More

    ಟಿವಿ ರೀಪೋರ್ಟರ್ ಎಂದು ಹೆದರಿಸಿ ಹಣ ವಸೂಲಿ; ಮೂವರ ವಿರುದ್ಧ ಎಫ್‌ಐಆರ್

    ಹಾವೇರಿ: ಟಿವಿ ರೀಪೋರ್ಟರ್ ಎಂದು ಹೇಳಿಕೊಂಡು ನರ್ಸ್‌ವೊಬ್ಬರಿಂದ 70 ಸಾವಿರ ರೂ. ವಸೂಲಿ ಮಾಡಿದ ಮೂವರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
    ರಾಣೆಬೆನ್ನೂರ ತಾಲೂಕು ಅಸುಂಡಿ ಗ್ರಾಮದ ರುದ್ರಗೌಡ ಪಾಟೀಲ ಹಾಗೂ ಇನ್ನೂ ಇಬ್ಬರು ಹಣ ವಸೂಲಿ ಮಾಡಿದ ಆರೋಪಿಗಳು.
    ಈ ಕುರಿತು ತಾಲೂಕಿನ ಕಬ್ಬೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಸಾವಿತ್ರಿ ಪಟಗಾರ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೂವರು ಆರೋಪಿಗಳು ನಾವು ಜನಸ್ಪಂದನಾ ವಾಹಿನಿ ಸಂಪಾದಕರು ಹಾಗೂ ರೀಪೋರ್ಟರ್ ಇದ್ದೇವೆ. ನಿಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಮ್ಮ ಮೇಲೆ ಬಹಳಷ್ಟು ಕಂಪ್ಲೇಟ್ ಬಂದಿವೆ. ನಾವು ಮೀಡಿಯಾದವರು ನಿಮ್ಮ ಮೇಲಿನ ಕಂಪ್ಲೇಟ್‌ಅನ್ನು ಕ್ಲೋಸ್ ಮಾಡಲು 2 ಲಕ್ಷ ರೂ. ಹಣ ಕೊಡಬೇಕು. ಇಲ್ಲವಾದರೆ ಟಿವಿಯಲ್ಲಿ ನಿಮ್ಮ ಮೇಲೆ ಇದ್ದ ಪ್ರಕರಣಗಳ ಬಗ್ಗೆ ಬರುತ್ತದೆ ಎಂದು ಹೆದರಿಸಿದ್ದಾರೆ. ನನ್ನ ಮಗನ ಫೋನ್ ಪೇ ಮೂಲಕ ಇವರ ನಂಬರ್‌ಗೆ 70 ಸಾವಿರ ರೂ. ಹಾಕಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts