More

    ಐಫೋನ್‌ನ ಈ ಹೊಸ ಫೀಚರ್ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಅಮೆರಿಕ ಪೊಲೀಸರು

    ಅಮೆರಿಕ: ಐಫೋನ್‌ನ ಹೊಸ ಅಪ್‌ಡೇಟ್‌ ಐಒಎಸ್ 17ನೊಂದಿಗೆ ಬಿಡುಗಡೆಯಾದ ನೇಮ್‌ಡ್ರಾಪ್ (NAMEDROP) ಫೀಚರ್ ಬಗ್ಗೆ ಅಮೆರಿಕದ ಪೊಲೀಸರು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ಓಕ್ಲ್ಯಾಂಡ್ ಕೌಂಟಿ, ಕಾರ್ಮಿ, ಮಿಡ್ಲ್‌ಟೌನ್, ವಾಟರ್‌ಟೌನ್, ಜೆಫರ್ಸನ್ ಹಿಲ್ಸ್, ಫೋರ್ಟ್ ಸ್ಮಿತ್ ನಗರಗಳ ಪೊಲೀಸರು ಈ ಎಚ್ಚರಿಕೆ ನೀಡಿದ್ದು, ಅದರಲ್ಲೂ ಪೋಷಕರಿಗೆ ಸಂಭಾವ್ಯ ಅಪಾಯವನ್ನು ತಡೆಗಟ್ಟಲು ತಮ್ಮ ಮಕ್ಕಳ ಐಫೋನ್‌ ನಲ್ಲಿನ ನೇಮ್‌ಡ್ರಾಪ್ ಫೀಚರ್ ಆಫ್ ಮಾಡಲು ಕರೆ ನೀಡಿದ್ದಾರೆ.

    ಏನಿದು ನೇಮ್‌ಡ್ರಾಪ್?

    ಐಒಎಸ್ 17 ನಲ್ಲಿನ ನೇಮ್‌ಡ್ರಾಪ್ ಫೀಚರ್ ಬಳಕೆದಾರರಿಗೆ ನಿಯರ್ ಫೀಲ್ಡ್ ಕಮ್ಯುನಿಕೇಶನ್ (NFC) ಮೂಲಕ ಇತರ ಐಫೋನ್ ಬಳಕೆದಾರರೊಂದಿಗೆ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಹೊಸ ಐಫೋನ್‌ಗಳಲ್ಲಿ ನೇಮ್‌ಡ್ರಾಪ್ ಅನ್ನು ಪೂರ್ವನಿಯೋಜಿತವಾಗಿ ಹೊಂದಿಸಲಾಗಿದ್ದರೆ, ಹಳೆ ಐಫೋನ್‌ಗಳಲ್ಲಿ ಐಒಎಸ್ 17 ಹೊಸ ಅಪ್‌ಡೇಟ್‌ನೊಂದಿಗೆ ನೇಮ್‌ಡ್ರಾಪ್ ಫೀಚರ್ ಬಳಕೆದಾರರಿಗೆ ಸಿಗಲಿದೆ. ನೇಮ್ ಡ್ರಾಪ್ ಫೀಚರ್​​ನಲ್ಲಿ ಒಂದು ಐಫೋನ್ ಮತ್ತೊಂದು ಐಫೋನ್‌ ಸಮೀಪದಲ್ಲಿರುವಾಗ ಬಳಕೆದಾರರು ತಮ್ಮ ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳಬಹುದು. 

    ನೇಮ್‌ಡ್ರಾಪ್ ಫೀಚರ್ ಅಪಾಯಕಾರಿಯೇ?
    ನೇಮ್‌ಡ್ರಾಪ್ ಫೀಚರ್​​​​​ನಲ್ಲಿ ಯಾವ ಮಾಹಿತಿಗಳನ್ನು ಹಂಚಿಕೊಳ್ಳಬೇಕೆಂದು ನಿರ್ಧರಿಸುವ ಅಧಿಕಾರವನ್ನು ಐಫೋನ್ ತನ್ನ ಬಳಕೆದಾರರಿಗೆ ನೀಡುತ್ತದೆ. ಜೊತೆಗೆ ಬಳಕೆದಾರರೂ ಮಾಹಿತಿ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಡಾಟ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಈ ಫೀಚರ್ ಉಪಯೋಗಿಸಲು ಬಳಕೆದಾರರೂ ತಮ್ಮ ಐಫೋನ್ ಗಳುನ್ನು ಅನ್‌ಲಾಕ್ ಮಾಡಿ ಭೌತಿಕ ಸಂರ್ಪಕಕ್ಕೆ ತರಬೇಕು. ನೇಮ್‌ಡ್ರಾಪ್ ಫೀಚರ್ ಬಳಸಬಾರದೆಂದರೆ, ಸೆಟ್ಟಿಂಗ್ಸ್ ನಲ್ಲಿ ಆಫ್ ಮಾಡಬಹುದು. ಸೆಟ್ಟಿಂಗ್‌ಗಳು > ಸಾಮಾನ್ಯ > ಏರ್‌ಡ್ರಾಪ್ > ಬ್ರಿಂಗಿಂಗ್ ಡಿವೈಸ್ ಟೊಗೇದರ್ ನ್ಯಾವಿಗೇಟ್ ಸ್ವಿಚ್ ಅನ್ನು ಅಫ್ ಮಾಡಬೇಕು. 

    ‘ಕೈಕಾಲು ಮುರಿದು ಭಿಕ್ಷಾಟನೆಗೆ ಬಳಕೆ’: ದೇಶಾದ್ಯಂತ ವ್ಯಾಪಿಸಿದ ಮಕ್ಕಳ ಕಳ್ಳ ಸಾಗಣೆ, ರೆಡ್​​ ಝೋನ್​​​​ನಲ್ಲಿವೆ ಈ 7 ರಾಜ್ಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts