More

    ಖಾಸಗಿ ಬಸ್​ನಲ್ಲಿ ಮನೆಗೆ ಮರಳುತ್ತಿದ್ದ ಮಹಿಳೆ ಮೇಲೆ ಮಾರ್ಗ ಮಧ್ಯೆಯೇ ರೇಪ್​ ಮಾಡಿದ ಕ್ಲೀನರ್​

    ನವದೆಹಲಿ: ಶನಿವಾರ ಯಮುನಾ ಹೆದ್ದಾರಿಯಲ್ಲಿ ಖಾಸಗಿ ಬಸ್​ ಒಂದರಲ್ಲಿ ಮನೆಗೆ ಮರಳುತ್ತಿದ್ದ ದೆಹಲಿ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಬಸ್​ನಲ್ಲಿದ್ದ ಸಿಬ್ಬಂದಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದು, ಈ ವೇಳೆ ಬಸ್​ ಲಖನೌದಿಂದ ದೆಹಲಿಗೆ ತೆರಳುತ್ತಿತ್ತು. ಶನಿವಾರ ಬೆಳಗ್ಗೆ ಬಸ್​ ಮಥುರಾದಲ್ಲಿನ ಮಂತ್​ ಪ್ಲಾಜಾ ಬಳಿ ಬರುತ್ತಿದ್ದಂತೆ ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿ ಬಸ್​ ಕ್ಲೀನರ್​ ರೇಪ್​ ಮಾಡಿದ್ದಾಗಿ ಮಾಹಿತಿ ನೀಡಿದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಬಸ್​ ಕ್ಲೀನರ್​ ರವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಸ್​ ತಪಾಸಣೆಯನ್ನು ನಡೆಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ ಬಳಿಕ ಆಕೆಯನ್ನು ಪೊಲೀಸ್​ ಬೆಂಗಾವಲಿನಲ್ಲಿ ದೆಹಲಿಯ ರೋಹಿಣಿ ಏರಿಯಾದಲ್ಲಿನ ಅವರ ಮನೆಗೆ ಬಿಟ್ಟು ಬರಲಾಯಿತು.

    ಬಹರೈಚ್​ ಜಿಲ್ಲೆಯ ನಿವಾಸಿಯಾಗಿರುವ ಆರೋಪಿ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts