More

    ನರೇಂದ್ರ ಮೋದಿ ಒಬ್ಬ ಗ್ರೇಟ್ ಜೆಂಟಲ್‌ಮನ್ ಎಂದ ಟ್ರಂಪ್

    ವಾಷಿಂಗ್ಟನ್: ಭಾರತದ ಬಗೆಗಿರುವ ತಮ್ಮ ಗೌರವವನ್ನು ಮತ್ತೊಮ್ಮೆ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬ ಗ್ರೇಟ್ ಜೆಂಟಲ್‌ಮನ್’’ ಎಂದು ಪ್ರಶಂಸಿಸಿದ್ದಾರೆ.

    ಟ್ರಂಪ್ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ವಿಶ್ವದ ನಾಯಕರಲ್ಲಿ ಮೋದಿ ಕೂಡ ಒಬ್ಬರು. ಜಪಾನ್ ಪ್ರಧಾನಿ ಶಿಂಜೊ ಅಬೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆಗೂ ಟ್ರಂಪ್ ಇದೇ ರೀತಿಯ ಉತ್ತಮ ಸಂಬಂಧ ಹೊಂದಿದ್ದಾರೆ. ಇವರೆಲ್ಲರ ಜತೆ ಟ್ರಂಪ್ ಆಗಾಗ ದೂರವಾಣಿ ಮೂಲಕ ಮಾತನಾಡುತ್ತಾರೆ. ಆದರೆ ಅದೆಲ್ಲವೂ ಬಹಿರಂಗವಾಗುವುದಿಲ್ಲ.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟ್ರಂಪ್ ಭಾರತೀಯ ವರದಿಗಾರರನ್ನು ಉದ್ದೇಶಿಸಿ, ‘‘ಮೋದಿ ನನಗೆ ಇಷ್ಟ. ನಿಮ್ಮ ಪ್ರಧಾನಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರು ಒಬ್ಬ ಗ್ರೇಟ್ ಜೆಂಟಲ್‌ಮನ್. ಒಳ್ಳೆಯ ಕೆಲಸ ಮಾಡುತ್ತಾ ಇದ್ದಾರೆ’’ ಎಂದು ಹೇಳಿದರು.

    ಇದನ್ನೂ ಓದಿ: ಛತ್ತೀಸ್​ಗಢದ ಪ್ರಥಮ ಮುಖ್ಯಮಂತ್ರಿ ಜೋಗಿ ಇನ್ನಿಲ್ಲ

    ಮೋದಿ ಜತೆ ತಾವು ಮಾತನಾಡಿದ್ದಾಗಿ ಟ್ರಂಪ್ ಹೇಳುತ್ತಿರುವುದು ಕಳೆದ 15 ದಿನಗಳಲ್ಲಿ ಇದು ಎರಡನೇ ಬಾರಿ. ಆದರೆ ಶ್ವೇತಭವನವಾಗಲಿ, ಭಾರತದ ಪ್ರಧಾನಿ ಕಚೇರಿಯಾಗಲಿ ಈ ಸಂಭಾಷಣೆಯ ಧ್ವನಿಮುದ್ರಿಕೆ ಅಥವಾ ಪತ್ರಿಕಾ ಪ್ರಕಟಣೆಯನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಆದರೆ ಟ್ರಂಪ್ ಬಹಿರಂಗ ಹೇಳಿಕೆಗಳಿಂದಾಗಿ ಈ ಇಬ್ಬರೂ ನಾಯಕರು ಆಗಾಗ ಪರಸ್ಪರ ಚರ್ಚಿಸುತ್ತಾರೆ ಎಂಬುದು ದೃಢಪಟ್ಟಿದೆ.

    ‘‘ಭಾರತದಲ್ಲೂ ನನ್ನನ್ನು ಇಷ್ಟಪಡುವ ಜನರಿದ್ದಾರೆ ಎಂಬುದು ನನಗೆ ಗೊತ್ತಿದೆ. ಅಮೆರಿಕದ ಮಾಧ್ಯಮದವರು ನನ್ನನ್ನು ಇಷ್ಟಪಡುವುದಕ್ಕಿಂತ ಹೆಚ್ಚಾಗಿ ಭಾರತದ ಜನ ಲೈಕ್ ಮಾಡುತ್ತಾರೆ’’ ಎಂದು ಟ್ರಂಪ್ ಹಾಸ್ಯ ಚಟಾಕಿ ಹಾರಿಸಿದರು. ಇತ್ತೀಚೆಗೆ ಅಮೆರಿಕದಲ್ಲಿ ಮಾಧ್ಯಮದವರು ಮತ್ತು ಟ್ರಂಪ್ ನಡುವೆ ಸಂಬಂಧ ಹದಗೆಟ್ಟು ಹೋಗಿರುವುದನ್ನು ಇಲ್ಲಿ ಸ್ಮರಿಸಬಹುದು.

    ಇದನ್ನೂ ಓದಿ: ರಾಜಕೀಯ ವಲಯದಲ್ಲಿ ಶುರುವಾಗಿದೆ ಚಟುವಟಿಕೆ; ತೀವ್ರ ಅಚ್ಚರಿ ಮೂಡಿಸಿದೆ ಡಿ.ಕೆ.ಸುರೇಶ್​ ಹೇಳಿಕೆ

    ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್​ ಟ್ರಂಪ್​ ಚರ್ಚಿಸಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts