More

    ಆರೋಗ್ಯಕಾರಿ ಆಡುಸೋಗೆ; ವಸಡುಗಳಲ್ಲಿ ಇಟ್ಟುಕೊಳ್ಳುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ 

    ಸಾಮಾನ್ಯವಾಗಿ ಮಲೆನಾಡು ಪ್ರದೇಶಗಳಲ್ಲಿ, ಅದರಲ್ಲೂ ತೋಟದ ಬೇಲಿ, ಹಿತ್ತಲ ಬೇಲಿಗಳಲ್ಲಿ ಆಡುಸೋಗೆ ಗಿಡ ಬೆಳೆಸಲಾಗುತ್ತದೆ. ಇದಕ್ಕೆ ಆಡುಸೋಗೆ, ಅಡಸಾಲ, ಆಡು ಮುಟ್ಟದ ಗಿಡ ಎಂದೆಲ್ಲ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Adhatoda zeylanica. ಇದರ ಎಲೆಗಳು ಮಾವಿನ ಎಲೆಗಳನ್ನು ಹೋಲುತ್ತವೆ.

    ತಿಳಿನೀಲಿ ಬಣ್ಣದ ಇದರ ಹೂಗಳು ಗೊಂಚಲುರೂಪದಲ್ಲಿದ್ದರೆ, ಕಾಯಿಗಳು ಚಪ್ಪಟೆಯಾಗಿರುತ್ತವೆ. ಆಡುಸೋಗೆಯ ಎಲೆ, ಬೇರು, ತೊಗಟೆ, ಹೂ ಎಲ್ಲ ಔಷಧೀಯ ಗುಣ ಹೊಂದಿವೆೆ. ದೇಹದಲ್ಲಿನ ಮಾರಕ ಸೂಕ್ಷಾ್ಮಣುಗಳನ್ನು ಕೊಲ್ಲುವ ಇದು ಮುಖ್ಯವಾಗಿ ಅಸ್ತಮಾ ಕಡಿಮೆ ಮಾಡುವಲ್ಲಿ ಸಹಕಾರಿ.

    • ಒಣಗಿಸಿದ ಆಡುಸೋಗೆ ಎಲೆ, ಅಮೃತಬಳ್ಳಿ, ಶುಂಠಿ, ಜ್ಯೇಷ್ಠಮಧು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು, ಎರಡು ಲೋಟ ನೀರು ಹಾಕಿ, ಒಂದು ಲೋಟ ಆಗುವವರೆಗೂ ಕುದಿಸಿ ಕಷಾಯ ಮಾಡಿಕೊಳ್ಳಬೇಕು. ಅದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಹೊತ್ತು ಕುಡಿದರೆ ಕೆಮ್ಮು, ನೆಗಡಿ, ಜ್ವರ ಕಡಿಮೆಯಾಗುತ್ತದೆ.
    • ಆಡುಸೋಗೆ ಎಲೆಗಳ ಎರಡು ಚಮಚ ಜ್ಯೂಸ್ ಕುಡಿಯುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ.
    • ಆಡುಸೋಗೆ ಎಲೆಯನ್ನು ಬೆಂಕಿಯಲ್ಲಿ ತುಸು ಬಾಡಿಸಿ, ನೆತ್ತಿಯ ಮೇಲಿಟ್ಟು ಬಟ್ಟೆಯಿಂದ ಕಟ್ಟಿ ಮಲಗಿಸುವುದರಿಂದ ಐದು ವರ್ಷದ ಒಳಗಿನ ಮಕ್ಕಳ ಜ್ವರ ಕಡಿಮೆಯಾಗುತ್ತದೆ.
    • ಆಡುಸೋಗೆ ಎಲೆಯನ್ನು ಜಜ್ಜಿ, ಆ ಮಿಶ್ರಣವನ್ನು ವಸಡುಗಳಲ್ಲಿ ಇಟ್ಟುಕೊಳ್ಳುವುದರಿಂದ ವಸಡುಗಳ ರಕ್ತಸ್ರಾವ ಕಡಿಮೆಯಾಗುತ್ತದೆ.
    • ದೇಹದ ಉಷ್ಣತೆ ಮತ್ತು ಕೆಲಸದ ಒತ್ತಡದಿಂದ ಅಂಗಾಲು ಮತ್ತು ಅಂಗೈಗಳಲ್ಲಿ ಉರಿಯ ಅನುಭವವಾಗುತ್ತದೆ. ಆಗ ಆಡುಸೋಗೆ ಎಲೆಯ ಉಗುರುಬೆಚ್ಚಗಿನ ಕಷಾಯದಲ್ಲಿ 15-20 ನಿಮಿಷ ಅಂಗಾಲು, ಅಂಗೈ ಇಟ್ಟುಕೊಂಡರೆ ಉರಿ ಕಡಿಮೆಯಾಗುತ್ತದೆ.
    • ಆಡುಸೋಗೆ ಎಲೆ, ಜ್ಯೇಷ್ಠಮಧು, ಹಿಪ್ಪಲಿ ಇವನ್ನು ಅರೆದು ಕಷಾಯ ಮಾಡಿ, ಸ್ವಲ್ಪ ಜೇನುತುಪ್ಪ ಸೇರಿಸಿ, ದಿನಕ್ಕೆ ಮೂರು ಬಾರಿ ಕುಡಿದರೆ ದಮ್ಮು ನಿಯಂತ್ರಣಕ್ಕೆ ಬರುತ್ತದೆ.
    • ಆಡುಸೋಗೆ ಸೊಪ್ಪು, ಕೊತ್ತಂಬರಿ, 4-5 ಒಣದ್ರಾಕ್ಷಿಗಳನ್ನು ನೀರಿನಲ್ಲಿ ಕಿವುಚಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಮೂತ್ರದಲ್ಲಿನ ರಕ್ತಸ್ರಾವ ಕಡಿಮೆಯಾಗುತ್ತದೆ. ಆಡುಸೋಗೆ ಬೇರಿನ ಕಷಾಯ ಕುಡಿಯುವುದರಿಂದಲೂ ಮೂತ್ರದಲ್ಲಿನ ರಕ್ತಸ್ರಾವ ಕಡಿಮೆಯಾಗುತ್ತದೆ.
    • 4-5 ದಿನ ಆಡುಸೋಗೆ ಹೂವು ಅಥವಾ ಎಲೆಯ ಕಷಾಯ ಕುಡಿಯುವುದರಿಂದ ರಕ್ತ ಶುದ್ಧವಾಗಿರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts