17 ನಗರಗಳ 217 ಸ್ಥಳಗಳಲ್ಲಿ ಉಚಿತ ವೈಫೈ ನೀಡಲು ಸಿದ್ಧವಾದ ಸರ್ಕಾರ

wifi
Published on

ಲಖನೌ: ಉತ್ತರ ಪ್ರದೇಶದ ಚುನಾವಣೆಗೆ ತಿಂಗಳುಗಳು ಇರುವಾಗಲೇ ರಾಜ್ಯ ಸರ್ಕಾರವು ಮತ್ತೊಂದು ಸೌಲಭ್ಯವನ್ನು ಜನರಿಗೆ ನೀಡಲು ಮುಂದಾಗಿದೆ. ರಾಜ್ಯದ 17 ನಗರಗಳ 217 ಸ್ಥಳಗಳಲ್ಲಿ ಉಚಿತ ವೈಫೈ ನೀಡಲು ವ್ಯವಸ್ಥೆ ಮಾಡಲಾರಂಭಿಸಿದೆ.

ರಾಜ್ಯದಲ್ಲಿ ಈಗಾಗಲೇ ಹಲವು ನಗರಗಳಲ್ಲಿ ಉಚಿತ ವೈಫೈ ವ್ಯವಸ್ಥೆ ನೀಡಲಾಗಿದೆ. ಲಖನೌ, ಕಾನ್ಪುರ, ಆಗ್ರಾ, ಆಲಿಗರ್, ವಾರಣಾಸಿ, ಪ್ರಯಾಗ್​ರಾಜ್, ಝಾನ್ಸಿ, ಬರೇಲಿ, ಸಹರನ್ಪುರ, ಮೊರಾದಾಬಾದ್, ಗೋರಕ್ಪುರ, ಅಯೋಧ್ಯೆ, ಮೀರತ್, ಗಾಜಿಯಾಬಾದ್ ಸೇರಿ ಅನೇಕ ನಗರಗಳ ವಿವಿಧ ಸ್ಥಳಗಳಲ್ಲಿ ವೈಫೈ ವ್ಯವಸ್ಥೆ ಮಾಡಿಕೊಡಲಾಗಿದೆ.

ಇದೀಗ ಉಚಿತ ವೈಫೈ ಸೌಲಭ್ಯವಿರುವ ಸ್ಥಳಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. 217 ಸ್ಥಳಗಳನ್ನು ಗುರುತಿಸಲು ಆಯಾ ನಗರಗಳ ಆಡಳಿತಕ್ಕೆ ತಿಳಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಎಲ್ಲ ಸ್ಥಳಕ್ಕೂ ಉಚಿತವಾಗಿ ಇಂಟರ್​ನೆಟ್ ಲಭ್ಯವಾಗುವಂತೆ ಮಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net