More

    ಕ್ರಿಯಾಶೀಲತೆಯೊಂದಿಗೆ ತಾಳ್ಮೆ ಇದ್ದರೆ ತ್ಯಾಜ್ಯವನ್ನು ರಸವಾಗಿ ಮಾರ್ಪಾಡು ಮಾಡಬಹುದು

    ಹಿರಿಯೂರು: ಕಸದಿಂದ ರಸ ಎನ್ನುವ ಮಾತು ಜನಜನಿತ. ಕ್ರಿಯಾಶೀಲತೆಯೊಂದಿಗೆ ತಾಳ್ಮೆ ಇದ್ದರೆ ತ್ಯಾಜ್ಯವನ್ನು ರಸವಾಗಿ ಮಾರ್ಪಾಡು ಮಾಡಬಹುದು ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಲಕ್ಷ್ಮಿರಾಜೇಶ್ ಹೇಳಿದರು.

    ನಗರದ ಹರಿಶ್ಚಂದ್ರ ಘಾಟ್‌ನ ಬಡಾವಣೆ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಶುಕ್ರವಾರ ಏರ್ಪಡಿಸಿದ್ದ ಕಸದಿಂದ ರಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳು ಮೊಬೈಲ್, ಜಾಲತಾಣ ವೀಕ್ಷಣೆಯಲ್ಲಿ ಕಾಲಹರಣ ಮಾಡದೇ, ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕರಕುಶಲತೆಗೆ ಆದ್ಯತೆ ನೀಡಬೇಕು ಎಂದರು.

    ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರೆಲೆ ಗೊಬ್ಬರ ಬಳಸಿ ಹಣ್ಣು, ತರಕಾರಿ ಬೆಳೆಯಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ, ಸ್ವಚ್ಛ-ಸುಂದರ ಪರಿಸರ ನಿರ್ಮಿಸಬೇಕು ಎಂದು ತಿಳಿಸಿದರು.

    ಕ್ಲಬ್‌ನಿಂದ ಹಾಸ್ಟೆಲ್ ಕೈತೋಟಕ್ಕೆ ಲಿಂಬೆ ಹಾಗೂ ವಿವಿಧ ತರಕಾರಿ ಸಸಿಗಳನ್ನು ವಿತರಿಸಲಾಯಿತು.

    ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳಾದ, ಸೌಮ್ಯ ಪ್ರಶಾಂತ್, ಸುಚಿತ್ರ, ಸರ್ವಮಂಗಳ, ಪದ್ಮ, ರೂಪ, ಶ್ವೇತಾ, ಗೀತಾ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts