More

    ಉರಿಲಿಂಗಪೆದ್ದಿ ಉತ್ಸವ ಮಾ.೨ರಿಂದ

    ಹುಲಸೂರು: ಮಾರ್ಚ್ ೨, ೩ರಂದು ಶ್ರೀ ಶಿವಲಿಂಗೇಶ್ವರ ಶಿವಯೋಗಿಗಳ ೫೫ನೇ ಸ್ಮರಣೋತ್ಸವ, ಉರಿಲಿಂಗಪೆದ್ದಿ ಉತ್ಸವ ಮತ್ತು ಬೌದ್ಧ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣ ಜತೆಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಶ್ರೀ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.

    ಬೇಲೂರಿನಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಸರ್ವರ ಸಹಮತದೊಂದಿಗೆ ಬೌದ್ಧ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಟಿ.ಎಂ. ಭಾಸ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವಾಮೀಜಿಯರ ತುಲಾಭಾರ ನಡೆಯಲಿದ್ದು, ನಾಡಿನ ಸಾಹಿತಿ, ಕಲಾವಿದರು, ರಾಜಕೀಯ ಮುಖಂಡರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದರು.

    ನಾಡಿನ ಹೆಸರಾಂತ ಸಾಹಿತಿಗಳು, ಮಠಾಧೀಶರು, ಶರಣರು, ಕವಿಗಳು, ಭಕ್ತಾದಿಗಳು, ಸಂಗೀತ ಕಲಾವಿದರು ಆಗಮಿಸುತ್ತಿದ್ದು, ಹೆಚ್ಚಿನ ಮಹಿಳೆಯರು ಭಾಗವಹಿಸಬೇಕು. ಎಲ್ಲರೂ ಮೆಚ್ಚುವಂತೆ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಕೋರಿದರು.

    ತಹಸೀಲ್ದಾರ್ ಶಿವಾನಂದ ಮೇತ್ರೆ, ಡಾ.ಗವಿಸಿದ್ದಪ್ಪ ಪಾಟೀಲ್, ಸುರೇಶ ಕಾನೇಕರ, ಸುಭಾಷ ಮಚಕುರೆ, ಭೀಮಸೇನ ವಾಗ್ಮರೆ, ಮಾರುತಿ ಗಂಜಾಗೆರೆ, ದಯಾಸಾಗರ, ಕಾಳಿದಾಸ ಸೂರ್ಯವಂಶಿ, ಜಯಸೇನ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಲಹೆ ನೀಡಿದರು.

    ಪ್ರಮುಖರಾದ ನಾಗಪ್ಪ ನಿಣ್ಣೆ, ಭೀಮಶಾ ವಾಘ್ಮಾರೆ, ಪ್ರಶಾಂತ ವಾಘ್ಮಾರೆ, ಅವಿನಾಶ ಬೆಳ್ಳೆ, ನವನಾಥ ಬೆಳ್ಳೆ, ಗೌತಮ ವಾಘ್ಮಾರೆ, ಶರಣಪ್ಪ ಮಲಶೆಟ್ಟೆ, ವಿನೋದ ಶಿಂಧೆ, ಯೋಗೇಶ ರಾಜಗುರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts