More

    ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೆಮಿಫೈನಲ್‌ಗೇರಿದ ಬೆಂಗಳೂರು ಬುಲ್ಸ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಸರ್ವಾಂಗೀಣ ನಿರ್ವಹಣೆ ತೋರಿದ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಉಪಾಂತ್ಯಕ್ಕೇರಲು ಯಶಸ್ವಿಯಾಯಿತು. ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ನಡೆದ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಪವನ್ ಶೆರಾವತ್ ಸಾರಥ್ಯದ ಬುಲ್ಸ್ ತಂಡ 49-29 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಲೀಗ್ ಹಂತದ ಕಡೇ ಪಂದ್ಯಗಳಲ್ಲಿ ನೀರಸ ನಿರ್ವಹಣೆ ತೋರಿದ ನಡುವೆಯೂ ಅದೃಷ್ಟದಾಟದಲ್ಲಿ ಅಗ್ರ 6ರೊಳಗೆ ಸ್ಥಾನಗಿಟ್ಟಿಸಿಕೊಂಡಿದ್ದ ಬುಲ್ಸ್ ತಂಡ, ಭರ್ಜರಿ ಪ್ರದರ್ಶನ ತೋರಿತು. 2018ರ ಆವೃತ್ತಿಯ ಫೈನಲ್‌ನಲ್ಲಿ ಬುಲ್ಸ್ ತಂಡ ಗುಜರಾತ್ ತಂಡವನ್ನೇ ಮಣಿಸಿ ಪ್ರಶಸ್ತಿ ಜಯಿಸಿತ್ತು. ಬುಲ್ಸ್ ತಂಡ ಬುಧವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಲೀಗ್ ಹಂತದ ದ್ವಿತೀಯ ಸ್ಥಾನಿ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ.

    ಬುಲ್ಸ್ ಕೈಹಿಡಿದ ಸೂಪರ್‌ಟ್ಯಾಕಲ್ಸ್
    3 ಆಟಗಾರರೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್ ತಂಡ ಆಲೌಟ್ ಭೀತಿ ಎದುರಿಸಿತು. ಈ ವೇಳೆ ಗುಜರಾತ್ ರೈಡರ್‌ಗಳನ್ನು ಸತತ 2 ಬಾರಿ ಸೂಪರ್ ಟ್ಯಾಕಲ್ಸ್ ಮಾಡಿ ಆಲೌಟ್‌ನಿಂದ ಪಾರಾಗಿದ್ದಲ್ಲದೆ, ಮುನ್ನಡೆ ಹೆಚ್ಚಿಸಿಕೊಂಡಿತು. 25ನೇ ನಿಮಿಷದಲ್ಲಿ 2ನೇ ಬಾರಿ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಬುಲ್ಸ್ 35-21ರಿಂದ ಮುನ್ನಡೆ ಉಳಿಸಿಕೊಂಡಿತು. ಸರಾಸರಿ 12ರಿಂದ 15 ಅಂಕಗಳ ಮುನ್ನಡೆ ಕಾಯ್ದುಕೊಂಡ ಬುಲ್ಸ್ ತಂಡ ಯಾವುದೇ ಹಂತದಲ್ಲೂ ಗುಜರಾತ್ ತಂಡವನ್ನು ಪುಟಿದೇಳದಂತೆ ನೋಡಿಕೊಂಡಿತು. 37ನೇ ನಿಮಿಷದಲ್ಲಿ ಮತ್ತೊಮ್ಮೆ ಆಲೌಟ್ ಮಾಡಿದ ಬುಲ್ಸ್ ಗೆಲುವಿನ ಅಂತರವನ್ನು ಹಿಗ್ಗಿಸಿಕೊಂಡಿತು. ರೈಡರ್ ಭರತ್ (6) ಒಂದೇ ರೈಡಿಂಗ್‌ನಲ್ಲಿ 4 ಅಂಕ ತರುವ ಮೂಲಕ ಗಮನಸೆಳೆದರೆ, ಡಿೆಂಡರ್‌ಗಳಾದ ಮಹೇಂದರ್ ಸಿಂಗ್ (5) ಹಾಗೂ ಸೌರಭ್ ನಂಡಾಲ್ (4) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಬುಲ್ಸ್ ಉತ್ತಮ ಆರಂಭ
    ಸ್ಟಾರ್ ರೈಡರ್ ಹಾಗೂ ನಾಯಕ ಪವನ್ ಶೆರಾವತ್ (13) ಹಾಗೂ ಡಿೆಂಡರ್‌ಗಳು ಆರಂಭದಲ್ಲೇ ಗುಜರಾತ್ ತಂಡಕ್ಕೆ ಕಡಿವಾಣ ಹಾಕಿದರು. 12ನೇ ನಿಮಿಷದಲ್ಲಿ 14-8 ರಿಂದ ಮುನ್ನಡೆ ಸಾಧಿಸಿದ ಬೆಂಗಳೂರು ಬುಲ್ಸ್, 14ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿ 19-10ರಿಂದ ಮುನ್ನಡೆ ಕಂಡುಕೊಂಡಿತು. ಈ ವೇಳೆ ಗುಜರಾತ್ ಆಟಗಾರರಿಂದ ಕೊಂಚ ಪ್ರತಿರೋಧ ಎದುರಿಸಿದರೂ ಬುಲ್ಸ್ ತಂಡ 24-17 ರಿಂದ ಮುನ್ನಡೆ ಸಾಧಿಸಿತು.

    ಉಪಾಂತ್ಯಕ್ಕೇರಿದ ಯುಪಿ ಯೋಧಾ
    ಮೊದಲ ಎಲಿಮೀನೇಟರ್ ಹಣಾಹಣಿಯಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ತಿರುಗೇಟು ನೀಡಲು ಯಶಸ್ವಿಯಾದ ಯುಪಿ ಯೋಧಾ ತಂಡ 42-31 ರಿಂದ ಪುಣೇರಿ ಪಲ್ಟಾನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಆರಂಭಿಕ ನಿಮಿಷಗಳಲ್ಲಿ ಪುಣೇರಿ ತಂಡ ಭಾರಿ ಮುನ್ನಡೆ ಸಾಧಿಸುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ (18 ಅಂಕ) ಅಬ್ಬರದ ಲವಾಗಿ ಯುಪಿ ಯೋಧಾ ತಂಡ ಪುಟಿದೆದ್ದಿತು. ಪುಣೆ ತಂಡವನ್ನು ಎರಡು ಬಾರಿ ಆಲೌಟ್ ಮಾಡಿದ ಯುಪಿ ಯೋಧಾ ಮೊದಲಾರ್ಧದಲ್ಲಿ 25-17 ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಕೆಲಕಾಲ ಪುಣೆ ತಂಡ ಪ್ರತಿರೋಧ ತೋರಲು ಯತ್ನಿಸಿದರೂ ಯುಪಿ ಯೋಧಾ ಆಟಗಾರರು ಅವಕಾಶ ನೀಡಲಿಲ್ಲ. ಯುಪಿ ತಂಡದ ಗೆಲುವಿನಲ್ಲಿ ಸುರೇಂದರ್ ಗಿಲ್ (5) ಹಾಗೂ ಡಿಫೆಂಡರ್ ಸುಮಿತ್ (5) ಪ್ರಮುಖ ಪಾತ್ರವಹಿಸಿದರು.

    ವಾರಾಂತ್ಯದೊಳಗೆ ಐಪಿಎಲ್ ವೇಳಾಪಟ್ಟಿ ಪ್ರಕಟ ನಿರೀಕ್ಷೆ; ಹೀಗಿದೆ ಬಿಸಿಸಿಐ ಯೋಜನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts