಕ್ಕಲು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಹೋರಾಟ ನಡೆಯುತ್ತಿದೆ. ಆದರೂ ಸೋಂಕು ಪ್ರಸರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಜನರ ಸಹಕಾರ ತುಂಬ ಮುಖ್ಯ ಎಂದು ತ್ರಿವೇಂದ್ರ ಸಿಂಗ್​ ರಾವತ್​ ತಿಳಿಸಿದ್ದಾರೆ.(ಏಜೆನ್ಸೀಸ್​)

    ಮುಖ್ಯಮಂತ್ರಿ ಯೋಗಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ತಾಯಿ-ಮಗಳು; ಮೂವರು ಪೊಲೀಸರು ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts