More

    ಲಾಕ್‌ಡೌನ್ ಅವಧಿಯಲ್ಲಿ ಶುಚಿತ್ವ ವಸ್ತುಗಳ ಸಾಗಾಟಕ್ಕೂ ಅನುಮತಿ ನೀಡಿದ ಕೇಂದ್ರ ಸರ್ಕಾರ

    ನವದೆಹಲಿ: ಕೋವಿಡ್ 19 ಸೋಂಕಿನ ಮೂರನೇ ಹಂತರ ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಲಾಕ್‌ಡೌನ್ ೋಷಿಸಿದೆ. ಏ.14ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರವೇ ಅನುಮತಿ ನೀಡಲಾಗಿತ್ತು. ಇದೀಗ ಶುಚಿತ್ವದ ವಸ್ತುಗಳು ಸೇರಿ ಹೆಚ್ಚಿನ ಮಹತ್ವದ್ದಲ್ಲದ (ನಾನ್ ಎಸೆನ್ಶಿಯಲ್) ವಸ್ತುಗಳ ಸಾಗಾಟಕ್ಕೂ ಅನುಮತಿ ನೀಡಿ ಆದೇಶಿಸಿದೆ.

    ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ, ಹಾಲು, ಹೈನುಗಾರಿಕೆ ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್ ಮೆಟೀರಿಯಲ್‌ಗಳನ್ನು ಕೂಡ ಲಾಕ್‌ಡೌನ್ ಅವಧಿಯಲ್ಲಿ ಮುಕ್ತವಾಗಿ ಸಾಗಿಸಬಹುದಾಗಿದೆ. ಮುದ್ರಣ ಮಾಧ್ಯಮದಡಿ ಪತ್ರಿಕೆಗಳ ಸಾಗಾಟಕ್ಕೂ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಗೃಹಬಳಕೆಯ ವಸ್ತುಗಳ ಪಟ್ಟಿಯಲ್ಲಿ ಕೈತೊಳೆಯುವ ದ್ರವ ರೂಪದ ಸೋಪು, ಸೋಪು, ಕೀಟನಾಶಕಗಳು, ಶ್ಯಾಂಪೂ, ನೆಲ ಒರೆಸುವ ಮಾರ್ಜಕಗಳು, ಟಿಶ್ಯೂ ಪೇಪರ್‌ಗಳು, ಟೂಥ್‌ಪೇಸ್ಟ್, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಡೈಪರ್‌ಗಳಂಥ ಶುಚಿತ್ವದ ವಸ್ತುಗಳು, ಬ್ಯಾಟರಿ ಸೆಲ್‌ಗಳು ಮತ್ತು ಚಾರ್ಜರ್‌ಗಳಂಥ ವಸ್ತುಗಳು ಈ ಪಟ್ಟಿಯಲ್ಲಿ ಸೇರಿರುವುದಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts