More

    ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕೂ ಸ್ಥಾನ ಮಹಿಳೆಯರದ್ದೇ: ಕರ್ನಾಟಕದ 25 ಮಂದಿ ಆಯ್ಕೆ

    ನವದೆಹಲಿ: ನಾಗರೀಕ ಪರೀಕ್ಷೆ ಪಾಸು ಮಾಡುವುದು ಎಂದರೆ ಸಾಮಾನ್ಯ ಸಂಗತಿಯೇನಲ್ಲ. ಇದಕ್ಕೆ ವರ್ಷಾನುಗಟ್ಟಲೆ ಪಟ್ಟ ಶ್ರಮ, ನಿರಂತರ ಅಭ್ಯಾಸ ಇರಲೇಬೇಕು. ಈ ಪರೀಕ್ಷೆಯಲ್ಲಿ ಪಾಸು ಮಾಡುವುದು ದೊಡ್ಡ ಕನಸೇ ಆಗಿರುತ್ತದೆ. ಅದರಲ್ಲೂ ಮೊದಲ ಸ್ಥಾನ ಪಡೆಯುವುದು ಎಂದರೆ ಅದೊಂದು ತಪಸ್ಸೇ ಆಗಿರುತ್ತದೆ. ಇಂತಹ ದೊಡ್ಡ ಪರೀಕ್ಷೆಯನ್ನು ಕೇವಲ ಪಾಸು ಮಾಡಿದ್ದಷ್ಟೇ ಅಲ್ಲದೇ ಮೊದಲ ನಾಲ್ಕೂ ಸ್ಥಾನವನ್ನು ಮಹಿಳೆಯರೇ ತುಂಬುವ ಮೂಲಕ ಈ ನಾಲ್ವರು ದೇಶಕ್ಕೆ ಹೆಮ್ಮೆಯ ಪುತ್ರಿಯರಾಗಿದ್ದಾರೆ.

    2021ನೇ ಸಾಲಿನ ಯುಪಿಎಸ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಕರ್ನಾಟಕದ 25 ಮಂದಿ ಆಯ್ಕೆಯಾಗಿರುವುದು ವಿಶೇಷ.

    ಮೊದಲ ನಾಲ್ಕು ಸ್ಥಾನದಲ್ಲಿ ಮಹಿಳೆಯರೇ ಇದ್ದು, ಶ್ರುತಿ ಶರ್ಮಾ, ಅಂಕಿತಾ ಅಗ್ರವಾಲ್​ ಮತ್ತು ಗಾಮಿನಿ ಸಿಂಗ್ಲಾ ಹಾಗೂ ಐಶ್ವರ್ಯಾ ವರ್ಮಾ ಟಾಪರ್​​ಗಳಾಗಿದ್ದಾರೆ.

    ಯುಪಿಎಸ್​ಸಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಶ್ರುತಿ ಶರ್ಮಾ ಪ್ರಥಮ ಸ್ಥಾನ ಪಡೆದುಕೊಂಡಿದ್ದರ, ಎರಡನೇ ಸ್ಥಾನವನ್ನು ಅಂಕಿತಾ ಅಗ್ರವಾಲ್​ ಮತ್ತು ಮೂರನೇ ಸ್ಥಾನದಲ್ಲಿ ಗಾಮಿನಿ ಸಿಂಗ್ಲಾ ಹಾಗೂ ನಾಲ್ಕನೇ ಸ್ಥಾನದಲ್ಲಿ ಐಶ್ವರ್ಯಾ ವರ್ಮಾ ಇದ್ದಾರೆ.

    ಒಟ್ಟು 685 ಅಭ್ಯರ್ಥಿಗಳು ಪಾಸಾಗಿದ್ದು, ಕರ್ನಾಟಕದ 25 ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ. ಫಲಿತಾಂಶವನ್ನು ಯುಪಿಎಸ್​​ಸಿ ಅಧಿಕೃತ ವೆಬ್​ಸೈಟ್​ http://www.upsc.gov.in ನಲ್ಲಿ ನೋಡಬಹುದು.

    ಯುಪಿಎಸ್​ಸಿ 2021ರ ನಾಗರಿಕ ಸೇವಾ ಪರೀಕ್ಷೆಗಳ ಲಿಖಿತ ಪರೀಕ್ಷೆ ಜನವರಿ ತಿಂಗಳಲ್ಲಿ ಹಾಗೂ ಏಪ್ರಿಲ್​ -ಮೇ ತಿಂಗಳಲ್ಲಿ ಸಂದರ್ಶನ ನಡೆಸಲಾಗಿತ್ತು. (ಏಜೆನ್ಸೀಸ್​)

    UPSC ರಿಸಲ್ಟ್​ ಪ್ರಕಟ: ದೇಶಕ್ಕೆ ಶ್ರುತಿ ಶರ್ಮಾ ಟಾಪರ್​, ದಾವಣಗೆರೆಯ ಅವಿನಾಶ್​ಗೆ 31ನೇ ರ‌್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts