More

    ಸಿಎಎ ವಿರೋಧಿ ಪ್ರತಿಭಟನೆಯಿಂದ 2 ವಾರ ಪಾಲಕರಿಲ್ಲದೇ ಅನಾಥವಾಗಿದ್ದ ಮಗು ಮುಖದಲ್ಲಿ ಮತ್ತೆ ಮೂಡಿದ ಸಂತಸ

    ವಾರಾಣಸಿ: ನಿರಂತರ ಸಾಮಾಜಿಕ ಹೋರಾಟದಲ್ಲಿ ತೊಡಗಿಕೊಂಡಿರುವ ಉತ್ತರ ಪ್ರದೇಶ ವಾರಾಣಸಿ ಮೂಲದ ದಂಪತಿ ಎರಡು ವಾರಗಳ ಹಿಂದೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರಿಂದ ಬಂಧನವಾಗಿದ್ದರು. ಈ ವೇಳೆ ಅವರ 14 ತಿಂಗಳ ಹೆಣ್ಣು ಮಗು ಪಾಲಕರಿಲ್ಲದೇ ಒಂಟಿಯಾಗಿತ್ತು. ಇದೀಗ ಎರಡು ವಾರಗಳ ಬಳಿಕ ದಂಪತಿಗೆ ಜಾಮೀನು ದೊರಕಿದ್ದು, ಇಂದು ಬಿಡುಗಡೆಯಾದ ಅವರು ಮಗುವನ್ನು ಅಪ್ಪಿ ಮುದ್ದಾಡಿದ್ದಾರೆ. ಮಗುವಿನ ಮೊಗದಲ್ಲೂ ಸಂತಸ ಮೂಡಿದೆ.

    ಡಿಸೆಂಬರ್​ 19ರಂದು ವಾರಾಣಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 60ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ ಪ್ರಸಿದ್ಧ ಸಾಮಾಜಿಕ ಹೋರಾಟಗಾರರು ಆಗಿರುವ ರವಿ ಶೇಖರ್​ ಮತ್ತು ಎಕ್ತಾ ದಂಪತಿಯು ಸೇರಿದ್ದರು. ಈ ದಂಪತಿ ವಾಯುಮಾಲಿನ್ಯ ಮೇಲೆ ಬೆಳಕು ಚೆಲ್ಲುವ ಕ್ಲೈಮೆಟ್​ ಅಜೆಂಡಾ ಹೆಸರಿನ ಎನ್​ಜಿಒ ನಡೆಸುತ್ತಿದ್ದಾರೆ. ವಾರಾಣಸಿ ಭಾರತ ಅತ್ಯಂತ ಹೆಚ್ಚು ಮಾಲಿನ್ಯಾಕಾರಿನ ನಗರವಾಗಿದೆ.

    ಬುಧವಾರ ರಾತ್ರಿ ಎಕ್ತಾ ಮತ್ತು ರವಿಶೇಖರ್​ ದಂಪತಿ ಸೇರಿದಂತೆ ಬನಾರಸ್​ ಹಿಂದು ವಿಶ್ವವಿದ್ಯಾಲಯದ ಡಜನ್​ಗಟ್ಟಲೇ ವಿದ್ಯಾರ್ಥಿಗಳಿಗೂ ಜಾಮೀನು ನೀಡಲಾಗಿದೆ. ಎರಡು ವಾರಗಳ ಬಳಿಕ ಜಾಮೀನು ಸಿಕ್ಕಿದ ಖುಷಿಯಲ್ಲಿ ತಮ್ಮ ಮಗುವನ್ನು ನೋಡಲು ದಂಪತಿ ಓಡೋಡಿ ಬಂದಿದ್ದರು. ಈ ಬಗ್ಗೆ ಮಾತನಾಡಿರುವ ಎಕ್ತಾ ಶೇಖರ್​, ನನ್ನ ಮಗಳು ಛಂಪಾಕ್​ ಅಥವಾ ಐರಾ ನನ್ನ ಎದೆ ಹಾಲಿಗೆ ಅವಲಂಬಿತವಾಗಿದ್ದಳು. ಹೀಗಾಗಿ ಜೈಲಿನಲ್ಲಿದ್ದಾಗ ನಾನು ಚಿಂತಾಕ್ರಾಂತಳಾಗಿದ್ದೆ. ನಿಜಕ್ಕೂ ನನಗೆ ಕಷ್ಟದ ಸಮಯವಾಗಿತ್ತು ಎಂದು ಹೇಳಿದ್ದಾರೆ.

    ಸಂಘಟನೆಯೊಂದು ಆಯೋಜಿಸಿದ್ದ ಪ್ರತಿಭಟನಾ ವೇಳೆ ಎಕ್ತಾ ಮತ್ತು ರವಿಶೇಖರ್​ ದಂಪತಿಯನ್ನು ಯುಪಿ ಪೊಲೀಸರು ಡಿಸೆಂಬರ್​ 19ರಂದು ಬಂಧಿಸಿದ್ದರು. ದಂಪತಿ ಜೈಲಿನಲ್ಲಿದ್ದ ವೇಳೆ ಮಗುವನ್ನು ಸಂಬಂಧಿಕರು ನೋಡಿಕೊಳ್ಳುತ್ತಿದ್ದರು. (ಏಜೆನ್ಸೀಸ್​)

    ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಜೈಲು ಪಾಲಾದ ದಂಪತಿ: ಪಾಲಕರಿಲ್ಲದೆ ಅಳುತ್ತಿರುವ 14 ತಿಂಗಳ ಹೆಣ್ಣು ಮಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts