More

    ಅಮೆರಿಕ ಅಧ್ಯಕ್ಷ ಟ್ರಂಪ್​ ಬಳಿ ಕ್ಷಮೆ ಯಾಚಿಸಿದ ಗೂಗಲ್​ ಮುಖ್ಯಸ್ಥ ಸುಂದರ್​ ಪಿಚೈ

    ವಾಷಿಂಗ್ಟನ್​: ಆಲ್ಫಬೆಟ್​ ಮತ್ತು ಗೂಗಲ್​ ಸಂಸ್ಥೆಯ ಮುಖ್ಯಸ್ಥರಾಗಿರುವ ಸುಂದರ್​ ಪಿಚೈ ತಮಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಆದರೆ ಈ ಕ್ಷಮಾಪಣೆಗೆ ಕಾರಣವೇನು ಎನ್ನುವುದರ ಕುರಿತಾಗಿ ಯಾವುದೇ ನಿಖರ ಮಾಹಿತಿಯನ್ನು ನೀಡಲಾಗಿಲ್ಲ.

    ಇಂದು ಶ್ವೇತಭವನದಲ್ಲಿ ಕರೊನಾ ವೈರಸ್​ನ ವರದಿಯನ್ನು ನೀಡುವ ಸಂದರ್ಭದಲ್ಲಿ ಟ್ರಂಪ್​, ಸುಂದರ್​ ಪಿಚೈ ಅವರು ತಮ್ಮ ಬಳಿ ಕ್ಷಮೆ ಯಾಚಿಸಿರುವುದಾಗಿ ತಿಳಿಸಿದ್ದಾರೆ. ಅವರೇ ಸ್ವತಃ ಕರೆ ಮಾಡಿ ಕ್ಷಮಿಸುವಂತೆ ಕೇಳಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಅವರು ಕ್ಷಮೆ ಯಾಚಿಸಿದ್ದಾರೆ ಎನ್ನುವುದನ್ನು ಟ್ರಂಪ್​ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ಈ ಕುರಿತಾಗಿ ಗೂಗಲ್​ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕರೊನಾ ವೈರಸ್​ ತಡೆಗಟ್ಟುವ ಸಲುವಾಗಿ ಮತ್ತು ಜನರಲ್ಲಿ ವೈರಸ್​ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಗೂಗಲ್​ ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಗೂಗಲ್​ ತನ್ನ ಬಳಕೆದಾರರಿಗೆ ಮಾಹಿತಿ ನೀಡುತ್ತಿದ್ದರೆ ಸೋದರ ಸಂಸ್ಥೆಯಾಗಿರುವ ವೆರಿಲಿ ಒಂದು ವೆಬ್​ಸೈಟ್​ ತಯಾರಿಸುತ್ತಿದ್ದು ಅದರಲ್ಲಿ ಜನರು ತಮ್ಮಲ್ಲಿ ಸೋಂಕಿನ ಲಕ್ಷಣ ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಟ್ರಂಪ್​ ಅವರು ಶುಕ್ರವಾರದಂದು ತಮ್ಮ ಸರ್ಕಾರ ಗೂಗಲ್​ನ ಜತೆ ಸೇರಿಕೊಂಡು ವೆಬ್​ಸೈಟ್​ ತಯಾರಿಸುತ್ತಿರುವುದಾಗಿ ತಿಳಿಸಿದ್ದರು. ಈ ವೆಬ್​ಸೈಟ್​ ಪ್ರಪಂಚದೆಲ್ಲೆಲೆಡೆ ಲಭ್ಯವಾಗಲಿದ್ದು ಜನರಿಗೆ ಸಹಾಯವಾಗಲಿದೆ ಎಂದು ತಿಳಿಸಿದ್ದರು. ಗೂಗಲ್​ನ 1,700 ಸಿಬ್ಬಂದಿ ಇದಕ್ಕೆಂದು ಕೆಲಸ ಮಾಡುತ್ತಿರುವುದಾಗಿಯೂ ತಿಳಿಸಿದ್ದರು. ಇದರ ಬೆನ್ನಲ್ಲೆ ಗೂಗಲ್​ ಕೆಲ ಸ್ಪಷ್ಟನೆಯನ್ನು ನೀಡಿತ್ತು. ತಾವು ಎರಡು ರೀತಿಯ ಕೆಲಸ ಮಾಡುತ್ತಿದ್ದು, ಮಾಹಿತಿಯನ್ನು ಗೂಗಲ್​ ನೀಡುತ್ತಿದ್ದರೆ, ವೆಬ್​ಸೈಟ್​ನ್ನು ವೆರಿಲಿ ತಯಾರಿಸುತ್ತಿದೆ ಎಂದು ತಿಳಿಸಿತ್ತು. ಆ ವೆಬ್​ಸೈಟ್​ ಅಮೆರಿಕದ ಬೇ ಏರಿಯಾಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಸಹ ತಿಳಿಸಿತ್ತು. (ಏಜೆನ್ಸೀಸ್​)

    ಕರೊನಾ ವೈರಸ್​ ಹುಟ್ಟಿದ್ದು ಎಲ್ಲಿ? Covid-19 ಹೆಸರು ಹೇಗೆ ಬಂತು ಗೊತ್ತಾ?

    ಕಾಮೆಂಟರಿಯನ್ನು ಗೌರವವಾಗಿ ಪರಿಗಣಿಸುತ್ತೇನೆ ಹೊರತು ಅದನ್ನೇ ಅರ್ಹತೆ ಅಂದುಕೊಂಡಿಲ್ಲ: ಸಂಜಯ್​ ಮಂಜ್ರೇಕರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts