More

    ಮತ್ತೊಂದು ‘ಯುಎಫ್​ಒ’ ಹೊಡೆದುರುಳಿಸಿದ ಅಮೆರಿಕ!

    ಒಟ್ಟಾವಾ, ಕೆನಡಾ: ಅಮೆರಿಕದ ಫೈಟರ್ ಜೆಟ್, ಶನಿವಾರ ಕೆನಡಾದ ಮೇಲೆ ಹಾರುತ್ತಿದ್ದ ‘ಯುಎಫ್​ಒ’ ವನ್ನು (ಅನ್​ನೋನ್​ ಫ್ಲೈಯಿಂಗ್​ ಆಬ್ಜೆಕ್ಟ್​ ಅಥವಾ ಅಪರಿಚಿತ ವಸ್ತು) ಹೊಡೆದುರುಳಿಸಿದೆ. ಒಂದು ವಾರದ ಹಿಂದೆ ಶಂಕಿತ ಚೀನೀ ಪತ್ತೇದಾರಿ ಬಲೂನ್ ಅನ್ನು ನಾಟಕೀಯವಾಗಿ ಉರುಳಿಸಲಾಗಿತ್ತು. ಇದಾದ ಮೇಲೆ ಉತ್ತರ ಅಮೆರಿಕಾ ಖಂಡದ ದೇಶಗಳ ಜಂಟಿ ಕಾರ್ಯಾಚರಣೆಯಲ್ಲಿ ಆಕಾಶದಲ್ಲಿ ಎರಡನೇ ಅಪರಿಚಿತ ವಸದತುವನ್ನು ಹೊಡೆದುರುಳಿಸಲಾಗಿದೆ.

    ನಿಗೂಢವಾಗಿ ವಾಯುಮಾರ್ಗದಿಂದ ನುಸುಳುತ್ತಿರುವ ಇಂತಹ ವಸ್ತುವನ್ನು ತೆಗೆದುಹಾಕಲು ಅವರು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆದೇಶಿಸಿದ್ದರು.

    ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಶುರುಮಾಡಿದ ಕೆನಡಾ ಹಾಗೂ ಅಮೆರಿಕದ ಕಡೆಯಿಂದ ಫೈಟರ್​ ಜೆಟ್​ಗಳನ್ನು ಮಿಷನ್​ ಪೂರ್ಣಗೊಳಿಸಲು ಕಳಿಸಲಾಯಿತು. ಅಮೆರಿಕದ ಎಫ್-22 ನಿಗೂಢ ವಸ್ತುವಿನ ಮೇಲೆ ಯಶಸ್ವಿಯಾಗಿ ಗುಂಡು ಹಾರಿಸಿದೆ. ಈ ಬಗ್ಗೆ ಕೆನಡಾ ಪ್ರಧಾನಿ ಟ್ರೂಡೊ ಶನಿವಾರ ಟ್ವೀಟ್ ಮಾಡಿದ್ದಾರೆ.

    ಯುಕಾನ್‌ನಲ್ಲಿರುವ ಕೆನಡಾದ ಪಡೆಗಳು ವಸ್ತುವಿನ ಅವಶೇಷಗಳನ್ನು ಸಂಗ್ರಹಿಸುತ್ತಿದ್ದು ವಿಶ್ಲೇಷಿಸುತ್ತಿವೆ ಎಂದು ಟ್ರೂಡೊ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts