More

    ಪಾಲಕರ ಮುಂದೆಯೇ ಮಹಿಳೆಯರ ಗ್ಯಾಂಗ್​ರೇಪ್​, ಪುರುಷರಿಂದಲೇ ಕುಟುಂಬಸ್ಥರ ಅತ್ಯಾಚಾರ: ವಿಶ್ವವೇ ಬೆಚ್ಚಿಬೀಳಿಸೋ ಘಟನೆ!

    ಅಡಿಸ್ ಅಬಾಬ: ಇಥಿಯೋಪಿಯದ ಟೈಗ್ರೇ ವಲಯದಲ್ಲಿ ಹೆಚ್ಚುತ್ತಿರುವ ಭಯಾನಕ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಎಚ್ಚರಿಕೆ ಸಹ ನೀಡಿದೆ.

    ಗನ್​ ಪಾಯಿಂಟ್​ನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕುಟುಂಬಸ್ಥರನ್ನೇ ಅತ್ಯಾಚಾರ ಮಾಡುವಂತೆ ಪುರುಷರನ್ನು ಬಲವಂತ ಮಾಡುವುದು ಸೇರಿದಂತೆ ಬೆದರಿಕೆಯೊಡ್ಡುವಂತಹ ಹೇಯ ಕೃತ್ಯಗಳು ಇಥಿಯೋಪಿಯದ ಟೈಗ್ರೇ ವಲಯದಲ್ಲಿ ಮಿತಿಮೀರಿದ್ದು, ಭೂಲೋಕದ ನರಕವಾಗಿದೆ.

    ಇಥಿಯೋಪಿಯದ ವಿಶ್ವಸಂಸ್ಥೆ ಸಹಾಯಕ ಸಂಯೋಜಕಿಯಾದ ವಾಫಾ ಸೆಡ್​ ಮಾತನಾಡಿ, ಉತ್ತರ ರಾಜ್ಯದ 5 ಮೆಡಿಕಲ್​ ಕೇಂದ್ರಗಳಲ್ಲಿ 500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಈವರೆಗೂ ವರದಿಯಾಗಿವೆ. ಆದರೆ, ಇದು ಅಸಲಿ ಸಂಖ್ಯೆಯಲ್ಲ. ಇದಕಿಂತಲೂ ಹೆಚ್ಚಿನ ದೌರ್ಜನ್ಯಗಳು ನಡೆದಿವೆ ಎಂದಿದ್ದಾರೆ.

    ಇದನ್ನೂ ಓದಿರಿ: ಕಾಮುಕ ತಂದೆಯನ್ನು ಬರ್ಬರವಾಗಿ ಕೊಂದಿದ್ದ ಸಹೋದರಿಯರಿಗೆ ಗುಡ್​ ನ್ಯೂಸ್​ ಕೊಟ್ಟ ನ್ಯಾಯಾಲಯ!

    ಶಸ್ತ್ರಾಸ್ತ್ರ ಹಿಡಿದ ದುಷ್ಕರ್ಮಿಗಳು ನಮ್ಮ ಮೇಲೆ ಅತ್ಯಾಚಾರಗಳು ನಡೆಸಿದ್ದಾರೆ. ಕುಟುಂಬದ ಮುಂದೆಯೇ ಗ್ಯಾಂಗ್​ರೇಪ್​ ಮಾಡಲಾಗಿದೆ ಮತ್ತು ಸಂಬಂಧಿಕರನ್ನೇ ಬಲತ್ಕಾರ ಮಾಡುವಂತೆ ಪುರುಷರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ನೊಂದ ಮಹಿಳೆಯರು ತಿಳಿಸಿರುವುದಾಗಿ ವಾಫಾ ಸೆಡ್​ ಹೇಳಿದರು.

    ಕಳೆದ ವರ್ಷ ನವೆಂಬರ್‌ನಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್, ಪ್ರಾದೇಶಿಕ ನಾಯಕರ ವಿರುದ್ಧ ಸರ್ಕಾರದ ಆಕ್ರಮಣವನ್ನು ಘೋಷಿಸಿದರು. ಅಂದಿನಿಂದ ಟೈಗ್ರೇನಲ್ಲಿ ನಡೆಯುತ್ತಿರುವ ಇತ್ತೀಚಿನ ಘನ ಘೋರ ಘಟನೆಗಳ ಕಥೆಯಾಗಿದೆ.

    ನೋಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಅಹ್ಮದ್​ ಮಾತನಾಡಿ, 2012ರವರೆಗೆ ಸುಮಾರು 3 ದಶಕಗಳ ಕಾಲ ಇಥಿಯೋಪಿಯಾವನ್ನು ಆಳಿದ ಮತ್ತು ಟೈಗ್ರೇ ವಲಯವನ್ನು ನಿರಂತರ ನಿಯಂತ್ರಣಲ್ಲಿ ಇಟ್ಟುಕೊಂಡಿರುವ ಟಿಇಎಲ್​ಎಫ್​ ಪಕ್ಷವನ್ನು ಗುರಿಯಾಗಿಸಿ ಸರ್ಕಾರ ಆಕ್ರಮಣ ನಡೆಸಲಾಗುವುದು ಎಂದು ಅಹ್ಮದ್​ ಹೇಳಿಕೆ ನೀಡಿದ್ದು, ಎಲ್ಲವನ್ನು ಸಂಯುಕ್ತ ರಾಷ್ಟ್ರಗಳ ಅಡಿ ತೆಗೆದುಕೊಂಡು ಬರುವ ಪ್ರಯತ್ನ ಎಂಬುದನ್ನು ನಿರಾಕರಿಸಿದರು.

    ಆದರೆ, ಈ ದಾಳಿಗೆ ನೆರೆಯ ಎರಿಟ್ರಿಯಾದ ಸೈನಿಕರನ್ನು ಎಳೆದೊಯ್ಯುವ ಮೂಲಕ ಜನಾಂಗೀಯ ಹಿಂಸಾಚಾರದ ಅಲೆ ಹುಟ್ಟಿಕೊಳ್ಳಲು ಕಾರಣವಾಗಿದೆ. ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗಿದ್ದು, ನೂರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಆಹಾರವಿಲ್ಲದೆ ಉಳಿದಿದ್ದಾರೆ. ಆಂತರಿಕವಾಗಿ ಸ್ಥಳಾಂತರಗೊಂಡ ಹೆಚ್ಚಿನ ಜನರು ತಾವು ಧರಿಸಿದ್ದ ಬಟ್ಟೆಗಳಿಗಿಂತ ಹೆಚ್ಚೇನೂ ಉಳಿದಿಲ್ಲ ಎಂದು ವಾಫಾ ಸೆಡ್​ ವಿಶ್ವಸಂಸ್ಥೆಗೆ ಗುರುವಾರ ತಿಳಿಸಿದರು.

    ಇದನ್ನೂ ಓದಿರಿ: ಅಕ್ರಮ ಸಂಬಂಧಕ್ಕೆ ತಿರುಗಿದ ಮದುವೆ ಸಮಾರಂಭದಲ್ಲಿನ ಪರಿಚಯ: ಎರಡೇ ವರ್ಷದಲ್ಲಿ ನಡೆಯಿತು ಹೀನ ಕೃತ್ಯ

    ಜನರು ತುಂಬಾ ಆಘಾತಕ್ಕೆ ಒಳಗಾಗಿದ್ದಾರೆ ಮತ್ತು ಸುರಕ್ಷತೆಗಾಗಿ ಅವರು ಕೈಗೊಂಡ ಕಠಿಣ ಪ್ರಯಾಣದ ಕತೆಗಳನ್ನು ಸಹ ಹೇಳಿದ್ದಾರೆ. ಕೆಲವರು ಎರಡು ವಾರಗಳ ಕಾಲ ನಡೆದಿದ್ದಾರೆ ಮತ್ತು ಇನ್ನು ಕೆಲವರು 300 ಮೈಲಿಗಳ ದೂರ ನಡೆದಿದ್ದಾರೆ ಎಂದು ವಾಫಾ ಸೆಡ್​ ಗುರುವಾರ ಹೇಳಿದರು.

    ಎರಿಟ್ರಿಯಾ ಸೈನಿಕರೊಂದಿಗೆ ಪ್ರಯಾಣ ಮಾಡಿದ ಜನರಲ್ಲಿ ಅವರು ನಿರ್ಧಿಷ್ಟವಾಗಿ ಯುವಕರನ್ನು ಕೊಂದಿದ್ದಾರೆ. ಜನರನ್ನು ನಿರಂತರವಾಗಿ ಥಳಿಸಿದ್ದಾರೆ. ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಇದರಿಂದ ಕೆಲವರು ಗರ್ಭವನ್ನು ಧರಿಸಿದ್ದು, ಶಿಶುಗಳನ್ನು ಕಳೆದುಕೊಳ್ಳುವಂತಹ ದಾರಿಯಲ್ಲಿ ಅವರನ್ನು ಸಾಗಿಸಲಾಗಿದೆ ಎಂದು ವಾಫಾ ಆರೋಪಿಸಿದರು.

    ಈ ದೌರ್ಜನ್ಯ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದರೆ, ಇದೇ ವೇಳೆ ಇದು ಯುಎಸ್​ ರಾಜ್ಯ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್​ ಮಾತನಾಡಿ ಜನಾಂಗೀಯ ಶುದ್ಧೀಕರಣ ಮಾಡಲು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಿದ್ದಾರೆ.

    ಬ್ಲಿಂಕನ್​ ಆರೋಪ ತಿರಸ್ಕರಿಸಿದ ಇಥಿಯೋಪಿಯ
    ದೌರ್ಜನ್ಯಗಳು ನಡೆದಿರುವುದಾಗಿ ಮೊದಲ ಬಾರಿಕೆ ಈ ವಾರ ಒಪ್ಪಿಕೊಂಡಿರುವ ಪ್ರಧಾನಿ ಅಹ್ಮದ್​, ಅಪರಾಧ ಎಸಗಿರುವ ಯಾವುದೇ ಸೈನಿಕರಿಗೆ ಶಿಕ್ಷೆ ನೀಡಲಾಗುವುದು ಎಂದಿದ್ದಾರೆ. ಆದರೆ, ಕೆಲವು ಕೆಟ್ಟ ದೌರ್ಜನ್ಯಗಳನ್ನು ಎರಿಟ್ರಿಯಾ ಸೈನಿಕರ ತಲೆಗೆ ಕಟ್ಟಲಾಗಿದೆ ಎನ್ನುವ ಮೂಲಕ ಆರೋಪವನ್ನು ಅಲ್ಲಗೆಳೆದರು.

    ಇದನ್ನೂ ಓದಿರಿ: ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಟೈಗ್ರೇಯಲ್ಲಿರುವ ಡಜನ್​ಗಟ್ಟಲೆ ಪ್ರತ್ಯಕ್ಷದರ್ಶಿಗಳು ಎರಿಟ್ರಿಯಾ ಸೈನಿಕರ ದೌರ್ಜನ್ಯವನ್ನು ರಾಯಿಟರ್ಸ್​ ಮುಂದೆ ಬಿಚ್ಚಿಟ್ಟಿದ್ದಾರೆ. ನಾಗರಿಕರನ್ನು ನಿರಂತರವಾಗಿ ಕೊಂದಿದ್ದು, ಗ್ಯಾಂಗ್​ರೇಪ್​ ಮತ್ತು ಮಹಿಳೆಯರಿಗೆ ಕಿರುಕುಳ ಹಾಗೂ ಮನೆಗೆ ನುಗ್ಗಿ ದರೋಡೆ ಮಾಡಿ ಮೃಗೀಯವಾಗಿ ವರ್ತಿಸಿದ್ದಾರೆಂದು ಆರೋಪಿಸಿದ್ದಾರೆ.

    ಆದರೆ, ದೌರ್ಜನ್ಯದ ವರದಿಗಳ ಪ್ರಶ್ನೆಗಳಿಗೆ ಎರಿಟ್ರಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಪ್ರಧಾನಿ ಅಹ್ಮದ್​ ಬಹಿರಂಗವಾಗಿ ಒಪ್ಪಿಕೊಂಡ ಕೆಲವು ದಿನಗಳ ಬೆನ್ನಲ್ಲೇ ಟೈಗ್ರೇ ವಲಯವನ್ನು ತೊರೆಯಲು ಎರಿಟ್ರಿಯಾ ಸೈನಿಕರ ಒಪ್ಪಿಕೊಂಡಿದ್ದಾರೆಂದು ಶುಕ್ರವಾರ ಅಹ್ಮದ್​ ಘೋಷಣೆ ಮಾಡಿದರು. ಇಥಿಯೋಪಿಯ ಗಡಿಯಿಂದ ತಮ್ಮ ಸೈನಿಕರನ್ನು ಹಿಂತೆಗೆದುಕೊಳ್ಳಲು ಎರಿಟ್ರಿಯಾ ಒಪ್ಪಿಕೊಂಡಿದೆ ಎಂದು ಹೇಳಿದರು.

    ಗಡಿ ಪ್ರದೇಶದ ಕಾವಲುಗಾರಿಕೆಯನ್ನು ಇಥಿಯೋಪಿಯನ್ ರಾಷ್ಟ್ರೀಯ ರಕ್ಷಣಾ ಪಡೆ ತಕ್ಷಣವೇ ಜಾರಿಗೊಳಿಸಲಿದೆ ಎಂದು ಪ್ರಧಾನಿ ಅಬಿ ಅಹ್ಮದ್​ ಹೇಳಿದರು. (ಏಜೆನ್ಸೀಸ್​)

    ಬಿಜೆಪಿ ಸಂಸದೆ ಮೇಲೆ ವಿಷಕಾರಿ ಬಣ್ಣ ಎರಚಿದ ಟಿಎಂಸಿ! ಸೋಲುವ ಭಯದಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದ ಬಿಜೆಪಿ

    VIDEO| ತಮಿಳುನಾಡಿನಲ್ಲಿ ಸ್ಮೃತಿ ಇರಾನಿಯ ದಾಂಡಿಯಾ; ಚುನಾವಣಾ ಪ್ರಚಾರದಲ್ಲಿ ಹೆಜ್ಜೆ ಹಾಕಿದ ಸಚಿವೆ

    VIDEO| ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳು: ಐಪಿಎಸ್​ ಅಧಿಕಾರಿ ಅಚ್ಚರಿ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts