More

    ವಿವಾಹ ವಾರ್ಷಿಕೋತ್ಸವ ಮುನ್ನ ವಿಂಬಲ್ಡನ್ ಪ್ರಶಸ್ತಿ ಗೆದ್ದ ಜೆಕ್ ತಾರೆ

    ಲಂಡನ್: ಕಳೆದ ಬಾರಿಯ ವಿಂಬಲ್ಡನ್ ಟೂರ್ನಿಯ ಗ್ಯಾಲರಿಯಲ್ಲಿ ಕುಳಿತು ತನ್ನ ಗೆಳತಿಗೆ ಬೆಂಬಲ ಸೂಚಿಸಿದ್ದ, 24 ವರ್ಷದ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ 2023ರಲ್ಲಿ ಅದೇ ಟೂರ್ನಿಯ ಮಹಿಳಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜತೆಗೆ ಸ್ಟೆಪನ್ ಸಿಮೆಕ್ ಅವರೊಂದಿಗ ವೈವಾಹಿಕ ಬದುಕಿಗೆ ಕಾಲಿಟ್ಟು ಜುಲೈ 16ಕ್ಕೆ ಒಂದು ವರ್ಷ ಪೂರೈಸಲಿದ್ದು, ಈ ಗೆಲುವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.

    2022ರಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿ ಎರಡು ಬಾರಿ ಶಸ ಚಿಕಿತ್ಸೆಗೆ ಒಳಗಾಗಿದ್ದ ವೊಂಡ್ರೊಸೊವಾ, ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ ಓನ್ಸ್ ಜಬೇರ್ ವಿರುದ್ದ 6-4, 6-4 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ.

    ಟೂರ್ನಿಯ ಆರನೇ ಶ್ರೇಯಾಂಕಿತೆ ಓನ್ಸ್ ಜಬೇರ್ ಎದುರು ಎರಡೂ ಸೆಟ್‌ನಲ್ಲಿ ಹಿನ್ನಡೆ ಕಂಡಿದ್ದ ಎಡಗೈ ಆಟಗಾರ್ತಿ ವೊಂಡ್ರೊಸೊವಾ, ಪುಟಿದೇಳುವ ಮೂಲಕ 1 ಗಂಟೆ 20 ನಿಮಿಷದಲ್ಲಿ ಗೆಲುವು ಒಲಿಸಿಕೊಂಡರು. ಇದೇ ಮೊದಲ ಬಾರಿಗೆ ಹಸಿರು ಅಂಕಣದಲ್ಲಿ ಪ್ರಶಸ್ತಿ ಸುತ್ತಿಗೇರಿದ ವೊಂಡ್ರೊಸೊವಾ ವೃತ್ತಿ ಜೀವನದ ಮೊದಲ ಗ್ರಾಂಡ್ ಸ್ಲಾಂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 1993ರ ನಂತರ ಗ್ರಾಂಡ್ ಸ್ಲಾಂ ಗೆದ್ದ ಜೆಕ್‌ನ ಮೊದಲ ಆಟಗಾರ್ತಿ ಎನಿಸಿದರು. 2019ರ ್ರೆಂಚ್ ಗ್ರಾಂಡ್ ಸ್ಲಾಂ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು.ಸ್ವೀಡನ್‌ನ ಗೆಳತಿ ಮಿರ್ಜಾಮ್ ಜೋರ್ಕ್ಲಂಡ್‌ಗೆ ಬೆಂಬಲಿಸಲು 2022ರಲ್ಲಿ ವೊಂಡ್ರೊಸೊವಾ ವಿಂಬಲ್ಡನ್ ಟೂರ್ನಿ ವೀಕ್ಷಿಸಿದ್ದರು.

    2022ರಲ್ಲಿ ಎಲೆನಾ ರೈಬಕಿನಾ ಎದುರು ೈನಲ್‌ನಲ್ಲಿ ಸೋಲು ಅನುಭವಿಸಿದ್ದ ಟುನೀಷಿಯಾದ ಓನ್ಸ್ ಜಬೇರ್ ಸತತ ಎರಡನೇ ಬಾರಿಗೆ ರನ್ನರ್ ಅಪ್‌ಗೆ ತೃಪ್ತಿಪಟ್ಟಿದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts