More

    ಜೀ಼ ಕನ್ನಡದಲ್ಲಿ ಅನ್​ಲಿಮಿಟೆಡ್ ಮನರಂಜನೆ

    ಕರೊನಾ ಮಹಾಮಾರಿಯ ಹಾವಳಿಯಿಂದ ಲಾಕ್​ಡೌನ್ ಹೆಸರಲ್ಲಿ ಇಡೀ ರಾಜ್ಯವೇ ಸ್ಥಬ್ಧವಾಗಿದೆ. ಎಲ್ಲರ ಮನಸಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜೀ಼ ಕನ್ನಡ ವಾಹಿನಿ ಅನಿಯಮಿತ ಮನರಂಜನೆಯ ನೀಡಲು ಸಜ್ಜಾಗಿದೆ. ಅನ್​ಲಿಮಿಟೆಡ್ ಮನರಂಜನೆ ಎನ್ನುವ ಪರಿಕಲ್ಪನೆಯ ಮೂಲಕ ಭರಪೂರ ಮನರಂಜನೆ ನೀಡಲು ಜೀ಼ ಕನ್ನಡ ವಾಹಿನಿ ಸಿದ್ಧವಾಗಿದ್ದು, ಸೋಮವಾರದಿಂದ – ಶನಿವಾರದವರೆಗೆ ಎಲ್ಲ ಧಾರಾವಾಹಿಗಳು ರಂಜಿಸಲಿವೆ.

    ರಿಷಬ್ ಹೀರೋ ಆಗಮನ: ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗುತ್ತಿದೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸಿನಿಪ್ರಿಯರಿಂದ ಮೆಚ್ಚುಗೆ ಪಡೆದ ಈ ಚಿತ್ರ ಭಾನುವಾರ ರಾತ್ರಿ 7ಕ್ಕೆ ಜೀ಼ ಕನ್ನಡ ಹಾಗೂ ಜೀ಼ ಕನ್ನಡ ಹೆಚ್​ಡಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    ಮಧ್ಯಾಹ್ನ ಮನೆಗೆ ಬರ್ತಾಳೆ ಸೊಸೆ: ಮಧ್ಯಾಹ್ನ ಮನೆ ಮಂದಿಗೆಲ್ಲ ಮನರಂಜನೆ ನೀಡುವುದಕ್ಕೆ ‘ಸೊಸೆ ನಂಬರ್ 1’ ಧಾರಾವಾಹಿ ಪ್ರಸಾರವಾಗಲಿದೆ. ಎಲ್ಲದರಲ್ಲೂ ನಂಬರ್ 1 ಆಗಿರಬೇಕು ಎನ್ನುವ ಶ್ರೀಮಂತ ಮನೆತನದ ಯಜಮಾನಿ ವಾಗ್ದೇವಿಯ ಮನೆಗೆ ಅನಕ್ಷರಸ್ಥ ಹುಡುಗಿ ಸೊಸೆಯಾಗಿ ಬರುವ ರೋಚಕ ತಿರುವುಗಳ ಈ ಧಾರಾವಾಹಿ ಮೇ 10 ರಿಂದ ಮಧ್ಯಾಹ್ನ 1 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts