More

    ಮನೆಯನ್ನೇ ಪರೀಕ್ಷಾ ಕೇಂದ್ರವನ್ನಾಗಿಸಿಕೊಂಡ ಶಾಲಾ ಗುಮಾಸ್ತ; 11 ಮಂದಿ ಬಂಧನ, ಗುಮಾಸ್ತ ಪರಾರಿ!

    ಡಿಯೋರಿಯಾ (ಉತ್ತರಪ್ರದೇಶ): ಶಾಲೆಯ ಗುಮಾಸ್ತನೊಬ್ಬ ತನ್ನ ಮನೆಯನ್ನೇ ಪರೀಕ್ಷಾ ಕೇಂದ್ರವನ್ನಾಗಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಆ ಗುಮಾಸ್ತ ಪರಾರಿಯಾಗಿದ್ದಾನೆ.

    ಖಾಸಗಿ ಶಾಲೆ ಬಳಿಯೇ ಆ ಗುಮಾಸ್ತನ ಮನೆಯಿತ್ತು. ಆದ್ದರಿಂದ ತನ್ನ ಮನೆಗೆ ಉತ್ತರ ಪತ್ರಿಕೆಗಳನ್ನು ತಂದು ಪಿಯುಸಿ ಪರೀಕ್ಷೆ ಬರೆಸುತ್ತಿದ್ದ. ಅಲ್ಲಿಗೆ ದಾಳಿ ಮಾಡಿದ ಪೊಲೀಸರು ಉತ್ತರ ಪತ್ರಿಕೆಗಳನ್ನು ವಶ ಪಡಿಸಿಕೊಂಡಿದ್ದಾರೆ.

    ವಿಷಯ ತಿಳಿದ ಪೊಲೀಸರು ಆತನ ಮನೆಗೆ ದಾಳಿ ಮಾಡಿದಾಗ ಅಲ್ಲಿ ಕೆಲವರು ಉತ್ತರ ಬರೆಯುತ್ತಿದ್ದರು. ಅದನ್ನು ವಿಡಿಯೋ ಮಾಡಿರುವ ಪೊಲೀಸರು, ಏನು ಮಾಡುತ್ತಿದ್ದೀರಾ ಇಲ್ಲಿ ಎಂದು ಕೇಳಿದಾಗ ಅಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ನಾವು ಉತ್ತರ ಬರೆಯುತ್ತಿದ್ದೇವೆ ಎಂದು ಹೇಳಿದ್ದಾಳೆ. ಕೆಲ ವಿದ್ಯಾರ್ಥಿಗಳಿಂದ ಹಣ ಪಡೆದು ಬೇರೆಯವರ ಬಳಿ ಉತ್ತರ ಬರೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಎಸ್​ಎಸ್ಎಲ್​ಸಿ ಮತ್ತು ಪಿಯು ಪರೀಕ್ಷೆಗಳು ಆರಂಭಗೊಂಡಿದ್ದು ಒಟ್ಟು 56 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

    ಅಲ್ಲದೆ ಅಲ್ಲಿನ ಶಿಕ್ಷಣ ಮಂಡಳಿ ಟ್ವಿಟರ್​, ಇ ಮೇಲ್​ ಹಾಗೂ ಹೆಲ್ಪ್​ಲೈನ್​ ಆರಂಭಿಸಿದೆ. ಸುಗಮ ಮತ್ತು ನ್ಯಾಯಯುತವಾಗಿ ಪರೀಕ್ಷೆ ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೂ ಈ ನಡುವೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಕಳೆದ ವಾರವಷ್ಟೇ ಹೇಗೆ ಮೋಸ ಮಾಡಿ ಪರೀಕ್ಷೆ ಬರೆಯಬೇಕು ಮತ್ತು ನೀವು ನೀವೇ ಮಾತನಾಡಿಕೊಂಡು ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದ ಖಾಸಗಿ ಶಾಲೆಯ ಪ್ರಾಂಶುಪಾಲನನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts