More

    ದೇಸಿ ಸಂಸ್ಕೃತಿಯನ್ನು ಎತ್ತಿಹಿಡಿಯಿರಿ: ನಿಹಿಲ್ ದಾಸ್

    ಹೊಸಪೇಟೆ: ಎಲ್ಲ ನಾಗರಿಕರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಭಾರತೀಯ ಸಂಸ್ಕೃತಿ, ಪರಂಪರೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಗಮನ ಸೆಳೆಯಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ ಡಾ.ನಿಹಿಲ್ ದಾಸ್ ಹೇಳಿದರು.

    ಭಾರತೀಯ ಪುರಾತತ್ವ ಇಲಾಖೆಯಿಂದ ತಾಲೂಕಿನ ಕಮಲಾಪುರದ ಎಎಸ್‌ಐ ಕಚೇರಿಯಿಂದ ರಾಣಿ ಸ್ನಾನಗೃಹ ವರೆಗೆ ಶುಕ್ರವಾರ
    ಹಮ್ಮಿಕೊಂಡಿದ್ದ ಪರಂಪರಿಕ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿ, ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಕಲೆಗಳು ಅಂತಾರಾಷ್ಟಿçÃಯ ಮಟ್ಟದಲ್ಲಿ ಮೇಲ್ಪಂಕ್ತಿ ಹಾಕಿವೆ. ಇಲ್ಲಿನ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ದೇಶ- ವಿದೇಶದ ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಿರುವುದೇ ಅದಕ್ಕೊಂದು ಉತ್ತಮ ಉದಾಹರಣೆ ಎಂದು ಹೇಳಿದರು.

    ಹಿರಿಯ ತಾಂತ್ರಿಕ ಅಧಿಕಾರಿ ಭರಣಿಧರನ್, ಸಹಾಯಕ ತಾಂತ್ರಿಕ ಅಧಿಕಾರಿಗಳಾದ, ರವೀಂದ್ರ, ಸುನಿಲ್‌ಕುಮಾರ್, ಮ್ಯೂಸಿಯಂ ಸಹಾಯಕ ಅಧಿಕಾರಿ ಪ್ರೇಮ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಎಸ್.ಐಎಸ್ ಸಿಬ್ಬಂದಿ, ಮ್ಯೂಸಿಯಂ ಸಿಬ್ಬಂದಿ ಸೇರಿದಂತೆ ಭಾರತೀಯ ಪುರಾತತ್ವ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

    ಪರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಎಸ್‌ಐಎಸ್ ಭದ್ರತಾ ಸಿಬ್ಬಂದಿ, ಎಎಸ್‌ಐ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts