More

    VIDEO: ಸಬರಮತಿ ಆಶ್ರಮವನ್ನು ವೀಕ್ಷಿಸಿ, ಚರಕ ತಿರುಗಿಸಲು ಯತ್ನಿಸಿದ ಟ್ರಂಪ್​-ಮೆಲಾನಿಯಾ ಟ್ರಂಪ್…​​

    ಅಹಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುವುದು ಮೊದಲು ಖಚಿತವಾಗಿರಲಿಲ್ಲ. ಈ ಬಗ್ಗೆ ಹಲವರ ಆಕ್ಷೇಪ ವ್ಯಕ್ತವಾಗಿತ್ತು.

    ಆದರೆ ಟ್ರಂಪ್​ ಮತ್ತು ಅವರ ಪತ್ನಿ ಭಾರತಕ್ಕೆ ಆಗಮಿಸಿ ಮೊದಲು ಭೇಟಿ ನೀಡಿದ್ದೇ ಗಾಂಧೀಜಿಯವರ ತತ್ವ, ಆದರ್ಶಗಳ ಬಿಂಬವಾಗಿರುವ ಸಬರಮತಿ ಆಶ್ರಮಕ್ಕೆ. ಏರ್​ಪೋರ್ಟ್​ನಿಂದ ನರೇಂದ್ರ ಮೋದಿ ಹಾಗೂ ಟ್ರಂಪ್​ ಬೇರೆಬೇರೆ ಕಾರಿನಲ್ಲಿ ಹೊರಟು ಅಹಮದಾಬಾದ್​ನ ಸಬರಮತಿ ಆಶ್ರಮವನ್ನು ತಲುಪಿದರು.

    ಮೊದಲು ನರೇಂದ್ರ ಮೋದಿಯವರು ಆಶ್ರಮಕ್ಕೆ ತೆರಳಿ, ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಮರ್ಪಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಆಗಮಿಸಿದ ಟ್ರಂಪ್​ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ಬಳಿಕ ಡೊನಾಲ್ಡ್​ ಟ್ರಂಪ್​, ಮೆಲಾನಿಯಾ ಟ್ರಂಪ್​ ಮತ್ತು ನರೇಂದ್ರ ಮೋದಿ ಆಶ್ರಮವನ್ನು ಸುತ್ತಾಡಿದರು. ಟ್ರಂಪ್​ ಮತ್ತು ಮೆಲಾನಿಯಾ ಚರಕವನ್ನು ಕುತೂಹಲದಿಂದ ವೀಕ್ಷಿಸಿ ಅದನ್ನು ತಿರುಗಿಸಲೂ ಪ್ರಯತ್ನಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಆಶ್ರಮದ ಹಾಗೂ ಗಾಂಧಿ ತತ್ವಗಳ ಬಗ್ಗೆ ವಿವರಣೆ ನೀಡಿದರು.

    ಬಳಿಕ ಮೂವರೂ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕುಳಿತು ಮಾತುಕತೆ ನಡೆಸಿದರು. ನಂತರ ಟ್ರಂಪ್​ ಹಾಗೂ ಮೆಲಾನಿಯಾ ಅವರು ಸಂದರ್ಶಕರ ಪಟ್ಟಿಯಲ್ಲಿ ತಮ್ಮ ಭೇಟಿಯ ಬಗ್ಗೆ ಬರೆದು ಸಹಿ ಮಾಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts