More

    ಅನ್​ಲಾಕ್​-2ಹಂತದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು; ಜು.6ರಿಂದ ಐತಿಹಾಸಿಕ ಸ್ಮಾರಕ ತಾಣಗಳು ಓಪನ್​

    ನವದೆಹಲಿ: ದೇಶದಲ್ಲಿ ಅನ್​​ಲಾಕ್-2 ನಡೆಯುತ್ತಿದ್ದು, ಈ ಹಂತದಲ್ಲಿ ಕೇಂದ್ರಸರ್ಕಾರ ಪ್ರವಾಸೋದ್ಯಮ ಇಲಾಖೆಯ ಉತ್ತೇಜನಕ್ಕೆ ಮುಂದಾಗಿದೆ.

    ಕರೊನಾ ವೈರಸ್​ ಕಾರಣದಿಂದ ದೇಶದ ಎಲ್ಲ ಧಾರ್ಮಿಕ, ಐತಿಹಾಸಿಕ ಪ್ರವಾಸಿ ಸ್ಥಳಗಳೂ ಬಂದ್ ಆಗಿದ್ದವು. ಈಗಾಗಲೇ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅನ್​​ಲಾಕ್​-1ನೇ ಹಂತದಲ್ಲಿ ಕೇಂದ್ರ ಅವಕಾಶ ನೀಡಿದ್ದು, ಇದೀಗ ಜು.6ರಿಂದ ದೇಶದ ಎಲ್ಲ ಐತಿಹಾಸಿಕ ಸ್ಮಾರಕ ತಾಣಗಳೂ ಸಹ ಪ್ರವಾಸಿಗರಿಗೆ ಮುಕ್ತವಾಗಲಿವೆ.

    ಜು.6ರಿಂದ ದೇಶದ ಎಲ್ಲ ಕಡೆಗಳಲ್ಲೂ ಇಷ್ಟು ದಿನ ಬಂದ್​ ಆಗಿದ್ದ ಐತಿಹಾಸಿಕ ಸ್ಮಾರಕ ತಾಣಗಳು ಮತ್ತೆ ತೆರೆಯಲಿವೆ. ಕರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಮಂತ್ರಿ ಪ್ರಲ್ಹಾದ್​ ಸಿಂಗ್​ ಪಟೇಲ್​ ತಿಳಿಸಿದ್ದಾರೆ. ಇದನ್ನೂ ಓದಿ:ನಾಯಿ ಮರಿಯನ್ನು ಹೊತ್ತೊಯ್ಯುತ್ತಿದ್ದ ಚಿರತೆ ಮೇಲೆ ಬೀದಿ ನಾಯಿಗಳ ದಾಳಿ; ಮರಿ ಬಿಟ್ಟು ಓಡಿದ ಚಿರತೆ

    ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿರುವ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯುವದಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ಧಾರ, ಕ್ರಮ ಕೈಗೊಳ್ಳಲಿವೆ ಎಂದೂ ಅವರು ಹೇಳಿದ್ದಾರೆ.

    ಕರೊನಾದಿಂದಾಗಿ ತಾಜ್​ಮಹಲ್​, ಕೆಂಪು ಕೋಟೆ ಸೇರಿ ಅನೇಕ ಪ್ರವಾಸಿ ತಾಣಗಳು ಗೇಟ್ ಬಂದ್ ಮಾಡಿದ್ದವು. ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಈ ಪ್ರದೇಶಗಳಿಗೆ ಇನ್ನು ಮುಂದೆ ಜನರು ಆಗಮಿಸಬಹುದು. ಆದರೆ ಆಯಾ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಕರೊನಾ ನಿಯಂತ್ರಣದ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಹಾಗೇ ಜು.4ರಿಂದ ದೆಹಲಿಯ ಜಾಮಾ ಮಸೀದಿ ಕೂಡ ತೆರೆಯಲಿದೆ. (ಏಜೆನ್ಸೀಸ್​)

    ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts