More

    3.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಡಾಂಬರು ರಸ್ತೆಯನ್ನು ಬರಿಗೈಯಲ್ಲಿ ಕಿತ್ತುಹಾಕಿದ ವ್ಯಕ್ತಿ: ವಿಡಿಯೋ ವೈರಲ್​

    ಪಿಲಿಭಿತ್​: ಸರ್ಕಾರದ ಭ್ರಷ್ಟ ವ್ಯವಸ್ಥೆಗೆ ಕನ್ನಡಿ ಹಿಡಿದಂತಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ನಲ್ಲಿ ನಡೆದಿದೆ. ಹೊಸದಾಗಿ ನಿರ್ಮಾಣ ಮಾಡುತ್ತಿರುವ ಇನ್ನೂ ಪೂರ್ತಿಯಾಗದ ಡಾಂಬರು ರಸ್ತೆಯನ್ನು ವ್ಯಕ್ತಿಯಬ್ಬ ಬರಿಗೈಯಲ್ಲಿ ಕಿತ್ತು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಡಾಂಬರು ರಸ್ತೆಯನ್ನು ಅಂದಾಜು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸರಿಯಾದ ರೀತಿಯಲ್ಲಿ ನಿರ್ಮಾನ ಮಾಡದೇ ತುಂಬಾ ಕಳಪೆ ಕಾಮಗಾರಿ ಮಾಡಿದ್ದು, ಇದರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ. ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಗುತ್ತಿಗೆದಾರರೊಂದಿಗೆ ಸೇರಿ ಜೂನಿಯರ್​ ಇಂಜಿನಿಯರ್​ (ಜೆಇ) ಕಳಪೆ ನಿರ್ಮಾಣ ಮಾಡಿದ್ದಾರೆಂದು ತಿಳಿದುಬಂದಿದೆ.

    ಪುರಾಣಪುರ್​ ಮತ್ತು ಭಗವಂತ್​ಪುರ್​ ನಡುವೆ 7 ಕಿ.ಮೀ ದೂರ ಈ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್​ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ, ರಸ್ತೆ ಮಾತ್ರ ತುಂಬಾ ಕಳಪೆಯಾಗಿದೆ. ಒಂದೆರೆಡು ಬಾರಿ ವಾಹನಗಳು ತಿರುಗಾಡಿದರೆ ಸಾಕು ರಸ್ತೆ ಕಿತ್ತು ಬರುವುದು ಗ್ಯಾರೆಂಟಿ. ಅಷ್ಟರಮಟ್ಟಿಗೆ ರಸ್ತೆ ನಿರ್ಮಾಣ ಕಳಪೆಯಾಗಿದೆ.

    ಭಗವಂತಪುರದ ಸ್ಥಳೀಯರೊಬ್ಬರು ತಮ್ಮ ಕೈಗಳಿಂದ ಡಾಂಬರು ಪದರವನ್ನು ಕಿತ್ತು ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಡಳಿತದ ಗ್ರಾಮೀಣ ಇಂಜಿನಿಯರಿಂಗ್ ವಿಭಾಗದ ಪ್ರತಿನಿಧಿ ಶೈಲೇಂದ್ರ ಚೌಧರಿ, ತನಿಖೆ ನಡೆಸಿ ಕಳಪೆ ಗುಣಮಟ್ಟದ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ ಎಂದಿದ್ದಾರೆ.

    ವಿಡಿಯೋ ವೈರಲ್ ಆದ ಬಳಿಕ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಸೇರಿದಂತೆ ಹಲವಾರು ಪ್ರತಿಪಕ್ಷದ ನಾಯಕರು ಅತಿರೇಕದ ಭ್ರಷ್ಟಾಚಾರಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಖಾಕಿ ವೇಷದಲ್ಲಿರುವ ಗೋಮುಖ ವ್ಯಾಘ್ರ: ಫ್ರೆಂಡ್ಸ್​ ಜತೆಗೂಡಿ ಮಹಿಳೆ ಮೇಲೆ ಇನ್ಸ್​ಪೆಕ್ಟರ್​ನಿಂದ ಗ್ಯಾಂಗ್​ರೇಪ್​

    ಬ್ರೈನ್ ಟ್ಯೂಮರ್​ ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ನಿರ್ದೇಶಕ ಮುರಳಿ ಕೃಷ್ಣ ವಿಧಿವಶ

    ಎಲ್ಲರ ಮುಂದೆ ಬೈದ್ರು ಅಂತ ಈ ಹುಡುಗಿ ಹೀಗೆ ಮಾಡಿಕೊಳ್ಳೋದಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts