More

    ಪಿಯುಸಿ ಅಂಕಗಳಿಂದ ನಿರಾಶರಾಗಿದ್ದೀರಾ..? ಯುಪಿಎಸ್​ಸಿ ಟಾಪರ್​ಗಳು 12ನೇ ಕ್ಲಾಸ್​ನಲ್ಲಿ ಗಳಿಸಿದ್ದೆಷ್ಟು ನೋಡಿ…!

    ನವದೆಹಲಿ: ನಿನ್ನೆಯಷ್ಟೇ ಸಿಬಿಎಸ್​ಸಿ 12ನೇ ತರಗತಿ ಫಲಿತಾಂಶ ಹಾಗೂ ಇಂದು ದ್ವಿತೀಯ ಪಿಯುಸಿ ರಿಸಲ್ಟ್​ ಪ್ರಕಟಗೊಂಡಿದೆ. ಎಲ್ಲರೂ ಅಂಕಗಳ ಬೆನ್ನತ್ತಿದ್ದಾರೆ. ಟಾಪರ್​ಗಳಿಗೆ ಅಭಿನಂದನೆಗಳ ಸುರಿಮಳೆಯಾದರೆ, ಕಡಿಮೆ ಅಂಕಗಳಿಸಿದವರಿಗೆ ತೆಗಳಿಕೆ ಸಾಮಾನ್ಯ.

    ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ನಿರಾಶರಾದವರಿಗೆಂದೇ ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪರ್​ ಆಗಿ ಐಎಎಸ್​ ಹುದ್ದೆ ಗಿಟ್ಟಿಸಿರುವ ನಿತಿನ್​ ಸಂಘ್ವಾನ್​.

    ಇದನ್ನೂ ಓದಿ: ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…! 

    ಪಿಯುಸಿ ಅಂಕಗಳಿಂದ ನಿರಾಶರಾಗಿದ್ದೀರಾ..? ಯುಪಿಎಸ್​ಸಿ ಟಾಪರ್​ಗಳು 12ನೇ ಕ್ಲಾಸ್​ನಲ್ಲಿ ಗಳಿಸಿದ್ದೆಷ್ಟು ನೋಡಿ...!
    ನಿತಿನ್​ ಸಂಘ್ವಾನ್​ ಅಂಕಪಟ್ಟಿ

    ಟ್ವಿಟರ್​ ಖಾತೆಯಲ್ಲಿ ನಿತಿನ್​ 12ನೇ ತರಗತಿಯ ಅಂಕಪಟ್ಟಿಯನ್ನು ಪ್ರಕಟಿಸಿದ್ದಾರೆ. 18 ವರ್ಷಗಳ ಹಿಂದೆ ಪರೀಕ್ಷೆ ಬರೆದಿದ್ದ ಅವರು, ರಸಾಯನಶಾಸ್ತ್ರದಲ್ಲಿ ಗಳಿಸಿದ್ದು ಕೇವಲ 24. ಉತ್ತೀರ್ಣರಾಗಲು ಬೇಕಾಗಿದ್ದ ಅಂಕಕ್ಕಿಂತ ಒಂದು ಅಂಕವಷ್ಟೇ ಹೆಚ್ಚು. ಇನ್ನು ಭೌತಶಾಸ್ತ್ರದಲ್ಲಿ 33 ಅಂಕ ಪಡೆದಿದ್ದಾರೆ. ಒಟ್ಟಾರೆಯಾಗಿಯೂ ಹೇಳಿಕೊಳ್ಳುವಂಥ ಅಂಕಗಳನ್ನೇನೂ ಅವರು ಗಳಿಸಿರಲಿಲ್ಲ.

    ಯಾವುದೇ ಪರೀಕ್ಷೆಯ ಅಂಕಗಳು ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಅಂಕಗಳಿಲ್ಲ ಎಂಬ ಕೊರಗಿಗೆ ಗುರಿಯಾಗಬೇಡಿ. ಜೀವನ ಯಾವುದೇ ಮಂಡಳಿಯ ಪರೀಕ್ಷೆಗಿಂತ ಹೆಚ್ಚಿನದು ಎಂದು ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಕೋವಿಡ್​ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್​ನಿಂದಲೂ ಜೀವರಕ್ಷಕ ಲಸಿಕೆ 

    ಇನ್ನೊಬ್ಬ ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಪ್ರತಿಕ್ರಿಯಿಸಿ ಇಂಗ್ಲಿಷ್​ನಲ್ಲಿ ನನ್ನದೂ ಇದೇ ಪರಿಸ್ಥಿತಿಯಾಗಿತ್ತು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಹುರುಪು ತುಂಬುವ ಈ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts