More

    ನಕಲಿ ಸಹಿ, ಸೀಲು ಬಳಸಿ ಎನ್‌ಒಸಿ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ಕೃಷಿ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಲು ಪಂಚಾಯಿತಿ ಅಧಿಕಾರಿಗಳ ನಕಲಿ ಸಹಿ, ಸೀಲು ಬಳಕೆ ಮಾಡಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
    ತಾಲೂಕಿನ ಯಂಟಗನಹಳ್ಳಿ ಪಂಚಾಯಿತಿಯ ಯಂಟಗಾನಹಳ್ಳಿ ಸರ್ವೇ ನಂ.21/1 ರಲ್ಲಿನ 1.28 ಎಕರೆ ಮತ್ತು 6 ಎಕರೆ ಹಾಗೂ 21/2ರ 2.10 ಎಕರೆ ಒಟ್ಟಾರೆ 9.38 ಎಕರೆ ಕೃಷಿ ಜಮೀನು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಲು ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಲತೀಫ್‌ಖಾನ್ ಎಂಬಾತ ಅರ್ಜಿ ಸಲ್ಲಿಸಿದ್ದರು. ಭೂಪರಿವರ್ತನೆಗೆ ಬಯಸಿರುವ ಜಮೀನಿನ ಮಾಲೀಕ ರಸ್ತೆ, ರಾಜಕಾಲುವೆ ಒತ್ತುವರಿ ಸೇರಿ ವಿವಿಧ ಸಮಸ್ಯೆಗಳಿದ್ದ ಕಾರಣದಿಂದ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ನೀಡಲು ಸರ್ವ ಸದಸ್ಯರ ಸಭೆಯಲ್ಲಿ ನಿರಾಕರಿಸಲಾಗಿತ್ತು.
    ಆದರೆ, ಲತೀಫ್‌ಖಾನ್ ಹಾಗೂ ಕೆಲ ಮಧ್ಯವರ್ತಿಗಳು ಪಂಚಾಯಿತಿ ಅಧಿಕಾರಿಗಳ ಸಹಿ ಹಾಗೂ ಪಂಚಾಯಿತಿ ಸೀಲುಗಳನ್ನು ನಕಲು ಮಾಡಿ, ವಾಣಿಜ್ಯ ಉದ್ದೇಶಕ್ಕಾಗಿ ನಕಲಿ ಎನ್‌ಒಸಿ ಸಿದ್ಧಪಡಿಸಿ, ನೆಲಮಂಗಲ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ನೀಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪಂಚಾಯಿತಿ ಪ್ರತಿನಿಧಿಗಳು ಸಾಮಾನ್ಯಸಭೆಯಲ್ಲಿ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದಲ್ಲದೆ, ಭೂಪರಿವರ್ತನೆಗೆ ಅನುಮತಿ ನೀಡದಂತೆ ನೆ.ಯೋ.ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಹಿಸುವಂತೆ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.

    ಅನುಮಾನಕ್ಕೆ ಎಡೆ: ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸೀಲು, ಸಹಿಯನ್ನು ನಕಲು ಮಾಡಿ ಬಹಳಷ್ಟು ನಕಲಿ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಅನುಮತಿ ಪಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಯಂಟಗಾನಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿನ ದಾಖಲೆಗಳು ಕಳುವಾಗಿದ್ದು, ಈ ಘಟನೆ ಮಾಸುವ ಮುಂಚೆಯೇ ನಕಲಿ ಸೀಲ್ ನಕಲಿ ಸಹಿ ಇರುವ ನಿರಾಕ್ಷೇಪಣಾ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಯಾಗಿದೆ.

    ಅಧ್ಯಕ್ಷ ಕಾರ್ಯಕ್ಕೆ ಮೆಚ್ಚುಗೆ ಯಂಟಗಾನಹಳ್ಳಿ ಗ್ರಾಪಂ ನಕಲಿ ಸಹಿ, ಸೀಲು ಬಳಸಿ ಅಕ್ರಮವಾಗಿ ಅನುಮತಿ ಪಡೆಯಲು ಮುಂದಾಗಿದ್ದ ವಿಷಯ ತಿಳಿದ್ದ ಪಂಚಾಯಿತಿ ಅಧ್ಯಕ್ಷ ರಾಹುಲ್‌ಗೌಡ, ಖದೀಮರ ಅಕ್ರಮಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎನ್‌ಪಿಎಯಿಂದ ದಾಖಲಾತಿ ಪಡೆದು ಅನುಮತಿ ನೀಡದಂತೆ ಅರ್ಜಿ ನೀಡಿ, ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸಾರ್ವಜನಿಕರು ಮೆಚ್ಚುಗೆಗೆ ಪಾತ್ರವಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts