More

  ಜನರ ಮುಂದೆ ಕಾಂಗ್ರೆಸ್ ಸಂಸ್ಕೃತಿ ಅನಾವರಣ

  ಕೊಪ್ಪ: ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆಲುವಿನ ಸಂಭ್ರಮದ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಂಡಿಸಿ ಬಿಜೆಪಿ ಮಂಡಲದಿಂದ ಬುಧವಾರ ಕೊಪ್ಪ ಬಸ್‌ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
  ಬಿಜೆಪಿ ಮುಖಂಡ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಕಾಂಗ್ರೆಸ್ ಗೆದ್ದ ಎಲ್ಲ ಸಮಯದಲ್ಲೂ ಪಾಕಿಸ್ತಾನದ ಪರ ಘೋಷಣೆಗಳ ಕೇಳಿ ಬರುತ್ತಿದ್ದು, ಇದು ಕಾಂಗ್ರೆಸ್ ಸಂಸ್ಕೃತಿಯನ್ನು ದೇಶದ ಜನರ ಮುಂದೆ ಅನಾವರಣಗೊಳಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ವೇಳೆಯಲ್ಲಿ ದೇಶ ವಿರೋಧಿಗಳು ಹೆಚ್ಚಾಗುತ್ತಾರೆ. ನಾವು ಪವಿತ್ರ ಸ್ಥಾನದಲ್ಲಿ ನೋಡುವ ವಿಧಾನಸೌಧದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕ್ರಮ ಜರುಗಿಸಬೇಕು. ನಾಸೀರ್ ಹುಸೇನ್ ಸ್ಥಾನ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
  ತಾಲೂಕು ಪ್ರಧಾನ ಕಾರ್ಯದರ್ಶಿ ಅರುಣ್ ಶಿವಪುರ, ಬಿಷೇಜ್ ಭಟ್, ದಿವಾಕರ್ ಭಟ್, ಕಿರಣ್, ರೇವಂತ್‌ಗೌಡ, ರೇಖಾ, ಶೃತಿ ರೋಹಿತ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts