More

    ಕೇಂದ್ರ ಬಜೆಟ್ 2020: ಎಲ್ಲ ಸಚಿವಾಲಯಗಳಿಂದಲೂ ಕ್ವಾಲಿಟಿ ಸ್ಟ್ಯಾಂಡರ್ಡ್ ಈ ವರ್ಷವೇ​ ಪ್ರಕಟ

    ನವದೆಹಲಿ: ಎಲ್ಲ ಸಚಿವಾಲಯಗಳೂ ಈ ವರ್ಷ ಕ್ವಾಲಿಟಿ ಸ್ಟ್ಯಾಂಡರ್ಡ್​ ಪ್ರಕಟಿಸಲಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.

    ಅವರು ಸಂಸತ್ತಿನಲ್ಲಿ ಈ ಸಲದ ಬಜೆಟ್ ಮಂಡಿಸಿದ ವೇಳೆ ಈ ವಿಚಾರ ಘೋಷಿಸಿದ್ದು, ಸರ್ಕಾರದ ಈ ನಡೆಯು ಉತ್ತಮ ಗುಣಮಟ್ಟದ ಸರಕು, ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲಿದೆ. ಅಲ್ಲದೆ, ಕಳಪೆ ಗುಣಮಟ್ಟದ ಸರಕು, ಉತ್ಪನ್ನಗಳ ರಫ್ತನ್ನು ತಡೆಯಲಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಈ ಕ್ಷೇತ್ರದ ಎಲ್ಲ ಪಾಲುದಾರರನ್ನು ಕರೆಯಿಸಿಕೊಂಡು ಸಮಯದ ಮಿತಿಯಲ್ಲಿ ಇದನ್ನು ಅಳವಡಿಸುವಂತೆ ಕೇಳಿಕೊಂಡಿದ್ದೆವು. ಟೆಕ್ನಿಕಲ್ ಸ್ಟ್ಯಾಂಡರ್ಡ್​ ಕಡ್ಡಾಯಗೊಳಿಸಿದ್ದು, ಅವುಗಳ ಪರಿಣಾಮಕಾರಿ ಅನುಷ್ಠಾನವನ್ನೂ ಖಾತರಿಗೊಳಿಸಲಾಗಿದೆ. ಎಲ್ಲ ಸಚಿವಾಲಯಗಳು ಈ ವರ್ಷದ ಅವಧಿಯಲ್ಲಿ ಕ್ವಾಲಿಟಿ ಸ್ಟ್ಯಾಂಡರ್ಡ್​ ಆದೇಶಗಳನ್ನು ಪ್ರಕಟಿಸಲಿವೆ ಎಂದು ಹೇಳಿದರು.

    ಅಂದಾಜು 5,000 ಉತ್ಪನ್ನ, ಸರಕುಗಳ ಟೆಕ್ನಿಕಲ್ ರೆಗುಲೇಷನ್​ ಅನ್ನು ಫಾರ್ಮುಲೇಟ್ ಮಾಡುವ ಗುರಿ ನಿಗದಿ ಪಡಿಸಲಾಗಿದ್ದು, ಬ್ಯೂರೋ ಆಫ್​ ಇಂಡಿಯನ್ ಸ್ಟ್ಯಾಂಡರ್ಡ್ಸ್​(ಬಿಐಎಸ್​)ಗೆ ಇದರ ಹೊಣೆಗಾರಿಕೆ ನೀಡಲಾಗಿದೆ. ಪ್ರತಿ ವರ್ಷ ಭಾರತದಿಂದ ಅಂದಾಜು 11,500 ಗೂಡ್ಸ್​ ರಫ್ತಾಗುತ್ತಿದೆ. ಇಲೆಕ್ಟ್ರಾನಿಕ್ಸ್ ಗೂಡ್ಸ್​, ಕಚ್ಚಾತೈಲ, ಚಿನ್ನ, ರಾಸಾಯನಿಕ ಗೊಬ್ಬರ, ಮಷಿನ್ ಟೂಲ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಪ್ರಾಡಕ್ಟ್ಸ್​ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಗರಿಷ್ಠ ಆಮದು ರಸೀದಿ ಕಾರಣಕ್ಕೆ ಟ್ರೇಡ್ ಡೆಫಿಸಿಟ್ ಹೆಚ್ಚಾಗುತ್ತಿದ್ದು, ಇದರಿಂದ ಚಾಲ್ತಿ ಖಾತೆ ಕೊರತೆಯೂ ಹೆಚ್ಚಾಗುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts