More

    ‘ಯುನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಸಿಗಲಿದೆ ಹೆಚ್ಚಿನ ಅವಕಾಶ..!

    ನವದೆಹಲಿ: ‘ಯುನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಎಲ್ಲರ ನೆಚ್ಚಿನ ಆಟಗಾರ. ಆರ್‌ಸಿಬಿ ತಂಡದಲ್ಲಿದ್ದಾಗ ಗೇಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸಿಲಿಕಾನ್ ಸಿಟಿ ಮಂದಿ ಮನಗೆದ್ದಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ವರ್ಗವಾಗಿದ್ದರೂ ಈಗಲೂ ಅದೇ ಛಾಪು ಉಳಿಸಿಕೊಂಡಿದ್ದಾರೆ ಗೇಲ್. ಈ ಬಾರಿ ಲೀಗ್‌ನ ಆರಂಭಿಕ ಪಂದ್ಯಗಳಿಗೆ ಗೇಲ್ ಅವರನ್ನು ಕಣಕ್ಕಿಳಿಸದೆ ಪಂಜಾಬ್ ಕೈಸುಟ್ಟುಕೊಂಡಿತ್ತು. ಇದರಿಂದ ಪಾಠ ಕಲಿತಿರುವ ಪಂಜಾಬ್ ತಂಡ ಮುಂದಿನ ಆವೃತ್ತಿಯಲ್ಲಿ ಮೊದಲ ಪಂದ್ಯದಿಂದಲೇ ಅವರ ಸೇವೆ ಬಳಸಿಕೊಳ್ಳುವುದಾಗಿ ಹೇಳಿಕೊಂಡಿದೆ. ತಂಡದ ಸಹ-ಮಾಲಿಕ ನೆಸ್ ವಾಡಿಯಾ ಈ ಕುರಿತು ಹೇಳಿಕೊಂಡಿದ್ದಾರೆ.

    ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮುಂದಿನ ವರ್ಷದ ಐಪಿಎಲ್‌ನಲ್ಲಿ ತಂಡದ ಮೊದಲ ಪಂದ್ಯದಿಂದಲೇ ಆಡಲಿದ್ದಾರೆ ಎಂದು ವಾಡಿಯಾ ಹೇಳಿದ್ದಾರೆ. ಪ್ರಸಕ್ತ ವರ್ಷದ ಲೀಗ್‌ನ ಆರಂಭಿಕ 5 ಪಂದ್ಯಗಳಿಗೆ ಗೇಲ್ ಅವರನ್ನು ಕಡೆಗಣಿಸಲಾಗಿತ್ತು. ಬಳಿಕ ಕಲುಷಿತ ಅಹಾರ ಸೇವನೆಯಿಂದಾಗಿ 2 ಪಂದ್ಯಗಳಿಂದ ಹೊರಗುಳಿದಿದ್ದರು.

    ಪ್ರಸಕ್ತ ಗೇಲ್ 7 ಪಂದ್ಯಗಳಲ್ಲಿ ಗರಿಷ್ಠ 99 ರನ್ ಸೇರಿದಂತೆ ಒಟ್ಟು 288 ರನ್ ಕಲೆಹಾಕಿದ್ದರು. ಗೇಲ್‌ರಂಥ ಅನುಭವಿ ಬ್ಯಾಟ್ಸ್‌ಮನ್ ಸೇವೆಯನ್ನು ತಂಡ ಪಡೆದುಕೊಳ್ಳಬೇಕು. ಮುಂದಿನ ಆವೃತ್ತಿಯ ಎಲ್ಲ ಪಂದ್ಯಗಳಲ್ಲೂ ಅವರು ಆಡಲಿದ್ದಾರೆ ಎಂದು ವಾಡಿಯಾ ಹೇಳಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸಾವಿರ ಸಿಕ್ಸರ್ ಸಿಡಿಸಿರುವ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts