More

    ಒಂದು ರೂಪಾಯಿಗೆ ಸಿನಿಮಾ ನೋಡಿ … ಕನ್ನಡ ಚಿತ್ರಗಳಿಗೊಂದು ಎಕ್ಸ್‌ಕ್ಲೂಸಿವ್ ಆ್ಯಪ್

    ಅಮೇಜಾನ್, ನೆಟ್‌ಫ್ಲಿಕ್ಸ್, ಜೀ5, ಹಾಟ್‌ಸ್ಟಾರ್, ಎಂಎಕ್ಸ್ ಪ್ಲೇಯರ್ ಮುಂತಾದ ಓವರ್ ದಿ ಟಾಪ್‌ಗಳಲ್ಲಿ (ಒಟಿಟಿ) ಕನ್ನಡ ಚಿತ್ರಗಳಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ಈ ಮಧ್ಯೆ ಕನ್ನಡ ಚಿತ್ರಗಳಿಗೆಂದೇ ಎಕ್ಸ್‌ಕ್ಲೂಸಿವ್ ಆದಂತಹ ಒಂದು ಆ್ಯಪ್ ಬಿಡುಗಡೆಯಾಗಿದೆ. ಅದೇ ‘ನಮ್ಮ ಫ್ಲಿಕ್ಸ್’. ‘ರಿಯಲ್ ಸ್ಟಾರ್’ ಉಪೇಂದ್ರ ಇತ್ತೀಚೆಗೆ ಈ ಆ್ಯಪ್ ಬಿಡುಗಡೆ ಮಾಡಿದ್ದಾರೆ.

    ಆ್ಯನ್ವಿಟಾನ್ ಎಂಟರ್‌ಟೈನ್‌ಮೆಂಟ್ ಕಾರ್ಪೊರೇಶನ್ ಎಂಬ ಸಂಸ್ಥೆಯು ಈ ಆ್ಯಪ್ ಹೊರತಂದಿದೆ. ಇದಕ್ಕೂ ಮುನ್ನ ಈ ಸಂಸ್ಥೆಯು ‘ಓಂ’, ‘ಉಪ್ಪಿ 2’ ಮತ್ತು ‘ಕೆಜಿಎಫ್’ ಚಿತ್ರಗಳ ಗೇಮ್ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಎಕ್ಸ್‌ಕ್ಲೂಸಿವ್ ಆದಂತಹ ಒಂದು ಆ್ಯಪ್ ತಯಾರಿಸಿದೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಈ ಆ್ಯಪ್‌ನಲ್ಲಿ ಬರೀ ಕನ್ನಡ ಚಿತ್ರಗಳಿವೆ. ಇನ್ನು ಈ ಆ್ಯಪ್‌ನಲ್ಲಿ ಸಿನಿಮಾ ನೋಡುವುದಕ್ಕೆ ವರ್ಷಕ್ಕೆ 399 ರೂಗಳು ವೆಚ್ಚವಾಗಲಿದ್ದು, ದಿನವೊಂದಕ್ಕೆ ಲೆಕ್ಕ ಹಾಕಿದರೆ, ದಿನವೊಂದಕ್ಕೆ ಒಂದು ರೂಪಾಯಿ 10 ಪೈಸಿ ಖರ್ಚಾದಂತೆ ಆಗುತ್ತದೆ.

    ಈ ಆ್ಯಪ್‌ನಲ್ಲಿ ಸದ್ಯಕ್ಕೆ 50ಕ್ಕೂ ಹೆಚ್ಚು ಚಿತ್ರಗಳಿದ್ದು, ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಚಿತ್ರಳು ಸೇರ್ಪಡೆಯಾಗುತ್ತವೆ ಎನ್ನುತ್ತಾರೆ ಈ ಸಂಸ್ಥೆಯ ಸಿಇಒ ವಿಜಯಪ್ರಕಾಶ್ ಅಕ್ಕರಕಿ. ‘ಬೇರೆ ಒಟಿಟಿಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳು ಸಿಗುತ್ತವೆ. ಕನ್ನಡದ ಚಿತ್ರಗಳು ಎಲ್ಲೋ ಮೂಲೆಯಲ್ಲಿರುತ್ತವೆ. ಆದರೆ, ಇಲ್ಲಿ ಹಾಗಿಲ್ಲ. ಕನ್ನಡ ಚಿತ್ರಗಳಿಗೆಂದೇ ಮಾಡಲಾದ ಎಕ್ಸ್‌ಕ್ಲೂಸಿವ್ ಆ್ಯಪ್ ಇದು. ಹಳೆಯ ಮತ್ತು ಹೊಸ ಕನ್ನಡ ಚಿತ್ರಗಳು ಇಲ್ಲಿವೆ. ‘ಡಿಂಗ’, ‘ಸೆಕೆಂಡ್ ಹಾಫ್​’, ‘ಭಕ್ತ ಪ್ರಹ್ಲಾದ, ‘ಗಿರಿಕನ್ಯೆ’, ‘ಸಂಪತ್ತಿಗೆ ಸವಾಲ್’, ‘ರನ್ನ’, ‘ಐರಾವತ’, ‘ದುನಿಯಾ’ ಮುಂತಾದ ಚಿತ್ರಗಳು ಈಗಾಗಲೇ ಇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳನ್ನು ಸೇರಿಸಲಾಗುತ್ತದೆ’ ಎಂದು ಹೇಳುತ್ತಾರೆ.

    ತಮಿಳುನಾಡಿನಲ್ಲಿ ಸೂರ್ಯ ಸಿನಿಮಾ ಬ್ಯಾನ್ … ಚಿತ್ರ ಪ್ರದರ್ಶನ ರದ್ದು ಮಾಡಲು ಪ್ರದರ್ಶಕರ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts