More

    ಉತ್ತರಪ್ರದೇಶದಲ್ಲಿ ಯೋಗಿಗೇ ಯೋಗ; ತಪ್ಪಿದ್ರೆ ಎಸ್​ಪಿಗೆ ಜಾಗ..

    ನವದೆಹಲಿ: ದೇಶದಲ್ಲೇ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶವು ಸದ್ಯ ಚುನಾವಣೆ ನಡೆದಿರುವ ಪಂಚರಾಜ್ಯಗಳ ಪೈಕಿ ಫಲಿತಾಂಶದ ದೃಷ್ಟಿಯಿಂದ ಪ್ರಮುಖವಾಗಿ ಗಮನ ಸೆಳೆಯುವ ರಾಜ್ಯ. ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವರ್ಚಸ್ಸು ಕೂಡ ಯಶಸ್ಸು ಗಳಿಕೆಯಲ್ಲಿ ಪ್ರಮುಖ ಪಾತ್ರ ಇರುವಂಥದ್ದೆಂದರೂ ಅಚ್ಚರಿ ಏನಲ್ಲ.

    ಹೀಗಿರುವಾಗ ಸದ್ಯದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಕೂಡ ಅದನ್ನು ಪುಷ್ಟೀಕರಿಸುವ ರೀತಿಯಲ್ಲೇ ಹೊರಹೊಮ್ಮಿದೆ. ಅಂದರೆ ಪ್ರಮುಖ ಏಜೆನ್ಸಿಗಳ ಎಕ್ಸಿಟ್​ ಪೋಲ್ ಪ್ರಕಾರ ಯೋಗಿಗೇ ಮತ್ತೆ ಯೋಗ, ತಪ್ಪಿದ್ರೆ ಎಸ್​ಪಿಗೆ ಜಾಗ ಎಂಬಂತಿದೆ.

    ಇಂಡಿಯಾ ಟೈಮ್ಸ್ ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ ಉತ್ತರಪ್ರದೇಶದಲ್ಲಿ ಬಿಜೆಪಿಯು 288ರಿಂದ 326, ಟೈಮ್ಸ್ ನೌ ವೇಟೊ ಪ್ರಕಾರ 225, ಜನ್ ಕೀ ಬಾತ್ ಪ್ರಕಾರ 225-260 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಗಳಿಸಿ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷವಾಗಿ ಹೊರಹೊಮ್ಮಲಿದೆ.

    ಇನ್ನು ಇಲ್ಲಿ ಬಿಜೆಪಿ ಬಿಟ್ಟರೆ ಸಮಾಜದವಾದಿ ಪಕ್ಷಕ್ಕೇ ಹೆಚ್ಚಿನ ಸ್ಥಾನಗಳು ಸಿಗುವುದು ಚುನಾವಣೋತ್ತರ ಸಮೀಕ್ಷೆಯಲ್ಲಿ ಕಂಡುಬಂದಿದ್ದು, ಒಂದು ವೇಳೆ ಬಿಜೆಪಿಗೆ ಪರ್ಯಾಯವಾಗಿ ಅಧಿಕಾರ ಹಿಡಿಯುವುದಿದ್ದರೆ ಅದು ಎಸ್​ಪಿಯೇ ಎನ್ನುವ ಲಕ್ಷಣಗಳೂ ಗೋಚರಿಸಿವೆ. ಇತರ ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆಯಲ್ಲೂ ಬಹುತೇಕ ಇದೇ ತೆರನಾದ ಫಲಿತಾಂಶದ ಅಂದಾಜಿದೆ. 

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts