More

    ಕಾಶ್ಮೀರ ಸಮಸ್ಯೆ ಬಗೆಹರಿಸಲು ಭಾರತ- ಪಾಕಿಸ್ತಾನದ ನಡುವೆ ಮಧ್ಯಸ್ತಿಕೆ ವಹಿಸಲು ಅಮೆರಿಕ ಸಿದ್ಧ; ಯುಎಸ್​ ಅಧ್ಯಕ್ಷರ ಪುನುರುಚ್ಚಾರ

    ನವದೆಹಲಿ: ಕಾಶ್ಮೀರ ಸಮಸ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ತಿಕೆ ವಹಿಸಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್​ ಪುನುರುಚ್ಚರಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್​, ಕಾಶ್ಮೀರ ವಿಷಯಕ್ಕೆ ನಾನು ಏನು ಸಹಾಯ ಮಾಡಬಹುದು, ಅದನ್ನು ಮಾಡುತ್ತೇನೆ. ಕಾಶ್ಮೀರವು ದೀರ್ಘಕಾಲದವರೆಗೆ ಸಾಕಷ್ಟು ಜನರ ದೃಷ್ಟಿಯಲ್ಲಿ ಮುಳ್ಳಾಗಿದೆ. ಪ್ರತಿ ಕಥೆಗೆ ಎರಡು ಕೊನೆಗಳಿರುತ್ತವೆ ಎಂದು ಹೇಳಿದರು.

    ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಸಮಸ್ಯೆಯಾಗಿದೆ. ಇದಕ್ಕಾಗಿ ಪಾಕಿಸ್ತಾನದವರು ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಅಮೆರಿಕವು ತಾಲಿಬಾನ್​ ಜತೆ ಶಾಂತಿ ಮಾತುಕತೆ ನಡೆಸುತ್ತಿದೆ. ಭಯೋತ್ಪಾದನೆ ಕೊನೆಗಾಣಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಅಫ್ಘಾನಿಸ್ತಾನದಲ್ಲಿ 18 ವರ್ಷಗಳ ನಿರಂತರವಾಗಿ ನಡೆದ ಯುದ್ಧವು ಮಿಲಿಟರಿ ಮತ್ತು ರಾಜಕೀಯವಾಗಿ ಯುಎಸ್ ಮೇಲೆ ಪ್ರಮುಖ ಒತ್ತಡವನ್ನುಂಟು ಮಾಡುತ್ತಿದೆ. ಹೀಗಾಗಿ ಅಲ್ಲಿ ಶಾಂತಿ ಸ್ಥಾಪನೆ ಅಗತ್ಯ. ಮತ್ತು ಇದನ್ನು ಭಾರತವೂ ಸ್ವಾಗತಿಸುತ್ತದೆ ಎಂದು ಭಾವಿಸುತ್ತೇನೆ ಎಂದರು.

    ಭಯೋತ್ಪಾದನೆ ಮತ್ತು ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಎರಡೂ ಭಾರತಕ್ಕೆ ಪ್ರಮುಖ ವಿಷಯಗಳಾಗಿವೆ. ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ತಾಣಗಳನ್ನು ಒದಗಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಫ್ಘಾನಿಸ್ತಾನದ ಭಯೋತ್ಪಾದಕರಿಗೂ ಪಾಕಿಸ್ತಾನ ಬೆಂಬಲ ನೀಡುತ್ತದೆ ಎಂದು ಟ್ರಂಪ್​ ಅಭಿಪ್ರಾಯಪಟ್ಟರು.

    ಅಮೆರಿಕ ಅಧ್ಯಕ್ಷ ಅವರ ಎರಡು ದಿನಗಳ ಭಾರತದ ಪ್ರವಾಸದಲ್ಲಿ ಪಾಕಿಸ್ತಾನ ಮತ್ತು ಭಯೋತ್ಪಾದನೆ ವಿಷಯವಾಗಿ ತಮ್ಮ ಭಾಷಣದಲ್ಲಿ ಚರ್ಚಿಸಿದ್ದಾರೆ. ಅಲ್ಲದೆ ಉಗ್ರ ಚಟುವಟಿಕೆಗೆ ಬೆಂಬಲಿಸುವ ಪಾಕಿಸ್ತಾನದ ನಿಲುವನ್ನೂ ಟೀಕಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts