More

    COVID19 ತಡೆ ಸಮರಕ್ಕಾಗಿ ಪಾಕಿಸ್ತಾನಕ್ಕೆ 94 ಲಕ್ಷ ಡಾಲರ್​ ನೀಡಿದ ಅಮೆರಿಕ ಭಾರತಕ್ಕೆ ನೀಡಿದ ಹಣಕಾಸಿನ ನೆರವೆಷ್ಟು!!!?

    ವಾಷಿಂಗ್ಟನ್: ಭಾರತದಿಂದ ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧ ಆಮದು ಮಾಡಿಸಿಕೊಂಡ ಅಮೆರಿಕ ಕರೊನಾ ಸೋಂಕು ತಡೆಗಾಗಿ ಭಾರತ ನಡೆಸುತ್ತಿರುವ ಹೋರಾಟಕ್ಕೆ ನೀಡಿದ ಹಣದ ನೆರವು ಎಷ್ಟು? ಈ ಪ್ರಶ್ನೆಗೆ ಉತ್ತರವನ್ನು ಅಮೆರಿಕದ ಸ್ಟೇಟ್​ ಡಿಪಾರ್ಟ್​ಮೆಂಟ್ ಗುರುವಾರ ನೀಡಿದೆ.

    ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಪಾಸಿಟಿವ್ ಕೇಸ್​ಗಳನ್ನು ಪತ್ತೆ ಹಚ್ಚಲು, ಅದೇ ರೀತಿ ನಿಗಾವಹಿಸುವುದಕ್ಕಾಗಿ ಭಾರತಕ್ಕೆ ಅಮೆರಿಕ ಹಣಕಾಸಿನ ನೆರವು ನೀಡಿದೆ. ಈ ನೆರವು ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳಿಗೆ ವ್ಯಯಿಸುವುದಕ್ಕೆ ನೀಡಲಾಗುತ್ತಿದೆ ಎಂದು ಅಮೆರಿಕ ಹೇಳಿಕೊಂಡಿದೆ.
    ಕಳೆದ 20 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಅಮೆರಿಕವು ಅಂದಾಜು 2.8 ಶತಕೋಟಿ ಡಾಲರ್​ ನೆರವು ನೀಡಿದೆ. ಈ ಪೈಕಿ 1.4 ಶತಕೋಟಿ ಡಾಲರ್​ ಆರೋಗ್ಯ ಸೇವೆಗೆಂದೇ ಕೊಡಲಾಗಿತ್ತು. ಈಗ ಭಾರತಕ್ಕೆ 59 ಲಕ್ಷ ಡಾಲರ್ (ಅಂದಾಜು 45 ಕೋಟಿ ರೂಪಾಯಿ) ನೆರವು ನೀಡಲಾಗುತ್ತಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

    ಇದೇ ವೇಳೆ, ದಕ್ಷಿಣ ಏಷ್ಯಾದಲ್ಲಿ ಅಮೆರಿಕ ಬೇರೆ ಬೇರೆ ರಾಷ್ಟ್ರಗಳಿಗೂ COVID19 ತಡೆಗೆ ನೆರವು ನೀಡಿದ್ದು, ಅಫ್ಘಾನಿಸ್ಥಾನಕ್ಕೆ 1.8 ಕೋಟಿ ಡಾಲರ್, ಬಾಂಗ್ಲಾದೇಶಕ್ಕೆ 96 ಲಕ್ಷ ಡಾಲರ್​, ಭೂತಾನ್​ಗೆ 5 ಲಕ್ಷ ಡಾಲರ್​, ನೇಪಾಳಕ್ಕೆ 18 ಲಕ್ಷ ಡಾಲರ್​, ಪಾಕಿಸ್ತಾನಕ್ಕೆ 94 ಲಕ್ಷ ಡಾಲರ್​ ಮತ್ತು ಶ್ರೀಲಂಕಾಕ್ಕೆ 13 ಲಕ್ಷ ಡಾಲರ್​ ನೆರವು ನೀಡಿದೆ. (ಏಜೆನ್ಸೀಸ್​)

    ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ 99 ವರ್ಷದ ‘ವಾರ್​ ಹೀರೋ’ 125 ಕೋಟಿ ಸಂಗ್ರಹಿಸಿದ್ದು ಹೇಗೆ ಗೊತ್ತಾ?

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts