More

    ಮಹಾಜನ ಕಾಲೇಜು ತಂಡ ಟೀಂ ಚಾಂಪಿಯನ್

    ಅಂತರ ಕಾಲೇಜು ಗುಂಪು ಸ್ಪರ್ಧೆಗಳ ಕ್ರೀಡಾಕೂಟ


    ಮೈಸೂರು:
    ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಂತರ ವಲಯ ಪುರುಷರ ವಿವಿಧ ಗುಂಪು ಸ್ಪರ್ಧೆಗಳ ಕ್ರೀಡಾಕೂಟದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡ ‘ಟೀಂ ಚಾಂಪಿಯನ್’ ಪಟ್ಟ ತನ್ನದಾಗಿಸಿಕೊಂಡಿತು.
    ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಒಟ್ಟು 28 ಅಂಕಗಳೊಂದಿಗೆ ‘ಮಹಾಜನ ತಂಡ ಸಮಗ್ರ’ ಪ್ರಶಸ್ತಿ ಪಡೆಯಿತು.


    ಫಲಿತಾಂಶ: ಬಾಸ್ಕೆಟ್‌ಬಾಲ್‌ನಲ್ಲಿ ಮೈಕಾ (ಪ್ರಥಮ), ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡ (ದ್ವಿತೀಯ), ಮಂಡ್ಯದ ಪಿಇಎಸ್ ತಂಡ (ತೃತೀಯ) ಬಹುಮಾನ ಪಡೆಯಿತು. ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪಿಜಿಎಸ್‌ಸಿ ಮಾನಸಗಂಗೋತ್ರಿ (ಪ್ರ), ಹಾಸನದ ಬಿಇಎಸ್‌ಟಿ ಪ್ರಥಮ ದರ್ಜೆ ಕಾಲೇಜು (ದ್ವಿ), ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು (ತೃ), ಚೆಸ್ ಪಂದ್ಯಾವಳಿಯಲ್ಲಿ ಮಹಾಜನ ಕಾಲೇಜು (ಪ್ರ), ಯುವರಾಜ ಕಾಲೇಜು (ದ್ವಿ), ಕೆ.ಆರ್.ನಗರದ ಪ್ರಥಮ ದರ್ಜೆ ಕಾಲೇಜು(ತೃ.), ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಾರಾಜ ಕಾಲೇಜು (ಪ್ರ), ಹಾಸನದ ಎಚ್‌ಆರ್‌ಐಎಚ್‌ಇ ಎಂಎಫ್‌ಜಿಸಿ ತಂಡ (ದ್ವಿ), ಮಂಡ್ಯದ ಪಿಇಎಸ್ (ತೃ).
    ಫುಟ್ಪಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಸೇಪಿಯೆಂಟ್ ಕಾಲೇಜು(ಪ್ರ), ಮಹಾಜನ ಕಾಲೇಜು (ದ್ವಿ), ಮಂಡ್ಯದ ಪಿಇಎಸ್ (ತೃ), ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಸೇಂಟ್ ಜೋಸೆಫ್ ತಂಡ (ಪ್ರ), ಮಂಡ್ಯದ ಪಿಇಎಸ್ (ದ್ವಿ), ಮೈಸೂರಿನ ಎಂಐಟಿ ಪ್ರಥಮ ದರ್ಜೆ ಕಾಲೇಜು ತಂಡ(ತೃ), ಹಾಕಿ ಪಂದ್ಯಾವಳಿಯಲ್ಲಿ ಮೈಸೂರಿನ ಸೇಂಟ್ ಫಿಲೋಮಿನಾ ತಂಡ (ಪ್ರ), ಮೈಸೂರಿನ ಸೇಂಟ್ ಜೋಸೆಫ್ ತಂಡ(ದ್ವಿ), ಬೆಳಗೊಳದ ಡಿಪೌಲ್ ತಂಡ(ತೃ).
    ಖೋ ಖೋ ಪಂದ್ಯಾವಳಿಯಲ್ಲಿ ಮಹಾರಾಜ ಕಾಲೇಜು ತಂಡ (ಪ್ರ), ತಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ(ದ್ವಿ), ಹುಣಸೂರು ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ (ತೃ), ಸಾಫ್ಟ್‌ಬಾಲ್ ಪಂದ್ಯಾವಳಿಯಲ್ಲಿ ಮಹಾಜನ ಕಾಲೇಜು (ಪ್ರ), ಮೈಸೂರಿನ ಮೈಕಾ ತಂಡ(ದ್ವಿ), ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಮಹಾಜನ ಕಾಲೇಜು(ಪ್ರ), ಮೈಸೂರಿನ ಸೇಪಿಯೆಂಟ್ ತಂಡ(ದ್ವಿ), ಮಂಡ್ಯದ ಪಿಇಎಸ್ ಕಾಲೇಜು ತಂಡ (ತೃ).
    ಥ್ರೋಬಾಲ್ ಪಂದ್ಯಾವಳಿಯಲ್ಲಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ(ಪ್ರ), ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು (ದ್ವಿ), ಯುವರಾಜ ಕಾಲೇಜು (ತೃ), ವಾಲಿಬಾಲ್ ಪಂದ್ಯಾವಳಿಯಲ್ಲಿ ಪಿಜಿಎಸ್‌ಇ ಮಾನಸಗಂಗೋತ್ರಿ (ಪ್ರ), ಮಹಾಜನ ಕಾಲೇಜು (ದ್ವಿ), ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ತೃ) ಬಹುಮಾನ ಪಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts